ಸತತ ಪರಿಶ್ರಮದಿಂದ ಮಾತ್ರ ನಿಶ್ಚಿತ ಗುರಿ ಸಾಧನೆ ಸಾಧ್ಯ

KannadaprabhaNewsNetwork |  
Published : Sep 24, 2024, 01:47 AM ISTUpdated : Sep 24, 2024, 01:48 AM IST
ಅರಸೀಕೆರೆ ನಗರದ ಸೇವಾ ಸಂಕಲ್ಪ ಶಾಲೆಯಲ್ಲಿ  ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಖೋ.ಖೋ ಸ್ಪಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕರು ಮತ್ತು ಬಾಲಕೀಯರ ತಂಡವನ್ನು ಹಾಗೂ ತರಬೇತುದಾರರ ತಂಡವನ್ನು ವಿದ್ಯಾಸಂಸ್ಥೆ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಕ್ಕಳಿಗೆ ಸಂಸ್ಕಾರಯುತ ಮಾನವೀಯ ಮೌಲ್ಯಗಳ ಶಿಕ್ಷಣವನ್ನು ನೀಡುವ ಜತೆಗೆ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಯಶಸ್ಸು ಸಾಧಿಸಲು ಉತ್ತಮ ತರಬೇತಿ ನೀಡುತ್ತಿರುವ ಕಾರಣ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಖೋ.ಖೋ ಸ್ಪರ್ಧೆಯಲ್ಲಿ ಬಾಲಕರು ಹಾಗೂ ಬಾಲಕೀಯರ ತಂಡಗಳು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ತಾಲೂಕಿನ ಕ್ರೀಡಾಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದ್ದು, ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ತರಬೇತುದಾರ ರಾಹುಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಮಾತ್ರ ನಿಶ್ಚಿತ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬುದನ್ನು ನಗರದ ಸೇವಾ ಸಂಕಲ್ಪ ಶಾಲೆ ವಿದ್ಯಾರ್ಥಿಗಳು ಸಾಕ್ಷೀಕರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಅರಸೀಕೆರೆ ಖೋ,ಖೋ ತಂಡದ ತರಬೇತುದಾರ ರಾಹುಲ್ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಸೇವಾ ಸಂಕಲ್ಪ ಶಾಲೆಯಲ್ಲಿ ಕ್ರೀಡಾ ವಿಜೇತರಿಗೆ ಹಾಗೂ ತರಬೇತುದಾರರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲಿ ಸುಪ್ತ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ ಸನ್ಮಾರ್ಗದಲ್ಲಿ ಬೆಳೆಸುವುದು ಪೋಷಕರು ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಈ ಕಾರ್ಯದಲ್ಲಿ ಸೇವಾ ಸಂಕಲ್ಪ ಶಾಲೆ ಅತ್ಯಂತ ಕ್ರಿಯಾಶೀಲವಾಗಿದ್ದು, ಮಕ್ಕಳಿಗೆ ಸಂಸ್ಕಾರಯುತ ಮಾನವೀಯ ಮೌಲ್ಯಗಳ ಶಿಕ್ಷಣವನ್ನು ನೀಡುವ ಜತೆಗೆ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಯಶಸ್ಸು ಸಾಧಿಸಲು ಉತ್ತಮ ತರಬೇತಿ ನೀಡುತ್ತಿರುವ ಕಾರಣ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಖೋ.ಖೋ ಸ್ಪರ್ಧೆಯಲ್ಲಿ ಬಾಲಕರು ಹಾಗೂ ಬಾಲಕೀಯರ ತಂಡಗಳು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ತಾಲೂಕಿನ ಕ್ರೀಡಾಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದ್ದು, ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್‌.ಶ್ರೀಧರ್‌ ಮಾತನಾಡಿ, ಸೇವಾ ಸಂಕಲ್ಪ ಶಾಲೆ ಮಕ್ಕಳಿಗೆ ಉತ್ತಮ ಸಂಸ್ಕಾರದ ಶಿಕ್ಷಣ ನೀಡುವ ಜೊತೆಗೆ ವಿವಿಧ ಕ್ರೀಡೆಗಳಿಗೆ ಭಾಗವಹಿಸಲು ಪ್ರೋತ್ಸಾಹ ನೀಡುತ್ತಿರುವ ಕಾರಣ ವಿದ್ಯಾರ್ಥಿಗಳು ಪ್ರತಿವರ್ಷವು ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡುತ್ತಿರುವುದು ಅತ್ಯಂತ ಹೆಗ್ಗಳಿಕೆಯಾಗಿದೆ. ಪೋಷಕರು ತಮ್ಮ ಮಕ್ಕಳ ‘ವಿಷ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹಕರಿಸಬೇಕು ಎಂದು ತಿಳಿಸಿದರು.

ತಾಲೂಕು ಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕರು ಮತ್ತು ಬಾಲಕೀಯರ ತಂಡ ಹಾಗೂ ಎತ್ತರ ಜಿಗಿತದಲ್ಲಿ ವಿಜೇತರಾದ ವಿದ್ಯಾರ್ಥಿ ದಾದಾಪೀರ್‌, ತಟ್ಟೆ ಎಸೆತದಲ್ಲಿ ವಿಜೇತ ವಿದ್ಯಾರ್ಥಿನಿ ಪೃಥ್ವಿ ಹಾಗೂ ತರಬೇತುದಾರ ತಂಡದ ಮುಖ್ಯಸ್ಥ ರಾಹುಲ್ ಸದಸ್ಯರಾದ ದರ್ಶನ್, ಪವನ್, ಜೀವನ್ ದೈಹಿಕ ಶಿಕ್ಷಕ ಚಂದ್ರಶೇಖರ್ ಅವರುಗಳನ್ನು ವಿದ್ಯಾಸಂಸ್ಥೆ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ನಿರ್ದೇಶಕರಾದ ಸತ್ಯನಾರಾಯಣ, ಬ್ರಬ್ರುವಾಹನ ರಾವ್, ಮುರುಳೀಧರ್, ಜಿ.ಕುಮಾರ್‌, ಜಯಲಕ್ಷ್ಮೀ, ವೀಣಾ, ಮಯೂರಿ, ಮುಖ್ಯಶಿಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ಶಿಕ್ಷಕರಾದ ಬಸವಂತಪ್ಪ, ಲೋಕೇಶ್, ಗಂಗಾಧರ್, ಕುಮಾರಸ್ವಾಮಿ, ದೀಪಾ, ಪವನ್, ಚಂದನ್, ಶ್ವೇತ, ರಂಜಿತಾ ಹಾಗೂ ಪೋಷಕರು ಭಾಗವಹಿಸಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ