ನ್ಯಾಯಾಧೀಶರಿಂದ ಯುವ ವಕೀಲರಿಗೆ ತರಬೇತಿ ಅಗತ್ಯ: ನ್ಯಾಯಾಧೀಶ ತ್ಯಾಗರಾಜ ಈನುವಳ್ಳಿ

KannadaprabhaNewsNetwork | Published : Oct 7, 2024 1:36 AM

ಸಾರಾಂಶ

ಬಾರ್ ಮತ್ತು ಬೆಂಜ್‌ ಒಟ್ಟಾಗಿ ಕೂಡಿಕೊಂಡು ಸೌಹಾರ್ದತೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ತ್ಯಾಗರಾಜ ಈನುವಳ್ಳಿ ಹೇಳಿದರು.

ಕನ್ನಡ್ರಭ ವಾರ್ತೆ ರಾಯಬಾಗ

ಬಾರ್ ಮತ್ತು ಬೆಂಜ್‌ ಒಟ್ಟಾಗಿ ಕೂಡಿಕೊಂಡು ಸೌಹಾರ್ದತೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ತ್ಯಾಗರಾಜ ಈನುವಳ್ಳಿ ಹೇಳಿದರು.

ಶುಕ್ರವಾರ ಪಟ್ಟಣದ ನ್ಯಾಯಾಲಯ ಮತ್ತು ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿ, ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಕೂಡಿಕೊಂಡು ಕೆಲಸ ಮಾಡಿದರೆ ನ್ಯಾಯಾಲಯದ ಘನತೆ ಹೆಚ್ಚುತ್ತದೆ. ಯುವ ನ್ಯಾಯಾಧೀಶರಿಗೆ ತರಬೇತಿ ನೀಡುವಂತೆ, ಯುವ ವಕೀಲರಿಗೂ ತರಬೇತಿಯ ಅವಶ್ಯಕತೆ ಇದೆ. ಕಿರಿಯ ವಕೀಲರು ಹಿರಿಯ ವಕೀಲರಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕು. ಜೊತೆಗೆ ಹೆಚ್ಚಿನ ಸಮಯವನ್ನು ನ್ಯಾಯಾಲಯದಲ್ಲಿ ಕಳೆಯಬೇಕು. ನಿರಂತರವಾಗಿ ಕಾನೂನು ಪುಸ್ತಕಗಳನ್ನು ಅಧ್ಯಯನ ಮಾಡಬೇಕೆಂದರು.

ವಕೀಲರ ಸಂಘದ ಅಧ್ಯಕ್ಷ ಪಿ.ಎಂ. ದರೂರ ಮಾತನಾಡಿ, ನ್ಯಾಯಾಲಯ ಆವರಣದಲ್ಲಿ ಮಂಜೂರಾಗಿರುವ ವಕೀಲರ ಸಭಾಭವನ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ ಹೆಚ್ಚು ಇರುವುದರಿಂದ ಖಾಲಿ ಇರುವ ಹೆಚ್ಚುವರಿ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ಶೀಘ್ರ ನೇಮಕಗೊಳಿಸಬೇಕು. 2ನೇ ಹೆಚ್ಚುವರಿ ನ್ಯಾಯಾಲಯ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ರಾಯಭಾಗಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸಿರೊಟ್ಟಿ, ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ. ಪೂಜಾರಿ, ಪಿಡಬ್ಲ್ಯುಡಿ ಎಇಇ ಆರ್.ಬಿ. ಮನವಡ್ಡರ, ಹಿರಿಯ ವಕೀಲರಾದ ಎ.ಬಿ. ಮಂಗಸೂಳೆ, ಆರ್.ಎಸ್. ಶಿರಗಾಂವೆ, ಪಿ.ಎಂ. ಪಾಟೀಲ, ವಿ.ಜಿ. ಖವಟಕೊಪ್ಪ, ಆರ್.ಎಚ್. ಗೊಂಡೆ, ಎಸ್.ಕೆ. ರೆಂಟೆ, ಎನ್.ಎಸ್. ವಡೆಯರ, ಎಸ್.ಬಿ. ಪಾಟೀಲ, ಟಿ.ಕೆ. ಶಿಂಧೆ, ಎ.ಬಿ. ನಡವಣಿ, ಎಂ.ಬಿ. ಸುಣಗಾರ, ಎಂ.ಜಿ. ಉಗಾರೆ, ಎಸ್.ಟಿ. ಬಂತೆ, ಎಲ್.ಎಚ್.ನಾಗರಮುನ್ನೊಳ್ಳಿ, ಎಸ್.ಎಂ. ಸಲಗರೆ, ಎ.ಬಿ. ನಾಗರಾಳೆ ಸೇರಿ ಅನೇಕರು ಇದ್ದರು.

Share this article