ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ವಿದ್ಯೆ ಕಲಿಯುವುದರ ಜೊತೆಗೆ ಇಂತಹ ಯೋಗ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪೋಷಕರು ಸಹಕಾರ ನೀಡಬೇಕು ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ತಿಳಿಸಿದ್ದಾರೆ.
- ನಿಮಿಷಾಂಬ ಕಲ್ಯಾಣ ಮಂಟಪದಲ್ಲಿ ಗುರುಪೂರ್ಣಿಮೆ: ಯೋಗ ಶಿಕ್ಷಕರಿಗೆ ಸನ್ಮಾನ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ವಿದ್ಯೆ ಕಲಿಯುವುದರ ಜೊತೆಗೆ ಇಂತಹ ಯೋಗ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪೋಷಕರು ಸಹಕಾರ ನೀಡಬೇಕು ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ತಿಳಿಸಿದರು.
ನಗರದ ಶಿವಾಜಿ ಸರ್ಕಲ್ ಬಳಿಯ ನಿಮಿಷಾಂಬ ಕಲ್ಯಾಣ ಮಂಟಪದಲ್ಲಿ ಸಂಕಲ್ಪ ಸೇವಾ ಫೌಂಡೇಷನ್ ಹಾಗೂ ಸಂಕಲ್ಪ ಯೋಗ ಶಾಲೆ-4ರ ಸಹಯೋಗದಲ್ಲಿ ಬುಧವಾರ ಸಂಜೆ ಗುರುಪೂರ್ಣಿಮೆ ಅಂಗವಾಗಿ ಯೋಗ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಮ್ಮ ರಾಜ್ಯದ ಯೋಗಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ. ಅದರಲ್ಲೂ ಈ ಹಳೇ ದಾವಣಗೆರೆ ಭಾಗದಲ್ಲಿ ಇಂತಹ ಯೋಗ ಗುರುಗಳಿಗೆ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಹಲವಾರು ಹೊಸ ಹೊಸ ಕಾಯಿಲೆಗಳು ಬರುತ್ತಿದ್ದು, ನಿತ್ಯ ವಾಕಿಂಗ್, ನಡಿಗೆ, ಯೋಗಾಭ್ಯಾಸ, ಧ್ಯಾನ ಮಾಡುವುದರಿಂದ ಇಂತಹ ಕಾಯಿಲೆಗಳಿಂದ ದೂರ ಇರಲು ಸಾಧ್ಯ. ಜೊತೆಗೆ ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿಯಾಗಲಿದೆ ಎಂದರು.
ಫೌಂಡೇಷನ್ ಅಧ್ಯಕ್ಷ ಜಿ.ಮಹಾಂತೇಶ ಮಾತನಾಡಿ, ಸಂಕಲ್ಪ ಯೋಗ ಶಾಲೆ-4 ಬಳಗದ ಯೋಗ ಶಿಕ್ಷಕರಿಗೆ ಇಂದು ಗುರುಪೂರ್ಣಿಮೆ ಅಂಗವಾಗಿ ಗೌರವಿಸಲಾಗುತ್ತಿದೆ. ಯೋಗಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ನಿತ್ಯ ಯೋಗದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಯೋಗ ಸಾಧಕರು, ಯೋಗ ಶಿಕ್ಷಕರಿಗೆ ಗೌರವಿಸಲಾಯಿತು. ಹಿರಿಯ ಯೋಗ ಶಿಕ್ಷಕರಾದ ಕೆ.ಕರಿಬಸಪ್ಪ, ಎಸ್.ದುಗ್ಗಪ್ಪ, ಮಾಜಿ ಮೇಯರ್ ಎಲ್.ಡಿ.ಗೋಣೆಪ್ಪ, ದುಗ್ಗಮ್ಮ ದೇವಸ್ಥಾನದ ಗೌರವ ಸದಸ್ಯರಾದ ಉಮೇಶ ಸಾಳಂಕಿ, ಹನುಮಂತ ರಾವ್ ಹೋಳಿಗೆ, ಗುರುಸೊಪ್ಪಿನ, ವನಿತಾ ಯೋಗ ಕೇಂದ್ರದ ಅಧ್ಯಕ್ಷ ಪ್ರಕಾಶ್ ಪಿ.ಕುರಡೇಕರ್, ಎಲ್.ಡಿ.ಸುರೇಶ, ಬಸಣ್ಣ, ಹೊನ್ನೇಶ, ದುಗ್ಗೇಶ, ಕಿರಣ್, ಶ್ರೀಕಾಂತ್, ಅಶೋಕರಾವ್, ಹೇಮಂತ್, ಉಲ್ಲಾಸ್, ಚನ್ನಮ್ಮ, ಶುಭಾ, ರೂಪ, ಲಕ್ಷ್ಮಮ್ಮ, ಗೀತಾ ಶ್ರೀಕಾಂತ್, ಕರಿಬಸಮ್ಮ, ಜ್ಯೋತಿ, ಸಾವಿತ್ರ, ಸದಸ್ಯರಾದ ಚನ್ನಬಸವ ಶೀಲವಂತ್, ಕೆ.ಸಿ.ಉಮೇಶ, ಎನ್.ಕೆ.ಕೊಟ್ರೇಶ್ ಇತರರು ಇದ್ದರು.
- - -
-31ಕೆಡಿವಿಜಿ33:
ದಾವಣಗೆರೆಯಲ್ಲಿ ಸಂಕಲ್ಪ ಸೇವಾ ಫೌಂಡೇಷನ್‌ನಿಂದ ನಡೆದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.