ಮೂಡುಬಿದಿರೆ: ಸ್ವಸ್ತಿಶ್ರೀ ಕಾಲೇಜು ವಿದ್ಯಾರ್ಥಿಗಳಿಂದ ಯೋಗ

KannadaprabhaNewsNetwork |  
Published : Jun 22, 2024, 12:53 AM IST
ಮೂಡುಬಿದಿರೆ: ಸ್ವಸ್ತಿಶ್ರೀ ಕಾಲೇಜು ವಿದ್ಯಾರ್ಥಿಗಳಿಂದ ಯೋಗ | Kannada Prabha

ಸಾರಾಂಶ

ಸಂಸ್ಥೆಯ ಅಧ್ಯಕ್ಷ, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಯೋಗಾಸನ ಮಾಡಿದರು.

ಮೂಡುಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನಾ ಮಾಡುವುದರ ಮೂಲಕ ವಿಶ್ವ ಯೋಗ ದಿನವನ್ನು ಭಟ್ಟಾರಕ ಭವನದಲ್ಲಿ ಆಚರಿಸಿದರು.

ಸಂಸ್ಥೆಯ ಅಧ್ಯಕ್ಷ, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಯೋಗಾಸನ ಮಾಡಿದರು. ಬಳಿಕ ಸಂದೇಶ ನೀಡಿ, ಯೋಗ, ಧ್ಯಾನವು ಭಾರತದ ಸಂಸ್ಕೃತಿಯ ಶ್ರೇಷ್ಠ ಕೊಡುಗೆ. ಮಾತ್ರವಲ್ಲ ಶ್ರೇಷ್ಠ ಜೀವನ ಕಲೆಯಾಗಿದೆ. ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗ ಪೂರಕ. ವಿದ್ಯಾರ್ಥಿಗಳ ಕಲಿಕೆಗೂ ಯೋಗ ಸಹಕಾರಿ ಎಂದು ನುಡಿದರು. ಪದ್ಮಾಸನ, ವೀರಾಸನ, ಶಲಾಭಾಸನ, ಪರ್ವತಾಸನ, ವೃಕ್ಷಾಸನ ಸರ್ವಾಂಗಸನ ಸಹಿತ ವಿವಿಧ ಯೋಗಾಸನ ಪ್ರಾತ್ಯಕ್ಷಿಕೆಯನ್ನು ಸ್ವಾಮೀಜಿ ಪ್ರದರ್ಶಿಸಿ, ಮಹತ್ವ ತಿಳಿಸಿದರು. ಸ್ವಾತಿ ಹಾಗೂ ಮನಸ್ವಿನಿ ತರಬೇತಿ ನೀಡಿದರು. ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸುಜಾತಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ