ರಶ್ಮಿ ಆಯುರ್ವೇದ ವಿಜ್ಞಾನ ಮಹಾವಿದ್ಯಾಲಯದಲ್ಲಿ ಯೋಗ ಜಾಥಾಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕೂಡ್ಲಿಗಿಇಪ್ಪತ್ತೊಂದನೇ ಶತಮಾನದಲ್ಲಿ ಯೋಗವು ಜಗತ್ತನ್ನು ಒಂದುಗೂಡಿಸಿದೆ ಎಂದು ವೈಎಸ್ಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ. ರವಿಕುಮಾರ ಹೇಳಿದರು.
ಪಟ್ಟಣದ ರಶ್ಮಿ ಆಯುರ್ವೇದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾದ ಯೋಗವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುವ ಅತ್ಯಂತ ವಿಶ್ವಾಸಾರ್ಹ ಸಾಧನಗಳಲ್ಲಿ ಒಂದಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆ ಸಂದಿಸುತ್ತದೆ. ಆಲೋಚನೆ ಮತ್ತು ಕ್ರಿಯೆ, ಸಂಯಮ ಮತ್ತು ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಮತ್ತು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ ಎಂದು ತಿಳಿಸಿದರು.
ಸಂಸ್ಕೃತ ಪಂಡಿತ ಹೇಳುವಂತೆ ಪ್ರತಿಯೊಬ್ಬರು ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಒಬ್ಬ ವ್ಯಕ್ತಿಯು ತಂದೆಯಂತೆ ರಕ್ಷಿಸುವ ಧೈರ್ಯ, ತಾಯಿಯಿಂದ ಬರುವ ಕ್ಷಮೆ ಮತ್ತು ಶಾಶ್ವತ ಸ್ನೇಹಿತನಾಗುವ ಮಾನಸಿಕ ಶಾಂತಿ ಮುಂತಾದ ಕೆಲವು ಉತ್ತಮ ಗುಣ ಅಳವಡಿಸಿಕೊಳ್ಳಬಹುದು ಎಂದರು.ಜಾಥಾದಲ್ಲಿ ೧೦೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೈಎಸ್ಎಸ್ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ರಾಜು ಜಿ.ಆರ್., ರಶ್ಮಿ ಆಯುರ್ವೇದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಎಂ. ಹರೀಶ, ಡಾ. ಕೊಟ್ರೇಶ್, ಡಾ. ಅಭಿಷೇಕ, ಡಾ. ಗುರುಮಾಂತೇಶ್, ಜ್ಞಾನಭಾರತಿ ಬಿಇಡಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ಎಂ. ವಿಜಯಕುಮಾರ, ಕೆ.ಬಸವರಾಜ, ಮುಖ್ಯಗುರು ಮಲೈಕ್, ಎಚ್.ಎಂ. ಮಂಜುನಾಥ, ಶಿಕ್ಷಕರಾದ ಗುಪ್ಪಲ್ ಕೊಟ್ರೇಶ, ರಾಘವೇಂದ್ರರೆಡ್ಡಿ, ನಾಗೇಂದ್ರ, ಬಿಇಡಿ ಪ್ರಾಧ್ಯಾಪಕರಾದ ಶಂಭುಲಿಂಗಸ್ವಾಮಿ, ಅರ್ಚನ, ಕೆ.ನಾಗರಾಜ ಪ್ಯಾರಾಮೆಡಿಕಲ್ ಪ್ರಾಚಾರ್ಯ ಜಯಚಂದ, ಈ ಸಂಸ್ಥೆಯ ಎಲ್ಲಾ ಮಕ್ಕಳು ಪಾಲ್ಗೊಂಡಿದ್ದರು.