ಮಾನಸಿಕ ಒತ್ತಡ ನಿವಾರಣೆಗೆ ಪ್ರತಿಯೊಬ್ಬರಿಗೂ ಯೋಗ ಅವಶ್ಯಕ: ಎಸ್.ವಿ.ಲೋಕೇಶ್

KannadaprabhaNewsNetwork |  
Published : Jun 22, 2025, 01:18 AM IST
21ಕೆಎಂಎನ್ ಡಿ15 | Kannada Prabha

ಸಾರಾಂಶ

ಯೋಗದಿಂದ ಹಲವು ರೋಗಗಳನ್ನು ದೂರ ಮಾಡಬಹುದು ಎನ್ನುವ ಮಹತ್ವವನ್ನು ಅರಿತು ಪಟ್ಟಣದಲ್ಲಿ ಅವಶ್ಯಕತೆದ ಜೊತೆಗೆ ಬೇಡಿಕೆ ಇರುವ ಯೋಗ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮನುಷ್ಯನ ಮಾನಸಿಕ ಒತ್ತಡದ ಬದುಕು ನಿವಾರಣೆಗಾಗಿ ಪ್ರತಿಯೊಬ್ಬರಿಗೂ ಯೋಗ ಮಾಡುವುದು ಅತ್ಯವಶ್ಯಕವಾಗಿದೆ ಎಂದು ತಹಸೀಲ್ದಾರ್ ಎಸ್.ವಿ ಲೋಕೇಶ್ ತಿಳಿಸಿದರು.

ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪುರಾತನ ಪರಂಪರೆಯಾದ ಯೋಗವನ್ನು ವಿಶ್ವಕ್ಕೆ ಪಸರಿಸಬೇಕೆಂಬ ಉದ್ದೇಶದಿಂದ ಘೋಷಣೆಯಾದ ವಿಶ್ವ ಯೋಗ ದಿನವನನು ಹಲವು ದೇಶಗಳು ಬೆಂಬಲಿಸಿ ಆಚರಿಸುವ ಮೂಲಕ ಯೋಗ ಮಹತ್ವಕ್ಕೆ ಸಾಕ್ಷಿಯಾಗಿದೆ ಪ್ರಶಂಸೆ ವ್ಯಕ್ತಪಡಿಸಿದರು.

ದೈಹಿಕ ಮಾನಸಿಕ ಆರೋಗ್ಯಕ್ಕೆ ಯೋಗ ಮುಖ್ಯ. ವಿದ್ಯಾರ್ಥಿಗಳು ಯೋಗಾಭ್ಯಾಸ ಅಳವಡಿಸಿಕೊಂಡರೇ ಮನಸ್ಸನ್ನು ಹತೋಟಿಗೆ ಇಟ್ಟುಕೊಳ್ಳುವುದರ ಜೊತೆಗೆ ಓದಿದ ವಿಷಯಗಳು ಅರ್ಥವಾಗುವ ಮನಸ್ಥಿತಿಯನ್ನು ಹೊಂದಬಹುದಾಗಿದೆ ಎಂದರು.

ಯೋಗದಿಂದ ಹಲವು ರೋಗಗಳನ್ನು ದೂರ ಮಾಡಬಹುದು ಎನ್ನುವ ಮಹತ್ವವನ್ನು ಅರಿತು ಪಟ್ಟಣದಲ್ಲಿ ಅವಶ್ಯಕತೆದ ಜೊತೆಗೆ ಬೇಡಿಕೆ ಇರುವ ಯೋಗ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ನೀಡುವ ಭರವಸೆ ನೀಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯ ಮಹೇಶ್‌ಕುಮಾರ್ ಮಾತನಾಡಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಉಚಿತವಾಗಿ ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಸಾವಯವ ಆಹಾರ ಸೇವನೆ ಮಾಡಿದರೇ ರೋಗದಿಂದ ಮುಕ್ತಿ ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಮುಖರಾದ ದೊಡ್ಡಣ್ಣ, ಶ್ರೀನಿಧಿ, ಲೀಲಾ, ಶಶಿಕಲಾ ಯೋಗ ಶಿಕ್ಷಕರಾದ ವೇಣುಗೋಪಾಲ್, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ