ಪ್ರವೀಣ್ ಘೋರ್ಪಡೆ
ಪಕ್ಷಿಗಳನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಯುವಕರು ಸಂಘಟಿತರಾಗಿ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಾಲಶಿವಯೋಗಿ ಸಿದ್ದಲಿಂಗ ದೇವರು ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಅಜ್ಜನ ನಡಿಗೆ ಹಳ್ಳಿ ಕಡೆಗೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಪ್ರಾಣಿ, ಪಕ್ಷಿಗಳ ಸಂಕುಲ ಉಳಿವಿಗೆ ಯುವ ಸಮೂಹ ಮುಂದಾಗಬೇಕು ಎಂಬುವುದು ಅವರ ಆಶಯ.ತಾಲೂಕಿನ ಗಡಿ ಸೋಮನಾಳ ಗ್ರಾಮದ ಶ್ರೀ ಬಸವ ಚೇತನ ಗ್ರಾಮೀಣಾಭಿವೃದ್ಧಿ ಸಂಘದ ಯುವ ಸಮೂಹವು ಪಕ್ಷಿ ಸಂಕುಲ ಉಳಿವಿಗೆ ಸಾವಿರಾರು ನಿರುಪಯುಕ್ತ ಬಾಟಲಿಗಳ ಬಳಕೆಯೊಂದಿಗೆ ಕುಡಿಯುವ ನೀರಿನ ಅರವಟಿಗೆ ನಿರ್ಮಿಸಿ ಮಾದರಿ ಕಾರ್ಯಕ್ಕೆ ಮುಂದಾಗಿದೆ. ಯಾವುದು ನಿರುಪಯುಕ್ತವಾಗಿದೆ. ಅವುಗಳನ್ನು ಮರುಬಳಕೆ ಮಾಡುವುದರ ಜತೆಗೆ ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಮರಳಿಗೆ ಕಟ್ಟಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಅರವಟಿಗೆ ಮಾಡಿ ನೀರು ಹಾಕುತ್ತಿರುವುದು ಸಂಚಲನ ಸೃಷ್ಠಿಸಿದೆ. ಇಂತಹ ನಿರುಪಯುಕ್ತ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಜೀವರಾಶಿಗಳ ದಾಹ ನೀಗಿಸಲು ಮರು ಬಳಕೆ ಮಾಡುತ್ತಿರುವುದು ಯುವಕರ ಈ ಕಾರ್ಯಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.ಶ್ರೀಗಳೇ ಪ್ರೇರಣೆ:
ಸಿದ್ದಲಿಂಗ ಶ್ರೀಗಳ ಪ್ರೇರಣೆ ಫಲವಾಗಿ ನಿತ್ಯ ಮೂರು ಬಾರಿ ನೂರಾರು ಪಕ್ಷಿಗಳು ನೀರು ಕುಡಿಯಲು ಧಾವಿಸುತ್ತಿರುವುದು ಬಿಸಿಲಿನ ತೀವ್ರತೆ ಹೆಚ್ಚಾಗಿರುವುದನ್ನು ಸೂಚಿಸುತ್ತಿದೆ. ಚಿಟುಗುಬ್ಬಿ, ನೀಲಿ ಬಣ್ಣದ ಹಕ್ಕಿ, ಮರಕುಟುಕ, ಚುಂವ್ ಚುಂವ್ ಕುಟುಕುವ ಗುಬ್ಬಚ್ಚಿ, ಕಾಗೆ, ಗಿಳಿ, ಸಾಂಬಾರು ಕಾಗೆ, ಕೋಗಿಲೆ ಹೀಗೆ ಹತ್ತಾರು ಬಣ್ಣ ಬಣ್ಣದ ಪಕ್ಷಿಗಳು ನೀರಿನ ದಾಹ ನೀಗಿಸಲು ಸ್ಥಳವನ್ನು ಆಯ್ಕೆ ಮಾಡಿವೆ.ಈ ಗ್ರಾಮದ ಯುವಕರು ನಿತ್ಯ ವಾಯು ವಿಹಾರಕ್ಕೆ ತೆರಳುವಾಗ ನೀರಿನ ಅರವಟಿಗಳಿಗೆ ನೀರು ತುಂಬಿಸುತ್ತಿರುವುದು ಅವರ ಪಕ್ಷಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶ್ರೀ ಬಸವ ಚೇತನ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಸಂಗಮೇಶ್ ಎಸ್.ಹರವಾಳ, ಕಾರ್ಯದರ್ಶಿ ಗುರುರಾಜ್ ಕಾಜಗಾರ ಹಾಗೂ ಸಂಘದ ಪದಾಧಿಕಾರಿಗಳಾದ ಗೌಡಪ್ಪಗೌಡ ಬಿರಾದಾರ, ಮುತ್ತು ವಡವಡಗಿ, ಕುಮಾರ ಹರವಾಳ, ವಿಜಯಕುಮಾರ್ ಸಾಸನೂರ, ರಮೇಶ್ ಹರವಾಳ ಮತ್ತಿತರರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.ಪರಿಸರ ಉಳಿಸಿ ಬೆಳೆಸಬೇಕಾದ ವಿದ್ಯಾವಂತರಿಂದಲೇ ನಿರುಪಯುಕ್ತ ಬಿಸ್ಲೇರಿ ಬಾಟಲಿಗಳನ್ನು ಬಳಸಿ ಪಕ್ಷಿ ಸಂಕುಲಗಳಿಗೆ ಆಶ್ರಯದ ಜತೆಗೆ ಆಯಾಸ ತಣಿಸಲು ಗಡಿಸೋಮನಾಳ ಗ್ರಾಮದ ಯುವಕರ ತಂಡ ಸಾವಿರ ಗಿಡಮರಗಳಿಗೆ ಅರವಟಿಗಳನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ. ಶ್ರೀ ಖಾಸ್ಗತಜ್ಜನ, ವಿರಕ್ತಜ್ಜನ ಆಶೀರ್ವಾದ ಸದಾ ಯುವ ಸಮೂಹದ ಮೇಲೆ ಇರಲಿದೆ.- ಬಾಲಶಿವಯೋಗಿ ಸಿದ್ದಲಿಂಗ ಸ್ವಾಮೀಜಿ,