ಯೋಗ ದೇಹ, ಮನಸ್ಸು, ಆತ್ಮವನ್ನು ಒಂದುಗೂಡಿಸುವ ಸಾಧನ

KannadaprabhaNewsNetwork |  
Published : Jun 22, 2025, 11:47 PM IST
ಉ | Kannada Prabha

ಸಾರಾಂಶ

ಮಲ್ಲಯ್ಯನಪುರ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಮೈ ಭಾರತ್, ( ಮೇರಾ ಯುವ ಭಾರತ್ ) ನೆಹರು ಯುವ ಕೇಂದ್ರ, ರಂಗಸೌರಭ ಸಂಯುಕ್ತಾಶ್ರಯದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು” ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಲ್ಲಯ್ಯನಪುರ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಮೈ ಭಾರತ್, ( ಮೇರಾ ಯುವ ಭಾರತ್ ) ನೆಹರು ಯುವ ಕೇಂದ್ರ, ರಂಗಸೌರಭ ಸಂಯುಕ್ತಾಶ್ರಯದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು” ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಿತು.

ಈ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎಂ ಎನ್ ಚಂದ್ರ, ಯೋಗ ಎಂದರೆ ಸಂಸ್ಕೃತ ಪದವಾದ "ಯುಜ್ " ನಿಂದ ಬಂದಿದೆ, ಇದರ ಅರ್ಥ "ಒಗ್ಗೂಡಿಸುವುದು " ಅಥವಾ "ಸೇರಿಸುವುದು " ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಒಂದು ಸಾಧನವಾಗಿದೆ. ಇದು ಕೇವಲ ದೈಹಿಕ ವ್ಯಾಯಾಮಗಳಲ್ಲ, ಆದರೆ ಇದು ಒಂದು ಜೀವನ ವಿಧಾನವಾಗಿದ್ದು, ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಯೋಗ ಎಂಬುದು ಒಂದು ದಿನಕ್ಕೆ ಮಾತ್ರವಲ್ಲ ವರ್ಷದ ದಿನವಿಡೀ ಇರಲಿ ಎಂದರು.ರಂಗಸೌರಭ ಕಾರ್ಯದರ್ಶಿ ಗುರುರಾಜು ಎಸ್. ಮಾತನಾಡಿ, ಯೋಗದಿಂದ ನಮ್ಮ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೀಡ ಗೌರವಿಸಲಾಯಿತು.ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಯೋಗ ತರಬೇತಿದಾರರಾದ ನಾಗರಾಜು ಸಿ ರವರು ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಅನೇಕ ವಿಧದ ಯೋಗಗಳನ್ನು ಮಾಡಿಸಿದರು.ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಗರುಡರಾಜು ವಿ, ನಿಲಯ ಪಾಲಕರಾದ ರಾಜೇಶ ಎಸ್,ಎಂ, ಶಿಕ್ಷಕರಾದ ನಿಂಗರಾಜು, ಸೌಮ್ಯ, ಲೀಲಾವತಿ ಎಂ.ಬಿ, ರಶ್ಮಿ ಮಹದೇವಸ್ವಾಮಿ, ನಟರಾಜು, ರುಕ್ಕುಣಿ, ಕುಮಾರ್ ಇದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ