ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕೊಲ್ಲಾಪುರ ಶ್ರೀಮಹಾಲಕ್ಷ್ಮಿ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ನಿಮ್ಮ ಉನ್ನತಿಯ ಬಗ್ಗೆ ಯೋಚಿಸುವುದಿಲ್ಲ. ನಿಮ್ಮ ಬೆಳವಣಿಗೆಗೆ ನೀವೆ ಶಿಲ್ಪಿಗಳಾಗಬೇಕು ಕುಡಿತ ಅನಕ್ಷರತೆ ಮಾದಿಗ ಸಮುದಾಯಕ್ಕೆ ಶಾಪವಾಗಿದೆ. ನಾನು ಕೂಡ ದುಶ್ಚಟಕ್ಕೆ ಒಳಗಾಗಿದ್ದಾರೆ ಹಮಾಲಿ ಕೆಲಸ ಮಾಡಿಕೊಂಡು ಬದುಕಬೇಕಿತ್ತು, ಕೆಟ್ಟ ಚಟಗಳಿಂದ ದೂರ ಉಳಿದಿದ್ದಕ್ಕೆ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ನಾವು ಸಾಗುತ್ತಿರುವ ದಾರಿ ಸರಿಯೋ, ತಪ್ಪೋ ಎನ್ನುವುದನ್ನು ನಿರ್ಣಯಿಸುವ ವಿವೇಕ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ ಆದರೆ ನಾವು ಕೆಟ್ಟ ವಿಷಯಗಳಿಗೆ ಆದ್ಯತೆ ನೀಡಿ ಕುಟುಂಬವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿಕ್ಷಣ ಪಡೆಯದ ಹೊರತು ವ್ಯಕ್ತಿಯ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಮನೆಯ ಹಿರಿಯರು ಸರಿ ದಾರಿಯಲ್ಲಿ ಸಾಗಿದರೆ ಅದು ಕಿರಿಯರಿಗೆ ಮಾರ್ಗ
ಶಿಕ್ಷಣ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ ಎಲ್ಲ ಜಾತಿ ವರ್ಗದವರಿಗೂ ಶಿಕ್ಷಣ ಪಡೆಯಲು ಸಾಧ್ಯವಿದೆ ಸಮುದಾಯದ ಯುವಕರು ಕೇವಲ ಹೊರಟ ಸಂಘರ್ಷಕ್ಕೆ ಆದ್ಯತೆ ನೀಡದೆ ದುಡಿಮೆಗೆ ಒತ್ತು ನೀಡಿ ಬಡತನದ ನೆಪದಲ್ಲಿ ಶಿಕ್ಷಣದಿಂದ ವಿಮುಖರಾದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದು ಶ್ರೀಗಳು ಎಚ್ಚರಿಸಿದರು.
ದಲಿತರು ಮತಾಂತರದಿಂದ ದೂರವಿರಬೇಕು ಮತಾಂತರವಾದರೆ ನೀವು ಧಾರ್ಮಿಕ ಅಲ್ಪ
ಮಾಜಿ ಶಾಸಕ ಜಿ ಎಚ್.ತಿಪ್ಪಾರೆಡ್ಡಿ ಮಾತನಾಡಿ, ದೇವಾಲಗಳು ಮನಸ್ಸುಗಳನ್ನು ಬೆಸೆಯುವ ಕೇಂದ್ರಗಳಾಗಿವೆ ಆದರೆ ಮೂಢನಂಬಿಕೆಗೆ ಬಲಿಯಾಗಿ ಹಬ್ಬ ಜಾತ್ರೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.
ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರಂತರ ಶ್ರಮ ವಹಿಸಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಬಳ್ಳಾರಿ ಎಚ್.ಹನುಮಂತಪ್ಪ, ಬಿ.ಪಿ ಪ್ರಕಾಶಮೂರ್ತಿ, ಹುಲ್ಲೂರು ಕುಮಾರಸ್ವಾಮಿ ಹಾಗೂ ಖ್ಯಾತ ವೈದ್ಯರಾದ ಡಾ.ಈ.ಸತೀಶ್ ಅವರನ್ನು ಅಭಿನಂದಿಸಲಾಯಿತು.