ವೈಜ್ಞಾನಿಕ ಬೇಸಾಯದಿಂದ 100 ಟನ್‌ ಕಬ್ಬಿನ ಇಳುವರಿ

KannadaprabhaNewsNetwork |  
Published : Aug 01, 2026, 04:00 AM IST
ಕಬ್ಬಿನ ಬೆಳೆಯಲ್ಲಿ ನಿಖರ ಕೃಷಿ ತಂತ್ರಜ್ಞಾನ ಅಳವಡಿಕೆಗೆ ಒತ್ತು : ಮಧುಸೂದನ ಅಭಿಮತ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಎಕರೆಗೆ 100 ಟನ್‌ಗಿಂತ ಹೆಚ್ಚಿನ ಕಬ್ಬಿನ ಇಳುವರಿ ಸಾಧಿಸಲು ಮಾಹಿತಿ ತಂತ್ರಜ್ಞಾನ, ದೂರಸಂವೇದಿ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಬೇಸಾಯ ಪದ್ಧತಿಗಳ ಸಮನ್ವಯ ಅಗತ್ಯವಾಗಿದೆ. ನಿಖರ ಕೃಷಿಯ ಮೂಲಕ ರೈತರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಕೃಷಿ ಇಲಾಖೆಯ ಅಪರ ಕೃಷಿ ನಿರ್ದೇಶಕ(ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ) ಮಧುಸೂದನ್.ಕೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಪ್ರತಿ ಎಕರೆಗೆ 100 ಟನ್‌ಗಿಂತ ಹೆಚ್ಚಿನ ಕಬ್ಬಿನ ಇಳುವರಿ ಸಾಧಿಸಲು ಮಾಹಿತಿ ತಂತ್ರಜ್ಞಾನ, ದೂರಸಂವೇದಿ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಬೇಸಾಯ ಪದ್ಧತಿಗಳ ಸಮನ್ವಯ ಅಗತ್ಯವಾಗಿದೆ. ನಿಖರ ಕೃಷಿಯ ಮೂಲಕ ರೈತರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಕೃಷಿ ಇಲಾಖೆಯ ಅಪರ ಕೃಷಿ ನಿರ್ದೇಶಕ(ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ) ಮಧುಸೂದನ್.ಕೆ ತಿಳಿಸಿದರು.

ಬಾಗಲಕೋಟೆ ಕೃಷಿ ಇಲಾಖೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಗೋದಾವರಿ ಬಯೋರಿಫೈನರೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ನಗರದಲ್ಲಿ ನಡೆದ ಕಬ್ಬಿನ ಬೆಳೆಯಲ್ಲಿ ನಿಖರ ಕೃಷಿ ಕುರಿತ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಂಟಿ ಕೃಷಿ ನಿರ್ದೇಶಕಿ (ವಿಸ್ತರಣೆ, ತರಬೇತಿ ಮತ್ತು ಇ-ಆಡಳಿತ)ದ ದೀಪಜ.ಎಸ್.ಎಂ ಮಾತನಾಡಿ, ಉಪಗ್ರಹ ಚಿತ್ರಗಳು, ಡ್ರೋನ್, ಸೆನ್ಸಾರ್ ಹಾಗೂ ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಕಬ್ಬಿನ ಬೆಳೆಯಲ್ಲಿ ನೀರಾವರಿ, ಪೋಷಕಾಂಶ ನಿರ್ವಹಣೆ, ಕೀಟ ಹಾಗೂ ರೋಗಗಳ ಮೇಲ್ವಿಚಾರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬಹುದಾಗಿದೆ ಎಂದರು.

ಗೋದಾವರಿ ಬಯೋರಿಫೈನರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಬಕ್ಷಿ ಮಾತನಾಡಿ, ಕಾರ್ಖಾನೆ ಹಾಗೂ ಕೃಷಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್ ರುದ್ರೇಶಪ್ಪ ಮಾತನಾಡಿ, ಕೃಷಿ ಇಲಾಖೆ ಹಾಗೂ ಗೋದಾವರಿ ಬಯೋರಿಫೈನರೀಸ್ ಲಿಮಿಟೆಡ್ ಸಿಬ್ಬಂದಿ ಜೊತೆಗೂಡಿ ರೈತರಿಗೆ ನಿಖರ ಕೃಷಿ ಅಳವಡಿಸಿಕೊಳ್ಳಲು ಅರಿವು ಮೂಡಿಸಬೇಕು ಎಂದರು.

ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ಡಾ.ಸುನೀಲಕುಮಾರ ನೂಲಿ ಮಾತನಾಡಿ, ನಿಖರ ಕೃಷಿಗಾಗಿ ಸುಧಾರಿತ ಬೇಸಾಯ ಕ್ರಮಗಳು, ನಿಖರ ನೀರಿನ ವೇಳಾಪಟ್ಟಿ, ರಸಾವರಿ ಮೂಲಕ ಪೋಷಕಾಂಶಗಳ ನಿರ್ವಹಣೆ, ತಳಿಗಳ ಆಯ್ಕೆ, ಕೀಟ ಮತ್ತು ರೋಗ ನಿರ್ವಹಣೆ ಕ್ರಮಗಳು ಹಾಗೂ ನಿಖರ ಕೃಷಿಗಾಗಿ ಅನುಸರಿಸಲು ಬೇಕಾಗುವ ಪರಿಕರಗಳ ಕುರಿತು ವಿವರಣೆ ನೀಡಿದರು.

ಬೆಂಗಳೂರಿನ ರಾಜ್ಯ ದೂರಸಂವೇದಿ ಅನ್ವಯಿಕೆ ಕೇಂದ್ರದ ವಿಜ್ಞಾನಿ ಮಹಮ್ಮದ ಅಹಮದ, ಕೆ.ಜೆ.ಸೋಮಯ್ಯ ಅನ್ವಯಿಕ ಕೃಷಿ ಸಂಶೋಧನಾ ಸಂಸ್ಥೆ ನಿರ್ದೇಶಕ ನಂದಕುಮಾರ ಕುಂಚಗೆ ಹಾಗೂ ಗೋದಾವರಿ ಬಯೋರಿಫೈನರೀಸ್ ಲಿಮಿಟೆಡ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ವಿ.ಎಸ್.ಕಣಬೂರ ಮಾತನಾಡಿದರು.

ಜಮಖಂಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಆಯ್ಕೆಯಾದ ಹೊಸೂರ ಹಾಗೂ ಚಿಮ್ಮಡ ಗ್ರಾಮಗಳಲ್ಲಿ ಕಬ್ಬು ಬೆಳೆಯಲ್ಲಿ ನಿಖರ ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕೈಗೊಂಡ ಮಾನದಂಡಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೆಂಕಟೇಶ ಕುಲಕರ್ಣಿ, ರಾಜ್ಯ ದೂರಸಂವೇದಿ ಅನ್ವಯಿಕೆ ಕೇಂದ್ರದ ವೈಜ್ಞಾನಿಕ ಅಧಿಕಾರಿ ಗುರುಸ್ವಾಮಿ, ಹಿರಿಯ ಯೋಜನಾ ವಿಜ್ಞಾನಿ ರಜತ ಎಲ್ಲೋರ, ಪ್ರತೀಪಕುಮಾರ.ಟಿ.ಎಸ್, ಉಪ ಕೃಷಿ ನಿರ್ದೇಶಕರಾದ ಕೆ.ಎಸ್.ಅಗಸನಾಳ, ಮಂಜಳಾ ಬಸವರಡ್ಡಿ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಜಮಖಂಡಿ ಉಪವಿಭಾಗದ ಕೃಷಿ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಕೆ.ಎ.ಜಮಖಂಡಿ ನಿರ್ವಹಿಸಿದರು. ಜಮಖಂಡಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ಸ್ವಾಗತಿಸಿದರು. ಕೃಷಿ ಅಧಿಕಾರಿ ಟಸ್ಕಿನ ಡಾಂಗೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಷ್ಠಾನವಾಗದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ: ಉದಯಸಿಂಗ್ ರಾಯಚೂರ
ಪೋಲಿಸ್ ನೇಮಕಾತಿ ಪರೀಕ್ಷೆ: ಪಾದದರ್ಶಕವಾಗಿ ಪರೀಕ್ಷೆ ನಡೆಸಲು ಡಿಸಿ ಸೂಚನೆ