ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, 2014ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಪ್ರಾರಂಭಿಸಿದರು. ಯೋಗದಿಂದ ರೋಗ ದೂರ ಮಾಡಬಹುದು ಎಂದರು.
ಮುಂಡರಗಿ: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯೋಗ ವಿಶೇಷ ಸ್ಥಾನ ಪಡೆದಿದೆ ಎಂದು ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಅನ್ನದಾನೀಶ್ವರ ಮಠದ ಆವರಣದಲ್ಲಿ ತಾಲೂಕು ಆಡಳಿತ, ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಪತಂಜಲಿ ಯೋಗ ಸಮಿತಿ, ಅನ್ಮೋಲ್ ಯೋಗ ಕೇಂದ್ರ, ಹಿಮಾಲಯ ಯೋಗ ಕೇಂದ್ರ, ಚೈತನ್ಯ ಶಿಕ್ಷಣ ಸಮಿತಿ ಆಶ್ರಯದಲ್ಲಿ ಭಾನುವಾರ ಜರುಗಿದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು. ಯೋಗದಿಂದ ಮನುಷ್ಯನ ಆರೋಗ್ಯ ಸುಧಾರಿಸಲು ಅನುಕೂಲವಾಗುತ್ತದೆ ಎಂದರು.
ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, 2014ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಪ್ರಾರಂಭಿಸಿದರು. ಯೋಗದಿಂದ ರೋಗ ದೂರ ಮಾಡಬಹುದು. ಯೋಗದಿಂದ ಅನೇಕ ಕಾಯಿಲೆಗಳು ದೂರವಾಗುತ್ತವೆ. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲೊಂದು ಸರ್ಕಾರಿ ಯೋಗ ಕೇಂದ್ರ ಮಂಜೂರು ಮಾಡಬೇಕು ಎಂದರು.
ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಂಜುನಾಥ ಅಳವಂಡಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅನ್ಮೋಲ್ ಯೋಗ ಮತ್ತು ಆಯುರ್ವೇದಿಕ ಚಿಕಿತ್ಸಾ ಕೇಂದ್ರದ ನಿರ್ದೇಶಕಿ ಡಾ. ಮಂಗಳಾ ಇಟಗಿ, ಬಿಇಒ ಗಂಗಾಧರ ಅಣ್ಣೇಗೇರಿ, ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಸಾಮಾಜಿಕ ಅರಣ್ಯಾಧಿಕಾರಿ ಸುನಿತಾ ಬಿ.ಎಸ್., ಚೈತನ್ಯ ಶಿಕ್ಷಣ ಸಮಿತಿ ನಿರ್ದೇಶಕಿ ವೀಣಾ ಪಾಟೀಲ, ಸುವರ್ಣಾ ವಡ್ಡಟ್ಟಿ, ರೇಣುಕಾ ಅಳವಂಡಿ, ಕಾಶೀನಾಥ ಶಿರಬಡಗಿ, ಡಾ. ಚಂದ್ರಕಾಂತ ಇಟಗಿ, ಪ್ರಭಾವತಿ ಹಿರೇಮಠ, ಅಶೋಕ ಹುಬ್ಬಳ್ಳಿ, ಶಿವಕುಮಾರ ಕುರಿ, ಪ್ರಶಾಂತ ಗುಡದಪ್ಪನವರ ಉಪಸ್ಥಿತರಿದ್ದರು. ಅಶೋಕ ಸವಣೂರ ಸ್ವಾಗತಿಸಿದರು. ಹಿಮಾಲಯ ಯೋಗ ಕೇಂದ್ರದ ಮಂಜುಳಾ ಇಟಗಿ ಕಾರ್ಯಕ್ರಮ ನಿರೂಪಿಸಿದರು.ಅಂಬಿಗ ಗಂಗಾಮತ ಸಮುದಾಯದ ಜಾಗೃತಿ ಸಭೆ
ಗದಗ: ಲಕ್ಷ್ಮೇಶ್ವರ ತಾಲೂಕಿನ ಆದ್ರಹಳ್ಳಿ ಗ್ರಾಮದಲ್ಲಿ ಅಂಬಿಗ ಗಂಗಾಮತ ಸಮುದಾಯದ ಜಾಗೃತಿ ಸಭೆ ಜರುಗಿತು.ನಿಜಶರಣ ಅಂಬಿಗರ ಚೌಡಯ್ಯನವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಹಾದಿಮನಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣ ಮುಖ್ಯ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.ಸಭೆಯಲ್ಲಿ ಪ್ರಮುಖರಾದ ಶಂಕರಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಗುಡದಯ್ಯ ಅಂಬಿಗೇರ, ವಾಲೀಕಾರ, ಈರನಗೌಡ ರಾಹುತ, ಶಂಭುಗೌಡ ಪಾಟೀಲ, ಸುದೀಪ ಕಮತರ, ಮಹಾಂತೇಶ ಪಾಟೀಲ, ಸುಭಾಸಗೌಡ ಪಾಟೀಲ, ಶೋಭಕ್ಕ ಪಾಟೀಲ, ದೀಪಾ ಮಾಗಳ, ನೀಲವ್ವ ಪಾಟೀಲ, ಜಯಮ್ಮ ಪಾಟೀಲ, ನಿರ್ಮಲವ್ವ ಪಾಟೀಲ, ಸತ್ಯವ್ವ ತಳವಾರ, ಮಂಜಪ್ಪ ಸುಣಗಾರ, ಲಲಿತಾ ರಾಹುತ, ಯಮನೂರಗೌಡ ಪಾಟೀಲ, ಮಹಾದೇವಕ್ಕ ಪಾಟೀಲ ಹಾಗೂ ಭೀಮವ್ವ ಪಾಟೀಲ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.