ರಾಮಕೃಷ್ಣನಗರದ ವಾಯು ವಿಹಾರಿಗಳಿಂದ ಯೋಗ ದಿನಾಚರಣೆ

KannadaprabhaNewsNetwork |  
Published : Jun 23, 2024, 02:09 AM IST
21 | Kannada Prabha

ಸಾರಾಂಶ

ಯೋಗ ಎಂದರೆ ಜೋಡಿಸು, ಹೊಂದಿಸು, ಯುಕ್ತವಾಗುವುದು ಎಂಬ ಅರ್ಥವಿದೆ. ಅಂದರೆ ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವುದೇ ಯೋಗ. ಯೋಗದಿಂದ ಜೀವನ ವಿಕಾಸವಾಗುತ್ತದೆ. ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಯೋಗದ ಮಹತ್ವ ತಿಳಿಯಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ರಾಮಕೃಷ್ಣನಗರದ ಐ ಬ್ಲಾಕ್ ನ ರಾಮಕೃಷ್ಣ ಪಾರ್ಕ್ ನಲ್ಲಿ ಲಯನ್ಸ್ ಕ್ಲಬ್ ಕುವೆಂಪುನಗರ, ಯೋಗ ಸನ್ನಿದಿ ಬಳಗ ಮತ್ತು ಮಹದೇವ್ ಗಣೇಶ್ ತಂಡದ ವತಿಯಿಂದ ವಿಶ್ವ ಯೋಗ ದಿನವನ್ನು ವಿವಿಧ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಡಿ.ಎನ್. ನಾಗರಾಜ ಆಚಾರ್, ಶಿವರಾಮು, ವಿ.ಟಿ. ಚಂದ್ರಶೇಖರ್, ಆರ್.ಎಚ್. ನಾಗರಾಜ್, ರಾಮಕೃಷ್ಣ ಪರಮಹಂಸ ಉದ್ಯಾನವನದ ವಾಯು ವಿಹಾರಿಗಳಾದ ಮಂಡ್ಯ ಡಿಡಿಪಿಯು ಚಲುವಯ್ಯ, ಕೃಷ್ಣಪ್ಪ, ವೆಂಕಟೇಶ್, ಜಯರಾಮ್, ಯೋಗಪಟುಗಳಾದ ನಿಂಗೇಗೌಡ, ಗಣೇಶ್ ಮೊದಲಾದವರು ಇದ್ದರು.ಎನ್.ಆರ್. ಕ್ಷೇತ್ರದ ಬಿಜೆಪಿಯಿಂದ ಅಂತಾರಾಷ್ಟ್ರೀಯ ಯೋಗ ದಿವಸ್ ಆಚರಣೆಕನ್ನಡಪ್ರಭ ವಾರ್ತೆ ಮೈಸೂರು

ಎನ್.ಆರ್. ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯಿಂದ ಅಂತಾರಾಷ್ಟ್ರೀಯ ಯೋಗ ದಿವಸ್ ಅಂಗವಾಗಿ ನರಸಿಂಹರಾಜ ಕ್ಷೇತ್ರದಲ್ಲಿ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಯೋಗ ಕಾರ್ಯಕ್ರಮ ಆಯೋಜಿಸಲಾಯಿತು.

ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಕ್ಷೇತ್ರದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಸಿ. ಮಂಜು, ಶಿವಕುಮಾರ್, ಮಾಲಿನಿ ಪಾಲಾಕ್ಷ,ಕವಿತಾ ಸಿಂಗ್, ಉಮಾ, ಸ್ವಾಮಿ, ಕಾರ್ತಿಕ್ , ಸಿಂಗ್, ಯಶ್ವಂತ್ ಸಿಂಗ್, ಶಿವಾನಂದ್ ರಾವ್, ನವೀನ್, ಪ್ರಕಾಶ್, ಸತೀಶ್, ಕೃಷ್ಣಮೂರ್ತಿ ಭಾಗವಹಿಸಿದ್ದರು.

ರಾಮಕೃಷ್ಣ ವಿದ್ಯಾಕೇಂದ್ರ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಕನ್ನಡಪ್ರಭ ವಾರ್ತೆ ಮೈಸೂರು

ರಾಮಕೃಷ್ಣನಗರದಲ್ಲಿರುವ ರಾಮಕೃಷ್ಣ ವಿದ್ಯಾಕೇಂದ್ರ ಶಾಲೆಯಲ್ಲಿ ವಿಶ್ವಯೋಗ ದಿನವನ್ನು ಆಚರಿಸಿತು.

ಮುಖ್ಯಅತಿಥಿಗಳಾಗಿ ತೆರಿಗೆ ಸಲಹೆಗಾರರು ಹಾಗೂ ಯೋಗಪಟು ಸಿ.ಎನ್. ಪ್ರಕಾಶ್ ಮಾತನಾಡಿ, ಯೋಗ ಎಂದರೆ ಜೋಡಿಸು, ಹೊಂದಿಸು, ಯುಕ್ತವಾಗುವುದು ಎಂಬ ಅರ್ಥವಿದೆ ಎಂದು ತಿಳಿಸಿದರು. ಅಂದರೆ ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವುದೇ ಯೋಗ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂ. ಪಾಪೇಗೌಡ ಮಾತನಾಡಿ, ಯೋಗದಿಂದ ಜೀವನ ವಿಕಾಸವಾಗುತ್ತದೆ. ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಯೋಗದ ಮಹತ್ವ ತಿಳಿಸಿದರು.ರಾಮಕೃಷ್ಣ ಸೇವಾ ಸಂಘದ ಖಜಾಂಚಿ ಎಚ್.ಜಿ. ರಮೇಶ್, ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಜಿ. ಚಂದ್ರಶೇಖರ್, ಆರ್.ಕೆವಿಕೆ ಕಾಲೇಜಿನ ಪ್ರಾಂಶುಪಾಲ ಸಿ. ಶಿವಪ್ಪ, ರಾಮಕೃಷ್ಣ ವಿದ್ಯಾಕೇಂದ್ರದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಿ.ಎನ್. ವಿಶ್ವನಾಥ್ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಕೆ. ಹೆಗಡೆ, ಪ್ರಣಮ್ಯ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸವಿತಾ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕೇತರರು ಭಾಗವಹಿಸಿದ್ದರು.

ಸಹ ಶಿಕ್ಷಕರಾದ ಗಣೇಶ್ ಹೆಗಡೆ ನಿರೂಪಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಜಿ. ಚಂದ್ರಶೇಖರ್ ಸ್ವಾಗತಿಸಿದರು. ಸಹ ಶಿಕ್ಷಕಿ ಬಿ.ಸಿ. ದೀಪಿಕಾ ವಂದಿಸಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಯೋಗದ ಭಂಗಿಗಳನ್ನು ಪ್ರದರ್ಶಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!