ಸದೃಢ ದೇಹ, ಮನಸ್ಸು ಹೊಂದಲು ಯೋಗ ಅಗತ್ಯ: ರವಿ ದಂಡಿನ

KannadaprabhaNewsNetwork |  
Published : Jun 23, 2024, 02:03 AM IST
21 ರೋಣ 2.  ಕೆ .ಎಸ್. ಎಸ್ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ರವಿ ದಂಡಿನ ಮಾತನಾಡಿದರು. | Kannada Prabha

ಸಾರಾಂಶ

ಇಂದಿನ ಯುವ ಜನತೆ ದೈಹಿಕ ಶ್ರಮದಿಂದ ದೂರ ಉಳಿಯುತ್ತಿದ್ದು, ಇದರಿಂದಾಗಿ ಸಣ್ಣ ವಯಸ್ಸಿನಲ್ಲಿ ಸ್ಥೂಲಕಾಯದ ಪರಿಣಾಮ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ರವಿ ದಂಡಿನ ಹೇಳಿದರು.

ರೋಣ: ಯೋಗ ಪ್ರಾಚೀನ ಭಾರತದ ಆರೋಗ್ಯ ಕ್ಷೇತ್ರದ ಮಹಾನ್ ಸಾಧನೆಯಾಗಿದ್ದು, ಯುವಜನತೆ ಸದೃಢ ದೇಹ ಮತ್ತು ಮನಸ್ಸು ಹೊಂದಲು ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ರವಿ ದಂಡಿನ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಕೆ.ಎಸ್.ಎಸ್. ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಕನಕದಾಸ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯ ಮತ್ತು ಶರಣಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಕೆಎಸ್‌ಎಸ್‌ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನ ಉದ್ದೇಶಿಸಿ ಅವರು ಮಾತನಾಡಿದರು. ಇಂದಿನ ಯುವ ಜನತೆ ದೈಹಿಕ ಶ್ರಮದಿಂದ ದೂರ ಉಳಿಯುತ್ತಿದ್ದು, ಇದರಿಂದಾಗಿ ಸಣ್ಣ ವಯಸ್ಸಿನಲ್ಲಿ ಸ್ಥೂಲಕಾಯದ ಪರಿಣಾಮ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಯೋಗ ದೇಹದ ಬೆಳವಣಿಗೆ ಸಮರ್ಪಕವಾಗಿರಲು ಸಹಕಾರಿಯಾಗಿದೆ. ಆದ್ದರಿಂದ ಯುವ ಜನತೆ ನಿತ್ಯ ಯೋಗ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಯೋಗ ಪ್ರಾಚೀನ ಭಾರತ ವಿಶ್ವಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ. ಅದನ್ನು ಪ್ರಸ್ತುತ ದಿನಮಾನಗಳಲ್ಲಿ ಜಗತ್ತಿನಾದ್ಯಂತ ಮುನ್ನೆಲೆಗೆ ತಂದು ಮತ್ತೆ ಯೋಗವನ್ನು ಜಗದ್ವಿಖ್ಯಾತಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಪ್ರಾಚೀನ ಯೋಗ ಪರಂಪರೆಯನ್ನು ಮುಂದುವರಿಸಿ, ರಕ್ಷಿಸಿ, ಶ್ರೀಮಂತಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಬಿಜೆಪಿ ಮುಖಂಡ ಅಶೋಕ ನವಲಗುಂದ, ಅಶೋಕ ದೇಶಣ್ಣವರ, ಯೋಗಗುರು ಶಿವಕುಮಾರ ದೇಶಣ್ಣವರ, ಪ್ರಾಚಾರ್ಯ ಸಿ.ಬಿ. ಪೊಲೀಸ್‌ಪಾಟೀಲ್‌, ಎ.ಎಚ್‌. ನಾಯ್ಕರ, ಉಪನ್ಯಾಸಕ ಎಂ.ಎಸ್. ದಳವಾಯಿ, ಕೆ.ಕೆ. ಹಿರೇಕಲ್ಲಪ್ಪನವರ, ಎಂ.ಎಚ್. ನಾಯ್ಕರ, ಎಸ್.ವಿ. ಸಂಕನಗೌಡ್ರ, ಪಿ.ಎಸ್. ಹಿರೇಮಠ, ಬಿ.ಎನ್. ಸುಗ್ಗಿ ಹಾಗೂ ಪದವಿ, ಪದವಿಪೂರ್ವ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಇದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ