ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು. ಅರೆ ಇದೇನಪ್ಪಾ ಇದು ಹಳದಿ ಬಣ್ಣದ ಕಲ್ಲಂಗಡಿ. ಇದಕ್ಕೆ ಅರಿಶಿಣ ಬಣ್ಣ ಏನಾದರೂ ಮಿಕ್ಸ್ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಬಹುದು. ಹಾಗೇನಿಲ್ಲ ಇದು ಕೃಷಿ ಮತ್ತು ತೋಟಗಾರಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳ ಸಂಶೋಧನೆಯ ಫಲ.
ಮಾರುಕಟ್ಟೆಗೆ ಹಳದಿ ಕಲ್ಲಂಗಡಿಹಲವು ಆವಿಷ್ಕಾರಗಳಿಂದ ಸೃಷ್ಟಿಯಾಗಿರುವ ಕಲ್ಲಂಗಡಿ. ಈಗ ಹಳದಿ ಕಲ್ಲಂಗಡಿಯೂ ಲಭ್ಯ. ಅಷ್ಟೇ ಅಲ್ಲದೆ ಇದು ರಸಭರಿತವಾಗಿದೆ ರುಚಿಕರವಾಗಿದೆ. ಹಲವು ಪೌಷ್ಟಿಕಾಂಶಗಳನ್ನು ಸಹ ಹೊಂದಿದೆ. ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಹಳದಿ ಕಲ್ಲಂಗಡಿ ಹಣ್ಣು ಲಗ್ಗೆ ಇಟ್ಟಿದೆ. ಕೆಂಪು ಕೆಲ್ಲಂಗಡಿ ಹಣ್ಣಿಗಿಂತ ಬೆಲೆ ದುಪ್ಪಟ್ಟಾಗಿದೆ.
ಜಿಲ್ಲೆಯ ಚಿಕ್ಕಬಳ್ಳಾಪುರ ನಗರ, ಶಿಡ್ಲಘಟ್ಟ ಮಾರುಕಟ್ಟೆಗೆ ಹಳದಿ ಕಲ್ಲಂಗಡಿ ಪ್ರವೇಶಿಸಿದೆ. ಈ ಹಣ್ಣು ಮದ್ರಾಸಿನಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಇದು ಕೆಂಪು ಕಲ್ಲಂಗಡಿ ಹಣ್ಣಿಗಿಂತ ರುಚಿಯಲ್ಲಿ ಹೆಚ್ಚಾಗಿದ್ದು, ವಿಟಮಿನ್ ಎ, ವಿಟಮಿನ್ ಸಿ ಹೆಚ್ಚಾಗಿದೆ ಎನ್ನಲಾಗಿದೆ.ದುಬಾರಿ ಹಳದಿ ಕಲ್ಲಂಗಡಿ
ಇನ್ನು ಮಾರುಕಟ್ಟೆಯಲ್ಲಿ ಕೆಂಪು ಕಲ್ಲಂಗಡಿ ಹಣ್ಣು ಒಂದು ಕೆಜಿ ಬೆಲೆ 15 ರಿಂದ 25 ರುಪಾಯಿ ಇದ್ದರೆ, ಹಳದಿ ಕಲ್ಲಂಗಡಿ ಹಣ್ಣಿನ ಬೆಲೆ 50 ರಿಂದ 70 ರು.ವರೆಗೆ ಮಾರಾಟವಾಗುತ್ತಿದ್ದು, ಹಳದಿ ಕಲ್ಲಂಗಡಿ ಎಲ್ಲರ ಗಮನ ಸೆಳೆಯುತ್ತಿದೆ.