)
ದೊಡ್ಡಬಳ್ಳಾಪುರ: ಪ್ರಸಕ್ತ ಸರ್ಕಾರದ ಅವಧಿಯಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಎರಡು ಸಾವಿರ ಅಡಿ ಕೆಳಗೆ ಹೋಗಿದೆ. ನಮ್ಮ ಸರ್ಕಾರ ಎತ್ತಿನಹೊಳೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರು ತಂದೇ ತರುತ್ತೇವೆ. ಕೆರೆಗಳನ್ನು ತುಂಬಿಸುತ್ತೇವೆ. ನೀರನ್ನ ಈಗಾಗಲೇ ಹೊರಗೆ ತರುವಂತಹ ಶಕ್ತಿ ಭಗವಂತ ನನಗೆ ನೀಡಿದ್ದಾನೆ ಎಂದರು.
ಈ ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಿ ಈ ರೈತರ ಬದುಕನ್ನು ಹಸನು ಮಾಡುವ ಕೆಲಸವನ್ನ ನಾನು ಮಾಡಲಿದ್ದೇನೆ. ಹೊಸಕೋಟೆ ಕೆರೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಕೆರೆ ಸುತ್ತಮುತ್ತ ಇರುವಂತಹ ನಮ್ಮ ಕೆರೆಗಳಿಗೆ ಹೊಸ ರೂಪ ಕೊಡುವ ಕೆಲಸಕ್ಕೆ ಮಾರ್ಗದರ್ಶನ ಕೊಟ್ಟಿದ್ದೇನೆ ಎಂದರು.ಈ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಮುನಿಯಪ್ಪನವರ ನೇತೃತ್ವದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ದೇಹದಲ್ಲಿ ಕೊನೆ ಹನಿ ರಕ್ತ ಇರುವ ತನಕ ಸಂವಿಧಾನದ ರಕ್ಷಣೆ ಮಾಡಬೇಕು ಎಂದು ಬಾಬಾಸಾಹೇಬರು ಹೇಳಿದ್ದಾರೆ. ಒಂದು ವರ್ಗದ ನಾಯಕರಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೋರಾಟ ಮಾಡಲಿಲ್ಲ. ಎಲ್ಲ ಶೋಷಿತ ವರ್ಗಕ್ಕೆ ಬೆಳಕು ನೀಡಿದರು. ಭಾರತದ ಪ್ರಜೆಗಳು ಸಮಾನತೆಯಿಂದ ಬದುಕಲು ರೂಪುರೇಷೆ ನೀಡಿದ ಧೀಮಂತ ನಾಯಕ ಎಂದರು.
ಕೆಂಪೇಗೌಡರ ಜಯಂತಿ ಅಂಗವಾಗಿ ಎಸ್.ಎಂ.ಕೃಷ್ಣ ರಸ್ತೆಗೆ ಭೂಮಿ ನೀಡಿದ ರೈತರ ಹೆಸರಿರುವ ಗೋಡೆ ನಿರ್ಮಿಸಿ ಗೌರವ ನೀಡಲಾಗಿದೆ. ಮುಂದಿನ ದಿನದಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಈ ಭಾಗದ ಜನರು ಯೋಜನೆಗಳಿಗೆ ಭೂಮಿ ನೀಡಿ ತ್ಯಾಗ ಮಾಡುವಿರೋ ನಿಮ್ಮ ಹೆಸರುಗಳನ್ನು ಶಾಶ್ವತವಾಗಿ ಉಳಿಕೊಳ್ಳಲು ವಿಶೇಷ ಕಾರ್ಯಕ್ರಮವನ್ನು ನಾನು ರೂಪಿಸುತ್ತೇನೆ. ದೇವನಹಳ್ಳಿಗೆ ಮೆಟ್ರೋ ಬರಬೇಕು, ಹೊಸಕೋಟೆಗೆ ಮೆಟ್ರೋ ತಲುಪಬೇಕು. ಇದರ ಬಗ್ಗೆ ಕೂಡ ಈಗಾಗಲೇ ಡಿಪಿಆರ್ ತಯಾರಾಗುತ್ತಿದೆ ಎಂದರು.
ಜನರ ಪರವಾಗಿ ದನಿ ಎತ್ತುವುದನ್ನು ಅಂಬೇಡ್ಕರ್ ಕಲಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಂದಿನ ಕಾಲದಲ್ಲೇ ಅಂಬೇಡ್ಕರ್ ಅವರನ್ನ ಕಾನೂನು ಸಚಿವರನ್ನಾಗಿ ಮಾಡಿ ದೇಶ ಕಟ್ಟುವ ಮುಂದಾಳತ್ವ ನೀಡಿತು. ಅವರ ನೇತೃತ್ವದಲ್ಲಿ ಸಂವಿಧಾನ ಈ ದೇಶಕ್ಕೆ ಕೊಡುಗೆಯಾಗಿ ಸಿಕ್ಕಿತು. ಭೀಮಾ ಬಾಯಿಯವರು ಮಗುವಿಗೆ ಜನ್ಮ ನೀಡಲಿಲ್ಲ. ನಮ್ಮ ರಾಷ್ಟ್ರದ ಹಾಗೂ ಜನರ ಏಳಿಗೆಗೆ ಸಂವಿಧಾನ ಕೊಟ್ಟ ಶಕ್ತಿಗೆ ಜನ್ಮ ಕೊಟ್ಟರು. ಅವರ ಆದರ್ಶ ನಮ್ಮೆಲ್ಲರಿಗೂ ದಾರಿದೀಪ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಯನ್ನ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಉದ್ಘಾಟನೆ ಮಾಡಿಸಿದ್ದೇವೆ. ಬುದ್ಧ ಬಸವನು ಮನೆಬಿಟ್ಟ ಗಳಿಗೆಯಲ್ಲಿ, ಯೇಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಪೈಗಂಬರವರು ದಿವ್ಯವಾಣಿ ನೀಡಿದ ಗಳಿಗೆಯಲ್ಲಿ, ಭೀಮಾ ಬಾಯಿಯವರು ಅಂಬೇಡ್ಕರ್ ಅವರಿಗೆ ಜನನ ನೀಡಿದ ಗಳಿಗೆಯಲ್ಲಿ, ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ನ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಕೆಂಪೇಗೌಡರು ಬೆಂಗಳೂರನ್ನ ಕಟ್ಟಿದ ಗಳಿಗೆಯಲ್ಲಿ ಈ ಕಾರ್ಯಕ್ರಮ ನಡೆದಿದೆ ಎಂದು ಬಣ್ಣಿಸಿದರು.
ಮಹಾತ್ಮ ಗಾಂಧೀಜಿಯವರ ಪುತ್ಥಳಿ ಜೊತೆಯಲ್ಲೇ ಇವತ್ತು ಬಾಬಾಸಾಹೇಬರ ಪುತ್ಥಳಿಯನ್ನ ನಾವು ಈ ದೇಶದ ಉದ್ದಗಲಕ್ಕೂ ಇರೋದನ್ನ ಗಮನಿಸಿದ್ದೇವೆ. ನಾನು ಪ್ರತಿ ಬಾರಿ ಹೇಳುತ್ತೇನೆ ಒಂದು ಜಾತಿ ವರ್ಗಕ್ಕೆ ಅಂಬೇಡ್ಕರ್ ಅವರನ್ನ ಸೀಮಿತಗೊಳಿಸಬಾರದು. ಇಡೀ ದೇಶಕ್ಕೆ ಒಂದು ಸಮಾನತೆಯನ್ನ ಕೊಟ್ಟಂತಹ ನಾಯಕರು ಅವರು. ಎಲ್ಲಾ ವರ್ಗಕ್ಕೂ ನಾಯಕರಾಗಿ ಬೆಳಕು ತಂದವರು ಎಂದರು.ಅಂಬೇಡ್ಕರ್ ಅವರ ಚಿಂತನೆಗಳು ಯಾವಾಗಲೂ ಕೂಡ ಸಮಾಜದ ಬಗ್ಗೆ, ಎಲ್ಲಾ ವರ್ಗದ ಜನರ ಬಗ್ಗೆಯಿದೆ. ಸಿದ್ದರಾಮಯ್ಯನವರರು ಮುಖ್ಯಮಂತ್ರಿ ಆಗಿದ್ದಾಗ ಸಂವಿಧಾನ ಪೀಠಿಕೆಯನ್ನ ಶಾಲೆಗಳಲ್ಲಿ ಓದುವುದು ಕಡ್ಡಾಯ ಮಾಡಲಾಯಿತು. ಇಂತಹ ಐತಿಹಾಸಿಕ ತೀರ್ಮಾನವನ್ನ ಕಾಂಗ್ರೆಸ್ ಸರ್ಕಾರ ಮಾತ್ರ ನೀಡಲು ಸಾಧ್ಯ. ಬೇರೆ ಸರ್ಕಾರಗಳು ಇಂಥ ಆಲೋಚನೆಯನ್ನ ಮಾಡಕ್ಕೆ ಸಾಧ್ಯವಿಲ್ಲ. ಮಾನವತೆಗಿಂತ ದೊಡ್ಡ ಧರ್ಮ ಇಲ್ಲ ಎಂದರು. "ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಮನುಷ್ಯ ಚಿರಂಜೀವಿ ಆಗಲಿಕ್ಕೆ ಸಾಧ್ಯವಿಲ್ಲ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಬಹುದು. ನಿನ್ನನ್ನ ಟೀಕಿಸುವವರಿಗೆ ಕೆಲಸದ ಮುಖಾಂತರ ಉತ್ತರ ಕೊಡಬೇಕು ಅನ್ನೋದನ್ನ ಹೇಳಿ ಕೊಟ್ಟವರು ಬಾಬಾ ಸಾಹೇಬರು. ನಿನ್ನ ಹಣೆಬರಹದಲ್ಲಿ ನೀನು ನಂಬಿಕೆ ಇಡಬೇಡ. ನಿನ್ನ ಶಕ್ತಿ ನಿನ್ನ ಕಾರ್ಯ ಮೇಲೆ ನಂಬಿಕೆ ಇಡಬೇಕು. ನಿನ್ನ ಶ್ರಮಕ್ಕೆ ಫಲ ಸಿಗುತ್ತದೆ ಎಂದು ಹೇಳಿದ್ದಾರೆ " ಎಂದರು.
ಅಂಬೇಡ್ಕರ್ ಅವರ ಚಿಂತನೆಗಳು ಯಾವಾಗಲೂ ಸಮಾಜ ಹಾಗೂ ಎಲ್ಲಾ ವರ್ಗದ ಜನರ ಬಗ್ಗೆಯಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಸಂವಿಧಾನ ಪೀಠಿಕೆಯನ್ನ ಶಾಲೆಗಳಲ್ಲಿ ಓದುವುದು ಕಡ್ಡಾಯ ಮಾಡಲಾಯಿತು. ಇಂತಹ ಐತಿಹಾಸಿಕ ತೀರ್ಮಾನವನ್ನ ಕಾಂಗ್ರೆಸ್ ಸರ್ಕಾರ ಮಾತ್ರ ನೀಡಲು ಸಾಧ್ಯ. ಬೇರೆ ಸರ್ಕಾರಗಳು ಇಂತಹ ಆಲೋಚನೆಯನ್ನ ಮಾಡಕ್ಕೆ ಸಾಧ್ಯವಿಲ್ಲ. ಮಾನವತೆಗಿಂತ ದೊಡ್ಡ ಧರ್ಮ ಇಲ್ಲ ಎಂದರು.