ಅಮೃತ ಸರೋವರ ದಡದಲ್ಲಿ ಯೋಗ

KannadaprabhaNewsNetwork |  
Published : Jun 22, 2025, 01:18 AM IST
21ಕೆಪಿಎಲ್23 ಅಂತರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯತಿ ಹಾಗು ಕೆರೆ ಅಭಿವೃದ್ದಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಶನಿವಾರ ಸಾಮೂಹಿಕ ಯೋಗ | Kannada Prabha

ಸಾರಾಂಶ

ಆಹಾರ ಪದ್ಧತಿ ಮುಖ್ಯವಾಗಿದ್ದು ಬದಲಾವಣೆ ಮಾಡಿಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇಂದು ಒತ್ತಡದ ಜೀವನ ಸಾಗಿಸುತ್ತಿರುವ ನಾವು ಒಂದು ಗಂಟೆಯಾದರೂ ಯೋಗ ಮತ್ತು ಪ್ರಾಣಾಯಾಮ ರೂಢಿಸಿಕೊಳ್ಳಬೇಕು.

ಕೊಪ್ಪಳ:

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಗಿಣಿಗೇರಾದ ಅಮೃತ ಸರೋವರ ದಡದಲ್ಲಿ ಶನಿವಾರ ಸಾಮೂಹಿಕ ಯೋಗ ಮಾಡಲಾಯಿತು.

ಗಿಣಿಗೇರಿ ಕೆರೆ ಸಮಿತಿ ಅಧ್ಯಕ್ಷ ಸುಬ್ಬಣ್ಣಚಾರ ಮಾತನಾಡಿ, ಇಂದು ಆಹಾರ ಪದ್ಧತಿ ಮುಖ್ಯವಾಗಿದ್ದು ಬದಲಾವಣೆ ಮಾಡಿಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇಂದು ಒತ್ತಡದ ಜೀವನ ಸಾಗಿಸುತ್ತಿರುವ ನಾವು ಒಂದು ಗಂಟೆಯಾದರೂ ಯೋಗ ಮತ್ತು ಪ್ರಾಣಾಯಾಮ ರೂಢಿಸಿಕೊಳ್ಳಬೇಕು ಎಂದರು.

ಕಾಮನೂರು ಆಯುಷ್ ಆಸ್ಪತ್ರೆಯ ಯೋಗ ವಿಭಾಗದ ಡಾ. ಕಳಕೇಶ ಮಾತನಾಡಿ, ಮನಸ್ಸು ಮತ್ತು ದೇಹ ಆರೋಗ್ಯವಾಗಿರಬೇಕಿದ್ದರೆ ಕ್ರಮಬದ್ಧವಾಗಿ ಯೋಗಭ್ಯಾಸ ರೂಢಿಸಿಕೊಂಡು ಉಳಿದವರಿಗೂ ತಿಳಿಸಿಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗ ಅಭ್ಯಾಸ ಮತ್ತು ಪ್ರಾಣಾಯಮ ಭಂಗಿಗಳನ್ನು ಡಾ. ಕಳಕೇಶ್, ದೈಹಿಕ ಶಿಕ್ಷಕ ಬಸನಗೌಡ ಮಾಹಿತಿ ನೀಡಿದರು. ಪಿಡಿಒ ಮಂಜುಳಾದೇವಿ ಕಾರ್ಯಕ್ರಮ ನಿರ್ವಹಿಸಿದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ಫಕೀರಪ್ಪ ವಡ್ಡರ, ಸದಸ್ಯರಾದ ಕರಿಯಪ್ಪ ಮೇಟಿ, ರಂಜಿತಾ ಚವ್ಹಾಣ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಿಡಿಒ ಮಂಜುಳಾದೇವಿ ಹೂಗಾರ, ಕೊಟ್ರಬಸಯ್ಯ, ಯಮನೂರಪ್ಪ ಚವ್ಹಾಣ, ನೀಲಪ್ಪ ಮೂರಮನಿ, ಗುರಪ್ಪ ಗುಡೇಕಾರ, ಶಂಕರ ಲಮಾಣಿ, ಹನಮೇಶ ನಾಯಕ, ಕೆರೆ ಅಭಿವೃದ್ಧಿ ಸದಸ್ಯ ಅನಿಲ್ ಜಾನಾ, ಮುಖ್ಯಶಿಕ್ಷಕ ಸದಾನಂದ, ಗ್ರಾಪಂ ಕಾರ್ಯದರ್ಶಿ ಮಂಜುನಾಥ, ಸಿಬ್ಬಂದಿ ಈಶ್ವರಯ್ಯ ಪೊಲೀಸ್‌ ಪಾಟೀಲ, ರಾಜಾ, ರಾಜಾಭಕ್ಷಿ, ಆಶಾ ಕಾರ್ಯಕರ್ತರು, ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ