ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಜಯನಗರ ಬಡಾವಣೆಯ ಶ್ರೀಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಕಚೇರಿ ಆವರಣದಲ್ಲಿ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಹಾಗೂ ಪಟ್ಟಣದ ಬುದ್ಧ-ಬಸವ-ಅಂಬೇಡ್ಕರ್ ಯೋಗ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ 21 ದಿನಗಳ ಕಾಲ ನಡೆದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರು ಜ್ಞಾನದ ಮಹತ್ವವನ್ನು ಅರಿತಿದ್ದರು. ಜ್ಞಾನದ ಬಲದಿಂದಲೇ ಮಾನವನ ಆರೋಗ್ಯಕ್ಕೆ ಬೇಕಾದ ಯೋಗ ವಿದ್ಯೆಯನ್ನು ನಮ್ಮ ಪ್ರಾಚೀನ ಋಷಿ ಮುನಿಗಳು ಆವಿಷ್ಕರಿಸಿ ಮನುಕುಲಕ್ಕೆ ನೀಡಿದ್ದಾರೆ. ಪತಂಜಲಿ ಮಹರ್ಷಿಗಳಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ ಯೋಗ ಪರಂಪರೆ ನಿರಂತರವಾಗಿ ಹರಿದು ಬಂದಿದೆ ಎಂದರು.ಇಂದಿನ ಯಾಂತ್ರಿಕ ಬದುಕಿಗೆ ಯೋಗವೇ ಮದ್ದು. ಆರ್‌ಟಿಒ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ತಾಲೂಕಿನ ನೊಂದವರಿಗೆ, ದೀನದಲಿತರಿಗೆ ಸಮಾಜ ಸೇವೆ ಮಾಡುವುದರ ಜೊತೆಗೆ ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ಈ ಉಚಿತ ಯೋಗ ಶಿಬಿರ ಆಯೋಜಿಸಿದೆ. ಇಂದಿನ ಒತ್ತಡದ ಜೀವನದಲ್ಲಿ ಯೋಗದಿಂದ ದೇಹ-ಮನಸ್ಸು ಎರಡಕ್ಕೂ ಶಾಂತಿ ಸಿಗುತ್ತದೆ. ಯುವ ಜನತೆ ಯೋಗವನ್ನು ಜೀವನದ ಭಾಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಕೆ. ಕಾಳೇಗೌಡ, ಲೇಖಕ ಬಲ್ಲೇನಹಳ್ಳಿ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ಸುಜನಾ ಪ್ರತಿಷ್ಠಾನದ ಕಾರ್ಯದರ್ಶಿ ಚಾ.ಶಿ. ಶಿವಕುಮಾರ್, ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟಿ ಗಂಜಿಗೆರೆ ಮಹೇಶ್, ಶಿಕ್ಷಕ ವೀರಭದ್ರಪ್ಪ ಸೇರಿದಂತೆ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.