ಅಣ್ಣೀಗೆರೆ ಗ್ರಾಮದಲ್ಲಿ ಶರಣರ ಬೆಳದಿಂಗಳು, ವಿಶ್ವ ಯೋಗ ದಿನಾಚರಣೆ
ದ್ವೇಷ, ಅಸೂಯೆ ಮತ್ತು ಹೊಟ್ಟೆಕಿಚ್ಚಿನ ಭಾವನೆ ಮರೆಯಾಗಿ ಮಾನವೀಯತೆ ಕಹಳೆ ಎಲ್ಲೆಡೆ ಮೊಳಗಲಿ ಎಂಬ ಮಾತಿನ ಜೊತೆ ವಸುದೈವ ಕುಟುಂಬಕಂ ಮಂತ್ರ ಸಾರಿದ್ದು ಯೋಗ ಎಂದು ಶಿಕ್ಷಕ ಯಗಟಿ ಪ್ರಹ್ಲಾದ್ ಅಭಿಪ್ರಾಯಪಟ್ಟರು
ತಾಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಯಶಸ್ವಿನಿ ಯೋಗ ಸಂಸ್ಥೆ ಮತ್ತು ಅಣ್ಣಿಗೆರೆ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಮತ್ತು ವಿಶ್ವ ಯೋಗ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.2014ರ ಸೆ.27ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಸ್ತಾಪ ಮಾಡಿದಾಗ ಪ್ರಪಂಚದ ಬಹಳಷ್ಟು ರಾಷ್ಟ್ರಗಳು ಆಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿ ವರ್ಷ ಜೂ. 21 ರಂದು ವಿಶ್ವಯೋಗ ದಿನಾಚರಣೆ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಲಾಯಿತು. ಮೊದಲ ವರ್ಷವೇ 192 ರಾಷ್ಟ್ರಗಳು 250 ನಗರಗಳಲ್ಲಿ 200 ಕೋಟಿಗೂ ಹೆಚ್ಚು ಜನರು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಂಗಟಗೆರೆ ಶ್ರೀಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ಕೆ. ನಾಗ ರಾಜಪ್ಪ ಮಾತನಾಡಿ ಅಣ್ಣಿಗೆರೆ ಗ್ರಾಮದಲ್ಲಿರುವ ಯಶಸ್ವಿನಿ ಯೋಗ ಸಂಸ್ಥೆ ಉಚಿತವಾಗಿ ಯೋಗದ ಬಗ್ಗೆ ಮಕ್ಕಳಿಂದ ವಯೋವೃದ್ಧರವರೆಗೆ ಅರಿವು ಮೂಡಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಯಳನಡು ಸಂಸ್ಥಾನದ ಶ್ರೀ ಜ್ಞಾನ ಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ದೊಡ್ಡ ಮಠ ಕೆ.ಬಿದರೆ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಎಫ್.ಎಸ್.ನಲ್ಲಿ 98 ನೇ ರ್‍ಯಾಂಕ್ ಗಳಿಸಿದ ಸೋಮನಹಳ್ಳಿ ವಿಶ್ವಾಸ್ ರನ್ನು ಅಭಿನಂದಿಸಲಾಯಿತು.
ಕಡೂರು ತಾಾಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ನಡೆದ ಶರಣರ ಬೆಳದಿಂಗಳು ಮತ್ತು ವಿಶ್ವ ಯೋಗ ದಿನಾಚರಣೆಯಲ್ಲಿ ಐ.ಎಫ್.ಎಸ್.ನಲ್ಲಿ 98 ನೇ ರಾಂಕ್ ಗಳಿಸಿದ ಸೋಮನಹಳ್ಳಿ ವಿಶ್ವಾಸ್ ರನ್ನು ಗೌರವಿಿಸಲಾಯಿತು.