ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಟ್ರೆಹಳ್ಳಿ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಲಕ್ಷ್ಮೀವೆಂಕಟೇಶ್ವರ, ಶ್ರೀ ಮಹಾಗಣಪತಿ ಹಾಗೂ ಸದ್ಗುರು ಶ್ರೀ ಯೋಗಿ ನಾರೇಯಣಸ್ವಾಮಿ ತಾತಯ್ಯನವರ ನೂತನ ಬಿಂಬ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಬಲಿಜ ಶ್ರೇಯ ಭವನ ಲೋಕಾರ್ಪಣೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಲ್ಯಾಣ ಮಂಟಪ ಯಾವ ಜಾತಿ, ಧರ್ಮಕ್ಕೂ ಸೀಮಿತವಾಗದೇ ಎಲ್ಲರಿಗೂ ಉಪಯೋಗವಾಗಲಿ. ಬಲಿಜ ಜನಾಂಗದಲ್ಲಿ ಯಶಸ್ವಿ ಉದ್ಯಮಿಗಳು, ನೌಕರರಿದ್ದು ಅವರು ಸಹ ಸಮಾಜದ ಏಳ್ಗೆ ಬೆಳವಣಿಗೆಗೆ ಶ್ರಮಿಸಬೇಕು. ಹೆದ್ದಾರಿ ಪಕ್ಕದ ಈ ಭವನ ಎಲ್ಲರಿಗೂ ಸದ್ಬಳಕೆಯಾಗಲಿ ಎಂದರು.ಗೌರಿಗದ್ದೆಯ ವಿನಯ್ ಗುರೂಜಿ ಮಾತನಾಡಿ, ಶ್ರೀರಾಮಚಂದ್ರ ಮರ್ಯಾದಾಪುರುಷೋತ್ತಮ. ಆತ ದೇವರು ಎಂಬುದಕ್ಕಿಂತ ಎಲ್ಲರಿಗೂ ಆದರ್ಶ ಪುರುಷ. ರಾಮನ ಆದರ್ಶ ನಮಗೆಲ್ಲ ಮಾದರಿ. ಸಣ್ಣ ಸಮುದಾಯವೊಂದರ ಜನರೆಲ್ಲ ಸೇರಿ ದೊಡ್ಡ ಭವನ ನಿರ್ಮಿಸಿರುವುದು ಅವರಲ್ಲಿನ ಕಾರ್ಯ ಕ್ಷಮತೆಗೆ ಸಾಕ್ಷಿ. ಇದು ಸರ್ವಜನಾಂಗದವರ ಕಲ್ಯಾಣ ಕಾರ್ಯಗಳಿಗೆ ನೆರವಾಗುವುದರ ಜೊತೆಗೆ ಬರುವ ಆದಾಯವನ್ನು ಸಮಾಜದ ಅಭಿವೃದ್ಧಿಗೆ, ಬಡ ಮಕ್ಕಳ ಶೈಕ್ಷಣಿಕ ಉನ್ನತಿಗೆ ಬಳಸಿ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ನಾ. ತಿಪ್ಪೇಸ್ವಾಮಿ ಮಾತನಾಡಿ, ಪರಿಶ್ರಮ ಹಾಕುವವರ ಜೊತೆ ಭಗವಂತನ ಆಶೀರ್ವಾದ ಸದಾ ಇರುತ್ತದೆ. ಸಚಿವ ಡಿ ಸುಧಾಕರ್ ಹಿಂದೆ ಶಾಸಕರಾಗಿದ್ದಾಗ 50 ಲಕ್ಷ ಅನುದಾನ ನೀಡಿದ್ದರು. ಆದರೆ ನಿವೇಶನ ಸಿಗದೇ ಅನುದಾನ ರದ್ದಾಯಿತು. ವೆಂಕಟಾಚಲ ಎಂಬುವವರು ನಿವೇಶನ ನೀಡಲು ಮುಂದೆ ಬಂದರು. ಭಗವಂತನ ಇಚ್ಛೆಯಿಂದ, ತಮ್ಮೆಲ್ಲರ ಸಹಕಾರದಿಂದ ತಾಲೂಕಿನಲ್ಲಿ ಭವ್ಯ ಭವನ ನಿರ್ಮಾಣವಾಗಿದೆ. ಶಾಲೆಗಳು, ಮನೆಗಳು, ದೇವಾಲಯಗಳು ಹೆಚ್ಚು ಹೆಚ್ಚು ನಿರ್ಮಾಣವಾಗುವ ಮೂಲಕ ಸಮಾಜ ಪರಿವರ್ತನೆಯ ಕೇಂದ್ರಗಳಾಗಬೇಕು ಎಂದರು.