ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ: ಎಚ್.ಶಿವಾನಂದ

KannadaprabhaNewsNetwork |  
Published : Jun 22, 2026, 02:30 AM IST
ಹರಪನಹಳ್ಳಿಯ ಎಚ್ ಪಿ ಎಸ್‌ ಪ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಯೋಗ ಮಾಡುತ್ತಿರುವುದು. | Kannada Prabha

ಸಾರಾಂಶ

ಇಂದು ಬದಲಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ.

ಹರಪನಹಳ್ಳಿ: ದೈಹಿಕ ಹಾಗೂ ಮನಸ್ಸಿನ ಆರೋಗ್ಯಕ್ಕೆ, ಆತ್ಮವಿಶ್ವಾಸಕ್ಕಾಗಿ, ಏಕಾಗ್ರತೆ ಹೆಚ್ಚಿಸುವುದಕ್ಕಾಗಿ ಯೋಗ ಅವಶ್ಯಕವಾಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಚ್.ಶಿವಾನಂದ ಹೇಳಿದರು.ಪಟ್ಟಣದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ. ಎಚ್.ಪಿಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯೋಗ ನಮ್ಮ ಸಂಸ್ಕೃತಿಯ ಪ್ರಮುಖ ಭಾಗ. ಇಂದು ಬದಲಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ. ಯೋಗದಿಂದ ಸದೃಢ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೊಂದಲು ಸಾಧ್ಯ. ಇಂದಿನ ಮಕ್ಕಳಿಗೆ ಏಕಾಗ್ರತೆ ಒತ್ತಡದ ಬದುಕಿನಿಂದ ದೂರವಿರಲು ಯೋಗ ಅತ್ಯಂತ ಮಹತ್ವದಾಗಿದೆ. ಯೋಗದಿಂದ ಮಾನಸಿಕ, ಶಾರೀರಿಕವಾಗಿ ಆರೋಗ್ಯ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಯೋಗಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಪ್ರತಿದಿನ ಅರ್ದ ಗಂಟೆ ಯೋಗ ಅಭ್ಯಾಸ ಮಾಡಿದರೆ ಶ್ರದ್ಧೆ, ಆತ್ಮಸ್ಥೈರ್ಯ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು.

ವಿದ್ಯಾರ್ಥಿಗಳು ಮಾನಸಿಕ ಆರೋಗ್ಯಕ್ಕಾಗಿ ನಿತ್ಯ ಯೋಗ, ಪ್ರಾಣಾಯಾಮ, ಧ್ಯಾನ ಮಾಡುವುದರಿಂದ ರೋಗದಿಂದ ದೂರ ಇರಬಹುದು. ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಶಿವಗಂಗಮ್ಮ ಪಿ. ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಯೋಗ ಸಹಕಾರಿ ಮನಸ್ಸುನ್ನು ನಿಯಂತ್ರಣದಲ್ಲಿರಡಲು ಹಾಗೂ ಸಮಸ್ಥಿತಿ ಕಾಪಾಡಲು ಯೋಗ ಒಳ್ಳೆಯದು ಯೋಗದಿಂದ ಹೃದಯ ಸಂರಕ್ಷಣೆ ಶರೀರ ದೃಢತೆ, ಮಾನಸಿಕ ಸ್ವಾಸ್ಥ್ಯ, ಶರೀರದ ಬೆಳವಣಿಗೆ ಸಾದಾ ಕ್ರಿಯಾಶೀಲತೆ ಮತ್ತು ಚಲನಶೀಲತೆಯಿಂದ ಇರಲು ಯೋಗ ಸಹಕಾರಿಯಾಗಿದೆ ಎಂದರು.

ಉಪನ್ಯಾಸಕರಾದ ಬಸವರಾಜಪ್ಪ ಸಿ.ಎಸ್., ರವೀಂದ್ರ ಕೆ.ಬಿ, ವೀರೇಶ್ ಎಂ.ಎಸ್., ಮಹಾಲಿಂಗಪ್ಪ ಬಿ. ಗೌಡರ, ಶ್ವೇತಾ ಎಂ.ಬಿ., ಗುರುಬಸವರಾಜ್ ಎಚ್., ಅವಿನಾಶ್, ಸೌಭಾಗ್ಯ, ಸುಮಾ, ಕಾಲೇಜಿನ ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಗೆ ಯಾವುದೇ ಮಿತಿ ಇರುವುದಿಲ್ಲ: ತಹಸೀಲ್ದಾರ
ಬ್ಯಾಂಕ್ ಖಾತೆಯ ಹಣಕ್ಕಿಂತ ಆರೋಗ್ಯವೇ ನಿಜವಾದ ಆಸ್ತಿ: ಎಡಿಸಿ ಬಾಲಕೃಷ್ಣ