ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತಶಯನ ಯೋಗ ಪ್ರಚಾರವು ವಿಶ್ವದ ಎಲ್ಲೆಡೆ ಹಾಗೂ ಎಲ್ಲ ವರ್ಗದಲ್ಲೂ ನಡೆಯುವ ಅವಶ್ಯಕತೆ ಇರುವುದರಿಂದ ಯೋಗ ಶಾಲಾ ಶಿಕ್ಷಕರು ಯೋಗಪಟುಗಳು ಹಾಗೂ ಆಸಕ್ತರೂ ಭಾಗವಹಿಸುವಂತೆ ಕೋರಿದರು.
ಈ ಶೃಂಗ ಸಭೆಯಲ್ಲಿ ಪದ್ಮಶ್ರೀ ಡಾ. ನಾಗೇಂದ್ರ, ದೇಶಿ ಕೇಂದ್ರ ಮಹಾಸ್ವಾಮಿಗಳು, ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಅರಳುಮಲ್ಲಿಗೆ ಪಾರ್ಥಸಾರತಿ, ಆಯುಷ್ ಆಯುಕ್ತರು ಜಿ-20 ದೇಶಗಳ ಪ್ರಮುಖ ನಾಯಕರು ಇತರರು ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸಭಿಕರೊಡನೆ ಸಂವಾದ ನಡೆಸಲಿದ್ದಾರೆ .ಶೃಂಗ ಸಭೆಯ ಉದ್ದೇಶ ವಿಶ್ವದಲ್ಲಿ ಯೋಗವನ್ನು ಜನಪ್ರಿಯಗೊಳಿಸುವುದು, ಯೋಗ ಕೇಂದ್ರಗಳನ್ನು ಆರಂಭಿಸುವುದು, ಆರೋಗ್ಯ ಪ್ರವಾಸೋದ್ಯಮ ಉತ್ತೇಜಿಸುವುದು ಆಗಿದೆ. ರೋಟರಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಪ್ರತಿ ಜಿಲ್ಲೆಗಳಲ್ಲೂ ಯೋಗ ಶೃಂಗ ಸಭೆ ಏರ್ಪಡಿಸುತ್ತಿದೆ. ರೋಟರಿಯ ಸುಮಾರು ಎರಡು ಲಕ್ಷ ಕುಟುಂಬಗಳು ಪಾಲ್ಗೊಳ್ಳಲಿವೆ ಎಂದೂ ಅನಂತಶಯನ ತಿಳಿಸಿದರು.18ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಯೋಗ ತಜ್ಞರು ಮತ್ತು ಅತಿಥಿಗಳು ಯೋಗ ಮತ್ತು ಧ್ಯಾನದ ಮೂಲಕ ವೈಯಕ್ತಿಕ ಸ್ವಾಸ್ಥ್ಯ ವೃತ್ತಿಪರ ಸ್ವಾಸ್ಥ್ಯ, ರಾಷ್ಟ್ರೀಯ ಸ್ವಾಸ್ಥ್ಯ, ಜಾಗತಿಕ ಸ್ವಾಸ್ಥ್ಯ ಹಾಗೂ ಇತ್ಯಾದಿ ವಿಚಾರ ಮಾತನಾಡಲಿದ್ದಾರೆ. ನಡು ನಡುವೆ ಯೋಗ ಪ್ರದರ್ಶನ, ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು ಇದರ ಸದುಪಯೋಗ ಪಡೆಯುವಂತೆಯೂ ಅವರು ಮನವಿ ಮಾಡಿದರು. ಯೋಗ ಸಮಾವೇಶದಲ್ಲಿ ನೋಂದಾವಣೆಗೆ ಮತ್ತು ವಿವರಕ್ಕೆ 9844576429 ಕರೆ ಮಾಡಬಹುದು.
ರೋಟರಿ ವಲಯ ಸಹಾಯಕ ಗವರ್ನರ್ ದೇವಣಿರ ತಿಲಕ್ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಸದಸ್ಯರು 89 ಕ್ಲಬ್ ಗಳಲ್ಲಿದ್ದು, ಜಗತ್ತಿನಲ್ಲಿ ರೋಟರಿ ಸಂಸ್ಥೆಯು 250 ದೇಶಗಳಲ್ಲಿ 12 ಲಕ್ಷ ಸದಸ್ಯರನ್ನು ಹೊಂದಿದೆ, ಇವರೆಲ್ಲರಿಗೂ ರೋಟರಿ ಇದೀಗ ಮೈಸೂರು ಯೋಗ ಶೃಂಗ ಸಮಾವೇಶದ ಮೂಲಕ ಯೋಗದ ಜಾಗೃತಿ ಸಾರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ವಲಯ ಸೇನಾನಿ ಸಂಪತ್ ಕುಮಾರ್, ಮಡಿಕೇರಿ ರೋಟರಿ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ, ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಹಾಜರಿದ್ದರು.