ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಯುವ ಜನತೆ: ಸಂಸದ ತುಕಾರಾಂ ಕಳವಳ

KannadaprabhaNewsNetwork |  
Published : Mar 25, 2025, 12:48 AM IST
24ಎಚ್‌ಪಿಟಿ4- ಹೊಸಪೇಟೆಯಲ್ಲಿ ನಡೆದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಕ್ಕೆ ತಬಲಾ ಬಾರಿಸುವ ಮೂಲಕ ಸಂಸದ ಈ. ತುಕಾರಾಂ ಚಾಲನೆ ನೀಡಿದರು. | Kannada Prabha

ಸಾರಾಂಶ

ಇಂದಿನ ದಿನಮಾನಗಳಲ್ಲಿ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ದೇಶಿ ಸಂಸ್ಕೃತಿ ಮರೆಯುತ್ತಿದ್ದಾರೆ.

ಸಂಗೀತ ಮತ್ತು ನೃತ್ಯ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಇಂದಿನ ದಿನಮಾನಗಳಲ್ಲಿ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ದೇಶಿ ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ಸಂಸದ ಈ. ತುಕಾರಾಂ ಕಳವಳ ವ್ಯಕ್ತಪಡಿಸಿದರು.

ನಗರದ ಗೌತಮಬುದ್ದ ಪಂಕ್ಷನ್ ಹಾಲ್‌ನಲ್ಲಿ ಗಾನಗಂಗಾ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಕ್ಕೆ ತಬಲಾ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಈ ನೆಲದ ಸೊಗಡಿನ ಕಲೆ ಸಾಹಿತ್ಯ, ಸಂಗೀತದ ಕುರಿತು ಶಾಲಾ, ಕಾಲೇಜುಗಳಲ್ಲಿ ತಿಳಿಯಪಡಿಸಲು ಅವಕಾಶ ನೀಡಬೇಕಿದೆ. ಇದಕ್ಕಾಗಿ ಸಂಸದರ ನಿಧಿಯಿಂದ ಅನುಕೂಲ ಮಾಡಿಕೊಡುವೆ. ಜಿಲ್ಲೆಯಾದ್ಯಂತ ಸ್ಮಾರ್ಟ್ ಕ್ಲಾಸ್‌ಗಳನ್ನು ತೆರೆಯುವುದಕ್ಕೆ ಅವಕಾಶ ಮಾಡಿಕೊಡುವೆ ಎಂದರು.

ಕೊಪ್ಪಳದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಗಾಯಕ ಪಂಡಿತ್ ಸದಾಶಿವ ಪಾಟೀಲ್‌ರವರಿಗೆ ಗಾನಗಂಗಾ ಸಂಗೀತ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ರಶ್ಮಿ ರಾಜಶೇಖರ್ ಹಿಟ್ನಾಳ್‌ ಅವರಿಗೆ ಮಾನವತಾಶ್ರೀ ಪ್ರಶಸ್ತಿ ಹಾಗೂ ಸಿದ್ದಯ್ಯನ ಕೋಟೆಯ ಸಮಾಜ ಸೇವಕ ಎಚ್.ಪಿ. ಕಾಂತ್‌ರಾಜ್ ಗೆ ಭಾವೈಕ್ಯತಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಅಂಜಲಿ ಭರತನಾಟ್ಯ ಕಲಾಕೇಂದ್ರದ ಮುಖ್ಯ ಶಿಕ್ಷಕಿ ಅಂಜಲಿಯವರಿಗೆ ನಾಟ್ಯಾಂಜಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ನಾಡಿನ ವಿವಿಧ ಗಾಯಕ, ಗಾಯಕಿಯರಿಂದ ಸಂಗೀತ ನೃತ್ಯ ಕಾರ್ಯಕ್ರಮಗಳು ಜರುಗಿದವು.

ಮರಿಯಮ್ಮನಹಳ್ಳಿಯ ಪ್ರಗತಿ ಪರ ಚಿಂತಕ ಚಂದ್ರಶೇಖರ್ ಎಸ್.ಬಿ. ಪ್ರಾಸ್ತಾವಿಕ ಮಾತನಾಡಿದರು. ಸಿದ್ದಯ್ಯನ ಕೋಟೆಯ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಭಂಡಾರ್‌ದಾರ್, ಶಿಕ್ಷಕ ಕೊಟ್ರೇಶ್, ಕವಿತಾ, ಯಮುನಾ ಕುಲಕರ್ಣಿ ನಿರ್ವಹಿಸಿದರು. ಅಂಜಲಿ ಭರತನಾಟ್ಯ ಕಲಾಕೇಂದ್ರ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ ಕಾರ್ಯಕ್ರಮ ಹಾಗೂ ನಾಡಿನ ಕ್ಯಾತ ಸಂಗೀತ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌