ಆಸ್ತಿ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವಕ

KannadaprabhaNewsNetwork |  
Published : Oct 16, 2025, 02:00 AM IST
ಫಕ್ಕೀರೇಶ ತಡಸದ. | Kannada Prabha

ಸಾರಾಂಶ

ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಕೆಲವರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಚಿಕ್ಕನೇರ್ತಿ ಗ್ರಾಮದ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಕುಂದಗೋಳ:

ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಕೆಲವರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ತಾಲೂಕಿನ ಚಿಕ್ಕನೇರ್ತಿ ಗ್ರಾಮದ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಈ ಘಟನೆಗೆ ಕಿರುಕುಳವೇ ಕಾರಣ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದು, ಪೊಲೀಸರು ಒಟ್ಟು 8 ಜನರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಚಿಕ್ಕನೇರ್ತಿ ಗ್ರಾಮದ ಫಕ್ಕೀರೇಶ ಹನಮಂತಪ್ಪ ತಡಸದ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಫಕ್ಕೀರೇಶನ ಸಾವಿಗೆ ಆಸ್ತಿ ವಿವಾದವೇ ಯುವಕನ ಅಜ್ಜನ ಆಸ್ತಿಯಲ್ಲಿ ಸುಮಾರು 20 ಎಕರೆ ಪಾಲು ಬೇಕೆಂದು ಕೆಲವರು ಕೋರ್ಟ್‌ ಮೂಲಕ ನೋಟಿಸ್ ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ, ಮನೆ ಮತ್ತು ಹಿತ್ತಲಿನಲ್ಲಿ ಪಾಲು ನೀಡಬೇಕೆಂದು ಆಗಾಗ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಮಾನಸಿಕ ಒತ್ತಡ ತಡೆದುಕೊಳ್ಳಲಾಗದೇ ಫಕ್ಕೀರೇಶ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಹೇಳಲಾಗಿದೆ.

ಮೃತರ ತಂದೆ ನೀಡಿದ ದೂರಿನನ್ವಯ ಪೊಲೀಸರು ಕಿರಟಗೇರಿಯ ಶಿವನಗೌಡ ಸಂಕನಗೌಡ್ರ, ಅಣ್ಣಪ್ಪ ಸಂಕನಗೌಡ್ರ, ಬ್ಯಾಹಟ್ಟಿಯ ಬಸಪ್ಪ ರೋಗಿ, ಕಲ್ಲಪ್ಪ ರೋಗಿ, ಹುಲ್ಲೂರದ ಮುದಕಪ್ಪ ರಗಟೆ, ಶರಣಪ್ಪ ರಗಟ, ಮಂಟೂರಿನ ರಾಯಮ್ಮ ಗುಂಜಳ ಸೇರಿ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!