ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪತಂಜಲಿ ಯೋಗ ಕೂಟದ ಅನೇಕರು ಅತ್ಯುತ್ತಮ ಯೋಗ ಪಟುಗಳಿದ್ದು ಅವರ ಜೊತೆಯಲ್ಲಿ ಹೊಸಬರಿಗೂ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯೋಗ ಶಿಕ್ಷಕ ಗಣೇಶ್ ಬಾಬು ಯೋಗಾಸನ ಹೇಳಿಕೊಡುವ ಜತೆಗೆ ಪ್ರತೀ ಆಸನ ಮಾಡುವಾಗಲೂ ಆ ಆಸನದಿಂದ ದೊರೆಯುವ ಪ್ರಯೋಜನಗಳ ಬಗ್ಗೆ ವಿವರಿಸುತ್ತಾರೆ. ಯೋಗಾಸನ ನಮ್ಮ ದೈಹಿಕ ಆರೋಗ್ಯ ಕಾಪಾಡಿ, ದೇಹವನ್ನು ರೋಗ ಮುಕ್ತವಾಗಿಸುತ್ತದೆ. ಪ್ರಾಣಾಯಾಮ ನಮ್ಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಧ್ಯಾನ ನಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಯೋಗದ ಮಹತ್ಬ ತಿಳಿಸಿ, ಅರಿವು ಮೂಡಿಸುತ್ತಾರೆ.
ಪತಂಜಲಿ ಯೋಗಕೂಟದಲ್ಲಿ ೭೦ ವರ್ಷ ದಾಟಿದವರು ಅನೇಕರಿದ್ದಾರೆ. ಅವರು ಹಲವಾರು ವರ್ಷಗಳಿಂದ ಯೋಗ ಭವನದಲ್ಲಿ ಯೋಗಾಭ್ಯಾಸ ಮಾಡುತ್ತಾ, ಆರೋಗ್ಯ ಕಾಪಾಡಿಕೊಂಡು ಉತ್ತಮ ದೈಹಿಕ ಸಾಮಥ್ಯ ಹೊಂದಿದ್ದಾರೆ ಎಂದರು.ಹಿರಿಯ ಯೋಗಪಟುಗಳಾದ ವಾಸುದೇವಮೂರ್ತಿ, ಲೋಕೇಶ್, ನರಸಿಂಹ, ನಾರಾಯಣ, ಕರುಣಾಕರ ಗುಪ್ತಾ, ಲಲಿತಾ ದಯಾನಂದ್, ಸುಮಾ, ಧನಲಕ್ಷ್ಮೀ ಅವರೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಅನೇಕರು ತರಬೇತಿ ಪಡೆಯುತ್ತಿದ್ದಾರೆ.