ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಹಣ ಒಂದರಿಂದಲೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಅದೇ ರೀತಿ ಹಣವನ್ನೇ ಮಾನದಂಡವಾಗಿಸಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ನಾನು ಚುನಾವಣೆಯನ್ನ ಎದುರಿಸಿ ಗೆಲ್ಲಲಿಲ್ಲ. ಇದನ್ನು ಮೊದಲು ನೆನಪಿಟ್ಟುಕೊಳ್ಳಿ ಎಂದು ತಮ್ಮ ಎದುರಾಳಿಗಳಿಗೆ ಬಾಣ ಬಿಟ್ಟಿದ್ದಾರೆ.
ಪಕ್ಷದಲ್ಲಿದ್ದುಕೊಂಡೇ ಪಿತೂರಿಜಿಪಂ, ತಾಪಂ ಚುನಾವಣೆ ಪೂರ್ವ ಸಿದ್ಧತಾ ಸಭೆಯ ನೆಪದಲ್ಲಿ ಈ ಸಭೆ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಕೆಲವರು ಹಣದ ಹಿಂದೆ ಬಿದ್ದಿದ್ದಾರೆ ಇದ್ಯಾವುದೂ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವ ಯಾರೊಬ್ಬರನ್ನು ನಾನು ಸಹಿಸುವುದಿಲ್ಲ, ಪಕ್ಷದಲ್ಲಿ ಇದ್ದುಕೊಂಡೆ ಪಕ್ಷದ ವಿರೋಧ ಪಿತೂರಿ ಮಾಡುವವರು ಯಾರು ನಮಗೆ ಬೇಕಾಗಿಲ್ಲ. ನನಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಪಕ್ಷದವರನ್ನು ಗೆಲ್ಲಿಸಿಕೊಂಡು ಬರುವುದು ಗೊತ್ತು ಎಂದು ಚಾಟಿ ಬಿಸಿದ್ದಾರೆ.
200ಕ್ಕೂ ಹೆಚ್ಚು ಮಂದಿ ಭಾಗಿ
ಭಿನ್ನರ ಪಡೆಯಲ್ಲಿ ಗುರುತಿಸಿಕೊಂಡಿರುವ ಮುಖಂಡರು ಸೇರಿದಂತೆ ಹಲವು ಪ್ರಮುಖ ಮುಖಂಡರು ಹುಣಸಮಾರನಹಳ್ಳಿಯಲ್ಲಿ ಕರೆದಿದ್ದ ಸಭೆಯಲ್ಲಿ ಕಾಣಿಸಲಿಲ್ಲ. ಸಭೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರು, ಹೊಸದಾಗಿ ಸೇರ್ಪಡೆಯಾದವರೇ ಹೆಚ್ಚಾಗಿ ಕಾಣಿಸಿಕೊಂಡರು. ಸುಮಾರು 200ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.ಈ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಎನ್. ಕೇಶವರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮುಖಂಡರಾದ ಕೆ. ಎಂ.ಮುನೇಗೌಡ, ನಾರಾಯಣಸ್ವಾಮಿ, ಮತ್ತಿತರರು ಇದ್ದರು.