ಮಾನಸಿಕ ಸಮತೋಲನಕ್ಕೆ ಯೋಗಾಸನ ಸಹಕಾರಿ

KannadaprabhaNewsNetwork |  
Published : Jun 22, 2025, 01:18 AM IST
ಸಿಕೆಬಿ-1 ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿದ ಸಚಿವ ಸುಧಾಕರ್.ಸಿಕೆಬಿ-2 ಸಚಿವ ಸುಧಾಕರ್, ಜಿಲ್ಲಾಧಿಕಾರಿ ರವೀಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ  ಯೋಗಾಸನ ಮಾಡಿದರು | Kannada Prabha

ಸಾರಾಂಶ

ಜನಜೀವನದ ಆಹಾರ, ವ್ಯಾಯಾಮ ಪದ್ಧತಿಯಲ್ಲಿ ವ್ಯತ್ಯಯಗಳಾದ ಅನಗತ್ಯ ಬೊಜ್ಜು , ಶಾರೀರಿಕ ತೊಂದರೆಗಳ ನಿವಾರಣೆ, ಸದೃಢ ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜನಜೀವನದ ಆಹಾರ, ವ್ಯಾಯಾಮ ಪದ್ಧತಿಯಲ್ಲಿ ವ್ಯತ್ಯಯಗಳಾದ ಅನಗತ್ಯ ಬೊಜ್ಜು , ಶಾರೀರಿಕ ತೊಂದರೆಗಳ ನಿವಾರಣೆ, ಸದೃಢ ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶನಿವಾರ ಯೋಗಾಭ್ಯಾಸ ಮಾಡುವ ಮೂಲಕ ಜಿಲ್ಲಾ ಮಟ್ಟದ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯೋಗದ ಆಚರಣೆಗಳ ಇದು ಯಾವುದೇ ನಿರ್ದಿಷ್ಟ ವರ್ಗಕ್ಕೆ ಸೀಮಿತಾವಾದುದುಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧಿಸಿದ್ದೇ ಆಗಿದೆ. ಪ್ರತಿದಿನ ಮಾಡುವ ಯೋಗ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಸರಳ ಯೋಗಗಳು ನಮ್ಮನ್ನು ಉಲ್ಲಸಿತ ವಾಗಿಡುತ್ತದೆ. ಯೋಗಾನುಷ್ಠಾನ ನಮ್ಮನ್ನು ಪ್ರಫುಲ್ಲವಾಗಿಸುತ್ತದೆ ಎಲ್ಲರು ಯೋಗ ಮಾಡಿ ನಿರೋಗಿಗಳಾಗಿ ಎಂದರು.

ಚಿಕ್ಕಬಳ್ಳಾಪುರ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣವನ್ನು ಸರ್ವಾಂಗೀಣ ಅಭಿವೃದ್ದಿ ಮಾಡಲು 80 ಕೋಟಿಗಳ ನೀಲ ನಕ್ಷೆ ತಯಾರಿಸಿದ್ದು, ಅದರಲ್ಲಿ ಸಿಂಥೆಟಿಕ್ ಟ್ರಾಕ್, ವಾಕಿಂಗ್ ಪಾತ್, ಇಂಡೋರ್ ಸ್ಟೇಡಿಯಂನಲ್ಲಿನ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಆರಂಭಿಸುವುದಾಗಿ ತಿಳಿಸಿದರು.

ಬೆಂಗಳೂರು ಉತ್ತರ ವಿವಿಯ ಮೌಲ್ಯಮಾಪನ ಕುಲಸಚಿವ ಹಾಗೂ ಮುಖ್ಯ ಯೋಗ ತರಬೇತುದಾರ ಢಾ.ಎನ್.ಲೋಕ್ ನಾಥ್ ರೊಂದಿಗೆ ಯೋಗ ತರಬೇತುದಾರರಾದ ನಾಗರಾಜ್, ಎಂ. ರವಿ, ಗೋವಿಂದ್, ಮಹೇಶ್, ,ವೀಣಾ ಲೋಕ್ ನಾಥ್, ಸುಧಾ ನಾಗರಾಜ್ ಆಸನ ಹೇಳಿಕೊಟ್ಟರು.

ಜುಲೈ 2ರಂದು ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ

ಚಿಕ್ಕಬಳ್ಳಾಪುರ: ನನಗೆ ಕ್ರಿಕೆಟ್ ಅಂದ್ರ ಇಷ್ಟ, ರಾಜಕಾರಣಕ್ಕೆ ಬಂದ ಮೇಲೆ ಬದಲಾವಣೆ ಆಯ್ತು 2013 ರಲ್ಲಿ ಪರಾಜಯವಾದಾಗ ವಾಕಿಂಗ್, ಡಯಟ್, ಯೋಗಾಭ್ಯಾಸ ಮಾಡ್ತಿದ್ದೆ. ಈಗಲು ವಾರಕ್ಕೆ ಮೂರು ನಾಲ್ಕು ಬಾರಿ ಶಟಲ್ ಆಡ್ತೀನಿ. ಜೊತೆಗೆ ಪ್ರತಿ ವರ್ಷಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ತೀನಿ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಂದಿಗಿರಿಧಾಮದಲ್ಲಿನ ಸಚಿವ ಸಂಪುಟದ ಸಭೆ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, 20 ದಿನ ಕ್ಕೂ ಮುಂಚೆ ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೆ. ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತಿತರ ಸಚಿವರ ಜೊತೆ ಮಾತುಕತೆ ಕೇಳಿ ತಯಾರಿ ಮಾಡಿಕೊಂಡಿದ್ವಿ. ಆದ್ರೆ ಆರ್ ಸಿಬಿ ಕಾಲ್ತುಳಿತ ನಡೆದ ಸಾಕಷ್ಟು ಬದಲಾವಣೆ ಆಯ್ತು. ಕೋಲಾರ, ಚಿಕ್ಕಬಳ್ಳಾಪುರ, ಗ್ರಾಮಾಂತರ ಭಾಗದಲ್ಲಿ ಸಾಕಷ್ಟು ಕೊಡುಗೆ ಕೊಡಿಸಬೇಕೆಂಬ ಆಸೆ ಇತ್ತು. ಹಣಕಾಸು ವಿಚಾರವಾಗಿ ಸಾಕಷ್ಟು ತೊಂದರೆ ಇತ್ತು ಎಂದು ಹೇಳಿದ್ರು. ಇದರಿಂದ ಸಿಎಂ‌ ಮುಂದೂಡಲು ಹೇಳಿದ್ರು. ಈ ಭಾಗಕ್ಕೆ ಇದ್ದ ಕನಸ್ಸಿನ ಬಗ್ಗೆ ಸಿಎಂ ಗೆ ಮುಟ್ಟಿಸಿದ್ದೇವೆ. ಈಗ ಮತ್ತೆ ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸಮಯ ನಿಗದಿಯಾಗಿದ್ದು, ಜುಲೈ 2 ರಂದು ನಡೆಯಲಿದೆ. ಆಗ ಜಿಲ್ಲೆಗೆ ಉತ್ತಮ ಕೊಡುಗೆಗಳು ಸಿಗುತ್ತವೆ ಎಂಬ ಆತ್ಮ ವಿಶ್ವಾಸ ತಮಗೆ ಇದೆ ಎಂದರು. ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಡಾ.ವೈ.ನವೀನ್, ಕುಶಲ್ ಚೌಕ್ಸೆ, ಡಾ. ಎನ್.ಭಾಸ್ಕರ್, ಡಾ.ಎಸ್.ಎಸ್.ಮಹೇಶ್‌ಕುಮಾರ್, ಡಿ.ಎಚ್.ಅಶ್ವಿನ್, ತಹಸೀಲ್ದಾರ್.ಅನಿಲ್, ಜಿಲ್ಲಾ ಸರ್ವೆಕ್ಷಣಾಽಕಾರಿ ಡಾ.ಎಂ.ಸಿ.ಕೃಷ್ಣಪ್ರಸಾದ್, ಸುನೀಲ್ , ಡಾ.ಸುಂದರ್ ರಾಜ್,ಡಾ.ಪ್ರಶಾಂತ್, ಡಾ.ಮಂಜುಳ ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!