ನೆಲದ ಮೇಲೆಲ್ಲ, ನೀರಿನಲ್ಲಿ ತೇಲುತ್ತಾ ಯೋಗಾಸನ!

KannadaprabhaNewsNetwork |  
Published : Jun 22, 2025, 01:18 AM IST
ಧಾರವಾಡದ ನುಚ್ಚುಂಬ್ಲಿ ಬಾವಿಯಲ್ಲಿ ಯೋಗ ದಿನದ ಹಿನ್ನೆಲೆಯಲ್ಲಿ ಜಲಯೋಗ ಮಾಡಿದರು. | Kannada Prabha

ಸಾರಾಂಶ

ತುಂಬಿದ ಬಾವಿಯಿಂದ ನೀರಿಗೆ ಜಿಗಿಯುತ್ತಿರುವ ಈಜುಗಾರರು, ಮಕ್ಕಳು, ಯುವಕರು, ವೃದ್ಧರ ಸಮೇತ ಎಲ್ಲ ವಯಸ್ಕರಿಂದಲೂ ನೀರಿನ ಮಧ್ಯೆಯೇ ತೇಲುತ್ತ ವಿವಿಧ ಸಾಹಸಮಯ ಆಸನಗಳು, ನೆಲದ ಮೇಲೆ ಮಾಡುವ ರೀತಿಯಲ್ಲಿಯೇ ನೀರಿನಲ್ಲಿಯೂ ಯೋಗದ ವಿವಿಧ ಆಸನಗಳ ಪ್ರದರ್ಶನ ನೋಡುಗರ ಮನಕ್ಕೆ ಮುದ ನೀಡಿತು. ಇಲ್ಲಿಯ ಹೊಸಯಲ್ಲಾಪುರದ ಐತಿಹಾಸಿಕ ನುಚ್ಚಂಬ್ಲಿ ಬಾವಿಯಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ನಡೆದ ಜಲ ಯೋಗ ಪ್ರದರ್ಶನವಿದು.

ಧಾರವಾಡ: ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನ. ದೇಶಾದ್ಯಂತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಯೋಗ ದಿನಾಚರಣೆ ಅರ್ಥಪೂರ್ಣವಾಗಿ ನಡೆಯುತ್ತಿದೆ. ಈ ಮಧ್ಯೆ ನಗರದ ಐತಿಹಾಸಿಕ ಬಾವಿಯೊಂದರಲ್ಲಿ ನೀರಿನ ಮೇಲೆ ತೇಲುತ್ತಲೇ ವಿವಿಧ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿ ಗಮನ ಸೆಳೆಯಲಾಯಿತು.

ತುಂಬಿದ ಬಾವಿಯಿಂದ ನೀರಿಗೆ ಜಿಗಿಯುತ್ತಿರುವ ಈಜುಗಾರರು, ಮಕ್ಕಳು, ಯುವಕರು, ವೃದ್ಧರ ಸಮೇತ ಎಲ್ಲ ವಯಸ್ಕರಿಂದಲೂ ನೀರಿನ ಮಧ್ಯೆಯೇ ತೇಲುತ್ತ ವಿವಿಧ ಸಾಹಸಮಯ ಆಸನಗಳು, ನೆಲದ ಮೇಲೆ ಮಾಡುವ ರೀತಿಯಲ್ಲಿಯೇ ನೀರಿನಲ್ಲಿಯೂ ಯೋಗದ ವಿವಿಧ ಆಸನಗಳ ಪ್ರದರ್ಶನ ನೋಡುಗರ ಮನಕ್ಕೆ ಮುದ ನೀಡಿತು.

ಇಲ್ಲಿಯ ಹೊಸಯಲ್ಲಾಪುರದ ಐತಿಹಾಸಿಕ ನುಚ್ಚಂಬ್ಲಿ ಬಾವಿಯಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ನಡೆದ ಜಲ ಯೋಗ ಪ್ರದರ್ಶನವಿದು.

ಪ್ರತಿ ವರ್ಷ ಗಣೇಶನ ಹಬ್ಬದಲ್ಲಿ ಗಣೇಶ ವಿಸರ್ಜನೆ ಮಾಡಿದ ಬಳಿಕ, ಮಹಾನಗರ ಪಾಲಿಕೆ ಈ ಬಾವಿಯನ್ನು ಸ್ವಚ್ಛ ಮಾಡಿಕೊಡುತ್ತದೆ. ಆ ಬಳಿಕ ಸ್ಥಳೀಯ ಯುವಕರೇ ಈ ಬಾವಿಯನ್ನು ನಿರ್ವಹಿಸುವ ಮೂಲಕ, ನಿತ್ಯ ಈಜಿನ ಜೊತೆಗೆ, ಮಕ್ಕಳಿಗೆ ಈಜು ಮತ್ತು ಜಲಯೋಗವನ್ನು ಉಚಿತವಾಗಿಯೇ ಕಲಿಸುತ್ತಿದ್ದಾರೆ. ಹೀಗಾಗಿ ಯೋಗ ದಿನವಾದ ಹಿನ್ನೆಲೆ ಅವರೆಲ್ಲರೂ ಜಲ ಯೋಗಾಸನಗಳನ್ನು ಪ್ರದರ್ಶಿಸಿದರು.

ಸಾಮಾನ್ಯವಾಗಿ ಯೋಗವನ್ನು ನೆಲದ ಮೇಲೆ ಮ್ಯಾಟ್‌ ಹಾಕಿಕೊಂಡೇ ಮಾಡಲಾಗುತ್ತದೆ. ಆದರೆ ನೀರಿನ ಮೇಲೆ ತೇಲುತ್ತ ಯೋಗಾಸನ ಕಷ್ಟಸಾಧ್ಯ. ಇದಕ್ಕೆ ಸಾಕಷ್ಟು ತಯಾರಿಯೂ ಬೇಕು. ಮುಂಜಾಗ್ರತೆ ಸಹ ವಹಿಸಬೇಕಿರುತ್ತದೆ. ಹೀಗಾಗಿ ಕರಗತ ಮಾಡಿಕೊಂಡವರು ಮಾತ್ರವೇ ಆಳವಾದ ಈ ಬಾವಿಯಲ್ಲಿ ಜಲಯೋಗದ ಪ್ರಕಾರಗಳಾದ ಜಲ ಭದ್ರಾಸನ, ಕುಂಭಾಸನ, ಶವಾಸನ, ಶಿರ್ಷಾಸನಗಳನ್ನು ಪ್ರದರ್ಶಿಸಿದರು. ಈ ಆಸನಗಳಿಂದ ಆರೋಗ್ಯಕ್ಕೂ ತುಂಬಾ ಅನುಕೂಲ ಇದೆ. ಈ ಆಸನಗಳಿಂದ ಕೊಬ್ಬಿನಾಂಶ ಕರಗುತ್ತದೆ. ದೇಹದೊಳಗಿನ ವಿಷಕಾರಿ ಅನಿಲಗಳು ಹೊರಹೊಗುತ್ತದೆ. ಶ್ವಾಸಕೋಶ ನಿಯಂತ್ರಣದಲ್ಲಿ ಇರುತ್ತದೆ. ಮೆದುಳು ಸಹ ಶಾಂತವಾಗಿದ್ದು, ಯಾವುದೇ ರೀತಿಯಲ್ಲಿ ದೇಹದೊಳಗೆ ಆರೋಗ್ಯ ಏರಿಳಿತಗಳು ಆಗದಂತೆ ನಿಯಂತ್ರಿಸುತ್ತವೆ ಎಂದು ಜಲಯೋಗ ತರಬೇತುದಾರ ಸಂತೋಷಕುಮಾರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ