ವಿಶ್ವ ಯೋಗ ದಿನಾಚರಣೆ ನಿಮಿತ್ತ ಗೋಳಗುಮ್ಮಟ ಆವರಣದಲ್ಲಿ ಯೋಗಾಸನ, ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರ ಪ್ರಸಾರ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ವಿಜಯಪುರ
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಧಾರವಾಡ ವಲಯದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಶೀರ್ಷಿಕೆಯಡಿ ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಯೋಗ ದಿನ ಆಚರಿಸಲಾಯಿತು. ನಗರದ ಗೋಳಗುಮ್ಮಟದಲ್ಲಿ ಬೆಳಗ್ಗೆ 6.20 ರಿಂದ 7ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕುರಿತು ಮಾತನಾಡುವ ನೇರ ಪ್ರಸಾರದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರ ಉಪವಿಭಾಗದ ಸಹಾಯಕ ಆಯುಕ್ತ ಗುರುನಾಥ ದಡ್ಡೆ, ಯೋಗ ಗುರು ಸುರೇಶ ಆನಂದಿ, ಭಾರತೀಯ ಪುರಾತತ್ವ ಸರ್ವೇಕ್ಷಣ, ಧಾರವಾಡ ವಲಯದ ಉಪ ಅಧೀಕ್ಷಕ ಪುರಾತತ್ವ ಅಭಿಯಂತರ ಎನ್.ಬಿ.ಡಿ. ಕೆಂಪಗೌಡ, ಡಾ.ಜಾವೀದ್ ಜಮಾದಾರ, ಬಿಎಲ್ ಡಿಇ ಸಂಸ್ಥೆಯ ಡಾ.ವೈ.ತಮ್ಮಣ್ಣ, ಶಿಫಾ ಜಮಾದಾರ, ಬಂಗಾರಮ್ಮ ಸಜ್ಜನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ವಸತಿ ನಿಲಯ, ಸಮಾಜ ಕಲ್ಯಾಣ ಇಲಾಖೆ, ವಿಕಾಸ ಹೈಸ್ಕೂಲ್ ಹಾಗೂ ವಿವಿಧ ಶಾಲೆಗಳ 500ಕ್ಕೂ ಹಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.