ಗೋಕರ್ಣದಲ್ಲಿ ಚಾಮೀ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ

KannadaprabhaNewsNetwork |  
Published : Jan 06, 2025, 01:01 AM IST
ಕಾರ್ಯಕ್ರಮ ಉದ್ಘಾಟಿಸುತ್ತಿರುವುದು | Kannada Prabha

ಸಾರಾಂಶ

ಯೋಗವು ಆರೋಗ್ಯಕ್ಕೆ ಆದ್ಯತೆ ಕೊಡುವುದರಿಂದ ವಿದ್ಯಾರ್ಥಿಗಳ ಮನಸ್ಸು ವಿಚಲಿತವಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.

ಗೋಕರ್ಣ: ಚಾಮೀ ವಿದ್ಯಾವಾಹಿನಿ ಟ್ರಸ್ಟ್ ವತಿಯಿಂದ ಇಲ್ಲಿನ ಶ್ರೀ ಭದ್ರಕಾಳಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ, ಪ್ರೌಢಾಶಾಲಾ ವಿದ್ಯಾರ್ಥಿಗಳಿಗೆ ಸೂಪರ್ ಬ್ರೇನ್ ಯೋಗಾ ಹಾಗೂ ಮೆಡಿಟೇಷನ್ ಆನ್ ಟ್ವಿನ್ ಹಾರ್ಟ್‌ ಯೋಗ ತರಬೇತಿ ಶಿಬಿರ ಶಾಲೆಯ ಸಭಾಭವನದಲ್ಲಿ ನಡೆಯಿತು.

ಹುಬ್ಬಳ್ಳಿಯ ಫುಡ್ ಫಾರ್ ದಿ ಹಂಗ್ರಿ ಫೌಂಡೇಷನ್‌ನ ವಿನಾಯಕ, ವಿವೇಕಾನಂದ ಹಾಗೂ ಕಲ್ಪನಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರಾಣಿಕ್ ಹೀಲಿಂಗ್ ಹಾಗೂ ವಿವಿಧ ಯೋಗಾಸನಾ ತರಬೇತಿ ನೀಡಿ ನಿತ್ಯ ಯೋಗಾಭ್ಯಾಸ ಮಾಡುವಂತೆ ತಿಳಿಸಿದರು. ಆರೋಗ್ಯಕ್ಕೆ ಆದ್ಯತೆ ಕೊಡುವುದರಿಂದ ವಿದ್ಯಾರ್ಥಿಗಳ ಮನಸ್ಸು ವಿಚಲಿತವಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆ ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ನಾವೆಲ್ಲರೂ ರಾಸಾಯನಿಕ ಯುಕ್ತವಾದ ಆಹಾರ ಸೇವನೆ ಮಾಡುವುದರೊಂದಿಗೆ ಅನೇಕ ರೋಗಗಳನ್ನು ನಾವು ಆಹ್ವಾನಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಸದೃಢವಾದ ಆರೋಗ್ಯ ಇಟ್ಟುಕೊಳ್ಳಬೇಕಾದರೆ ಕಾಲಕಾಲಕ್ಕೆ ಯೋಗ ಶಿಬಿರದ ತರಬೇತಿ ಪಡೆದು ನಾವು ಅವುಗಳನ್ನು ದಿನನಿತ್ಯ ಜೀವನದಲ್ಲಿ ವಿವಿಧ ಆಸನ, ಯೋಗಗಳನ್ನು ಮಾಡುವುದರಿಂದ ನಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆರೋಗ್ಯವಂತರಾಗಿ ಇರಲು ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭದ್ರಕಾಳಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕಿ ರೇವತಿ ಆರ್. ಮಲ್ಲನ್, ಚಾಮಿ ವಿದ್ಯಾ ವಾಹಿನಿ ಟ್ರಸ್ಟಿನ ಸದಸ್ಯರಾದ ಗಣಪತಿ ಅಡಿ, ಚಿತ್ರ ಕಲಾವಿದ ರವಿ ಗುನಗಾ ಉಪಸ್ಥಿತರಿದ್ದರು. ಕುಮಾರಿ ತನುಷ್‌ ಸಿ. ನಾಯ್ಕ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಆರ್.ಜಿ. ನಾವಡ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ. ನಾಯಕ, ವಿವೇಕ ಕೆ. ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಎರಡು ವಿಭಾಗಗಳ ವಿದ್ಯಾರ್ಥಿಗಳು ಶಿಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.ಸಾವಿತ್ರಿಬಾಯಿ ಫುಲೆ ಜನ್ಮದಿನೋತ್ಸವ

ಶಿರಸಿ: ಇಲ್ಲಿನ ಡಾ. ಅಂಬೇಡ್ಕರ ಸಭಾಭವನದಲ್ಲಿ ನಗರದ ಸಂತ ರವಿದಾಸ ಸಮಾಜ ಅಭಿವೃದ್ಧಿ ಸಮಿತಿ ವತಿಯಿಂದ ಪ್ರಥಮ ಮಹಿಳಾ ಶಿಕ್ಷಕಿ ಮಾತಾ ಸಾವಿತ್ರಿಬಾಯಿ ಫುಲೆಯವರ ೧೯೪ನೇ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು.ನಿವೃತ್ತ ಪ್ರಾಧ್ಯಾಪಕಿ ದಾಕ್ಷಾಯಣಿ ಪ್ರಭಾಕರ ಜೋಗಳೇಕರ ಮಾತನಾಡಿ, ಶತಮಾನಗಳ ಹಿಂದೆಯೆ ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣ ಸಾಕ್ಷಾತ್ಕಾರ ಮಾಡಿದ ಅವರಿಗೆ ಸಮಸ್ತ ಮಹಿಳೆಯರು ಕೃತಜ್ಞರಾಗಿರಬೇಕು ಎಂದರು.

ನಾಗರತ್ನಾ ಜೋಗಳೇಕರ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಕುಮಾರ್ ಬೋರಕರ, ಸಮಿತಿಯ ಅಧ್ಯಕ್ಷ ರಘು ಕಾನಡೆ, ಪ್ರಭಾಕರ ಜೋಗಳೇಕರ, ವಿನಾಯಕ ನಾಯ್ಕ, ಮನೋಜ ಪಾಲೇಕರ, ಸುಭಾಷ ಕಾನಡೆ ಅವರು ಸಾವಿತ್ರಿಬಾಯಿಯವರ ಜೀವನ, ಸಾಧನೆಯ ಕುರಿತು ಮಾತನಾಡಿದರು.

ಕಾರ್ಯಕ್ರದಮಲ್ಲಿ ನಾರಾಯಣ ನೇತ್ರೇಕರ, ಶ್ವೇತಾ ಬೋರಕರ, ಮಾದೇವ ಪಾವಸ್ಕರ, ಭುಜಂಗ ಬೋರಕರ, ಶಾಂತಲಾ ಜೋಗಳೇಕರ, ವಿನಾಯಕ ಕಾನಡೆ, ಮಹೇಂದ್ರ ಮುರ್ಡೆಶ್ವರ, ಕಿಶೋರ ಜೋಗಳೇಕರ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!