ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಬಹಳ ಮುಖ್ಯ: ಡಾ.ಸಿ.ಎ.ಅರವಿಂದ್

KannadaprabhaNewsNetwork |  
Published : Jun 22, 2025, 11:48 PM IST
22ಕೆಎಂಎನ್ ಡಿ31 | Kannada Prabha

ಸಾರಾಂಶ

ದೈಹಿಕ ಶ್ರಮ ಇಲ್ಲದ ಕಾರಣ ಅನೇಕ ರೋಗಗಳು ಮನುಷ್ಯನನ್ನು ಆವರಿಸುತ್ತಿದೆ. ಆರೋಗ್ಯವಂತರಾಗಿರಲು ಕನಿಷ್ಠ ಎರಡು ಗಂಟೆಯಾದರೂ ದೇಹವನ್ನು ದಂಡಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಬೌದ್ಧಿಕ ಜ್ಞಾನದ ಬೆಳವಣಿಗೆಗೆ ಶಿಕ್ಷಣ ಎಷ್ಟು ಮುಖ್ಯವೋ, ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಅಷ್ಟೇ ಮುಖ್ಯವಾಗಿದೆ ಎಂದು ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್ ಹೇಳಿದರು.

ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆ ಡಾ.ಎಂ.ಎಸ್.ಕೃಷ್ಣಕುಮಾರ್ ಸಭಾಂಗಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಒನ್ ಅರ್ಥ್ ಒನ್ ಹೆಲ್ತ್ ಹಾಗೂ ಯೋಗದ ನಡೆ ಶಾಲೆಗಳ ಕಡೆ ಎಂಬ ಘೋಷ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ಮಾತನಾಡಿ, ದೈಹಿಕ ಶ್ರಮ ಇಲ್ಲದ ಕಾರಣ ಅನೇಕ ರೋಗಗಳು ಮನುಷ್ಯನನ್ನು ಆವರಿಸುತ್ತಿದೆ. ಆರೋಗ್ಯವಂತರಾಗಿರಲು ಕನಿಷ್ಠ ಎರಡು ಗಂಟೆಯಾದರೂ ದೇಹವನ್ನು ದಂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಪರಿಸರ ಮತ್ತು ಯೋಗಕ್ಕೆ ಮಹತ್ವ ನೀಡಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ತಹಸೀಲ್ದಾರ್ ಎಸ್.ಸಂತೋಷ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ.ಕುಮಾರ್, ಡಾ.ಮಣಿಕರ್ಣಿಕ ಶಿಕ್ಷಕರಾದ ಧನಂಜಯ, ಕೇಶವ, ಪತಂಜಲಿ ಸಮಿತಿಯ ಜಯರಾಮ್, ಎಚ್.ಎನ್.ವಿಜಯಕುಮಾರ್, ಚಂದ್ರಶೇಖರಯ್ಯ, ಎಸ್.ಎ.ಮಲ್ಲೇಶ್ ಇತರರು ಇದ್ದರು.ನಿಟ್ಟೂರು ಗ್ರಾಮದಲ್ಲಿ ಭೂಮಿಪೂಜೆ:

ಹಲಗೂರು ಸಮೀಪದ ನಿಟ್ಟೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 1 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಮರಿಸ್ವಾಮಿ, ದಿವ್ಯ ಕುಮಾರ್, ಸೋಮಶೇಖರ್, ಮುಖಂಡರಾದ ಚಂದ್ರಕುಮಾರ್, ಕುಂತೂರು ಗೋಪಾಲ್, ರಾಮಲಿಂಗನಾಯಕ್, ತಿಮ್ಮರಾಜು, ರವಿಕುಮಾರ್, ಸಾಗ್ಯ ಶಂಕರ್, ಇಂಜಿನಿಯರ್ ಸೋಮಶೇಖರ್, ಪಿಡಿಓ ಮಂಗಳ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ