೨೦೨೬ಕ್ಕೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು

KannadaprabhaNewsNetwork |  
Published : Apr 16, 2025, 12:42 AM IST
೨೦೨೬ಕ್ಕೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು | Kannada Prabha

ಸಾರಾಂಶ

೨೦೨೬ರ ಜೂನ್ ಅಂತ್ಯದೊಳಗೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದ ೩೪೩ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರಾವರಿಗೆ ೩.೪೪ಟಿಎಂಸಿ ಮತ್ತು ಕುಡಿಯುವ ನೀರಿಗೆ ೨.೨೯ಟಿಎಂಸಿ ಸೇರಿ ಒಟ್ಟು ೫.೭೪ಟಿಎಂಸಿ ನೀರು ಹರಿಯಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

೨೦೨೬ರ ಜೂನ್ ಅಂತ್ಯದೊಳಗೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದ ೩೪೩ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರಾವರಿಗೆ ೩.೪೪ಟಿಎಂಸಿ ಮತ್ತು ಕುಡಿಯುವ ನೀರಿಗೆ ೨.೨೯ಟಿಎಂಸಿ ಸೇರಿ ಒಟ್ಟು ೫.೭೪ಟಿಎಂಸಿ ನೀರು ಹರಿಯಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ 19ರಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸರ್ಕಾರ ದಿವಾಳಿ ಆಗಿದೆ ಅಂತಾ ವಿರೋಧ ಪಕ್ಷದವ್ರು ಅಂತಾರೆ. ಹಿಂದಿನ ವರ್ಷದ ಬಜೆಟ್ ೩ಲಕ್ಷ ೭೧ಸಾವಿರ ಕೋಟಿ. ಪ್ರಸ್ತುತ ವರ್ಷದ ಬಜೆಟ್ ಗಾತ್ರ ೪ಲಕ್ಷ ೯ಸಾವಿರ ಕೋಟಿ. ಬಜೆಟ್ ಹೆಚ್ಚಾಗಿದ್ದು ವಿರೋಧ ಪಕ್ಷಗಳಿಗೆ ಗೊತ್ತಿಲ್ಲವೇ. ಎತ್ತಿನಹೊಳೆ ಯೋಜನೆಯ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯ ಅಭಿವೃದ್ಧಿಯ ನನ್ನ ಹೆಜ್ಜೆಗುರುತು ಸಾಕ್ಷಿಯಾಗಿ ಉಳಿಯಲಿವೆ ಎಂದರು.ನಾನು ಮಧುಗಿರಿ ಕ್ಷೇತ್ರದ ಶಾಸಕನಾಗಿದ್ದಾಗ ಹೇಮಾವತಿ ಯೋಜನೆಯ ನೀರಾವರಿ ಯೋಜನೆಯ ರೂಪುರೇಷು ತಯಾರಿಸುವಾಗ ವಿರೋಧ ಪಕ್ಷದವರು ಬಕೆಟ್‌ನಲ್ಲಿ ನೀರು ತರ್ತಾರಾ ಅಂಗ ವ್ಯಂಗ್ಯ ಮಾಡಿದ್ರು. ಈಗ ಹೇಮಾವತಿ ನೀರಿನ ಯೋಜನೆಯು ತುಮಕೂರು ಜಿಲ್ಲೆಯ ಸಾವಿರಾರು ರೈತರಿಗೆ ನೀರಾವರಿಯ ವರದಾನ ಆಗಿದೆ. ಟೀಕೆ ಮಾಡಿದ ನಾಯಕರಿಗೆ ನನ್ನ ಕೆಲಸದ ಮೂಲಕ ಉತ್ತರ ನೀಡುತ್ತೇವೆ ಎಂದರು.ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ೨೦೧೩ರಿಂದ ೨೦೧೮ರ ೫ ವರ್ಷದ ಅವಧಿಯಲ್ಲಿ ನಮ್ಮ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನೀರಾವರಿ ಯೋಜನೆಗೆ ೫೮ ಸಾವಿರ ಕೋಟಿ ಅನುದಾನ ನೀಡಿದೆ. ನಮ್ಮ ರಾಜ್ಯದ ರೈತರು ಉಳುಮೆ ಮಾಡಿ ಬೆಳೆ ಬೆಳೆಯುವ ಭೂಮಿ ೧ಕೋಟಿ ೨೮ಲಕ್ಷ ಹೆಕ್ಟರ್. ನೀರಾವರಿ ಯೋಜನೆಯ ಭೂಮಿ ಕೇವಲ ೪೨.೩೨ಲಕ್ಷ ಹೆಕ್ಟರ್ ಅಷ್ಟೆ. ಇನ್ನೂಳಿದ ೮೬ ಲಕ್ಷ ಹೆಕ್ಟರ್ ಭೂಮಿ ಮಳೆಯಾಶ್ರಿತ ಆಗಿದೆ. ರೈತರು ಇನ್ನೂ ಹೆಚ್ಚು ನೀರಾವರಿಗೆ ಆದ್ಯತೆ ನೀಡಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಸೀಲ್ದಾರ್ ಮಂಜುನಾಥ.ಕೆ, ಸಿಪಿಐ ಅನಿಲ್, ತಾಪಂ ಇಒ ಅಪೂರ್ವ, ಸಣ್ಣನೀರಾವರಿ ಎಇಇ ರಮೇಶ್, ಅರಕೆರೆ ಶಂಕರ್, ಅಶ್ವತ್ಥ ನಾರಾಯಣ್,ಭೈರೇಶ್, ದೀಪು, ರಘುವೀರ್, ಜಯಮ್ಮ ಸೇರಿದಂತೆ ಇತರರು ಇದ್ದರು. ಕೋಟ್ ...

ಸಣ್ಣ ನೀರಾವರಿ ಇಲಾಖೆಯ ೨೮೮ಕೋಟಿ, ಪಿಡ್ಲ್ಯೂಡಿ ಇಲಾಖೆಯ ೩೫ಕೋಟಿ, ನರೇಗಾ ಯೋಜನೆಯ ೪೬ಕೋಟಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ೩೪ಕೋಟಿ, ಪಂಚಾಯತ್ ರಾಜ್ ಇಲಾಖೆಯ ೨೩ಕೋಟಿ, ಬೆಸ್ಕಾಂ ಇಲಾಖೆಯ ೧೭ಕೋಟಿ ಸೇರಿ ಒಟ್ಟು ೪೫೩ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ೧೯ರಂದು ನಡೆಯಲಿದೆ.

- ಡಾ.ಜಿ.ಪರಮೇಶ್ವರ. ಗೃಹ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ