ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಮುಖ್ಯ: ಲೀಲಾ ಸೋಮಶೇಖರಯ್ಯ

KannadaprabhaNewsNetwork |  
Published : Jun 23, 2025, 11:48 PM IST
11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಯೋಗ ನಮ್ಮ ಆರೋಗ್ಯಕ್ಕೆ ಸಂಜೀವಿನಿ, ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಯೋಗಾಭ್ಯಾಸ ಮುಖ್ಯ. ಯೋಗ ಕೋಟ್ಯಂತರ ಜನರ ಬದುಕು ಬದಲಿಸಿದೆ ಎಂದು ಅಮ್ಮ ಅಕಾಡೆಮಿ ಆಫ್ ಪ್ಲೇ ಸ್ಕೂಲ್ ಅಧ್ಯಕ್ಷ ಎಸ್.ಎಸ್. ಲೀಲಾ ಸೋಮಶೇಖಯ್ಯ ಹೇಳಿದರು.

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ । ವಿಶ್ವ ಸಂಗೀತ ದಿನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಯೋಗ ನಮ್ಮ ಆರೋಗ್ಯಕ್ಕೆ ಸಂಜೀವಿನಿ, ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಯೋಗಾಭ್ಯಾಸ ಮುಖ್ಯ. ಯೋಗ ಕೋಟ್ಯಂತರ ಜನರ ಬದುಕು ಬದಲಿಸಿದೆ ಎಂದು ಅಮ್ಮ ಅಕಾಡೆಮಿ ಆಫ್ ಪ್ಲೇ ಸ್ಕೂಲ್ ಅಧ್ಯಕ್ಷ ಎಸ್.ಎಸ್. ಲೀಲಾ ಸೋಮಶೇಖಯ್ಯ ಹೇಳಿದರು. ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಹಾಗೂ ಅಮ್ಮ ಅಕಾಡೆಮಿ ಆಫ್ ಪ್ಲೇ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಶ್ರೀ ಪ್ರಹರ್ಷಿತ ಶಾಲಾ ಆವರಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನದಲ್ಲಿ ಮಾತನಾಡಿದರು. ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ, ಯೋಗ ದೇಶದ ಹೆಮ್ಮೆ, ಯೋಗ ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗ ಮಾಡುವುದರಿಂದ ತಾಳ್ಮೆ, ಮನಸ್ಸಿನ ಶಾಂತಿ, ಜ್ಞಾನಾಭಿವೃದ್ಧಿ, ಉತ್ತಮ ಆರೋಗ್ಯ ಹೀಗೆ ಹಲವಾರು ಉತ್ತಮ ಬೆಳವಣಿಗೆಯನ್ನು ಜೀವನದಲ್ಲಿ ಕಾಣಬಹುದು. ಭವಿಷ್ಯಕ್ಕೆ ಸುಂದರ ಬದುಕು ನೀಡಲು ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು. ಜೀವನದಲ್ಲಿ ಸಂಗೀತ ಸುಖ ದುಃಖದಲ್ಲಿ ನಮ್ಮ ಜೊತೆ ಇರುತ್ತದೆ. ಸಂಗೀತ ಮಾತ್ರ ಮಧುರ ಧ್ವನಿಯಲ್ಲಿ ಕೋಗಿಲೆ ಗಾನ ಕೇಳುವುದೇ ಚೆಂದ ಎಂದು ತಿಳಿಸಿದ ಅವರು ಅಂತಾರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನಾಚರಣೆ ಶುಭಾಶಯ ತಿಳಿಸಿದರು,ಶ್ರೀ ಪ್ರಹರ್ಷಿತ ವಿದ್ಯಾಶಾಲೆ ಆಡಳಿತಾಧಿಕಾರಿ ಅನೂಪ್ ಮಾತನಾಡಿ ಪ್ರತಿ ವರ್ಷ ಜೂ.21ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದ್ದೇವೆ. ಯೋಗ ನಮ್ಮ ಜೀವನದ ಶೈಲಿಯ ಪ್ರಮುಖ ಭಾಗ. ವಿದ್ಯಾರ್ಥಿಗಳು ಮತ್ತು ಪ್ರತಿಯೊಬ್ಬ ಮನುಷ್ಯರು ಮಾನಸಿಕ, ಬೌದ್ದಿಕ, ದೈಹಿಕ ಸದೃಢರಾಗಲು ಯೋಗದಿಂದ ಮಾತ್ರ ಸಾಧ್ಯ. ಮಕ್ಕಳಿಗೆ ದೇಹಕ್ಕೆ ಮತ್ತು ಮೆದುಳಿಗೆ ಹೆಚ್ಚಿನ ಪ್ರಯೋಜನಕಾರಿ, ಯೋಗ ಔಷಧಿಯಾಗಿ ಕೆಲಸ ಮಾಡುತ್ತದೆ ಇದನ್ನು ಮನಗಂಡ ಪ್ರಧಾನಿ ಮೋದಿಯವರು ಇಡೀ ಪ್ರಪಂಚಕ್ಕೆ ಯೋಗ ಪರಿಚಯಿಸಿದ ಕಾರಣ ಜೂ. 21ನ್ನು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಯೋಗ ಕಾರ್ಯಕ್ರಮದಲ್ಲಿ ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು, ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.22ಕೆಟಿಆರ್.ಕೆ.10ಃ

ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಹಾಗೂ ಅಮ್ಮ ಅಕಾಡೆಮಿ ಆಫ್ ಪ್ಲೇ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನ ಕಾರ್ಯಕ್ರಮ ನಡೆಯಿತು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ