ಕನ್ನಡಪ್ರಭ ವಾರ್ತೆ, ದಾವಣಗೆರೆ, ಜೂ. 14, ರಕ್ತದಾನ ಶ್ರೇಷ್ಠದಾನ. ರಕ್ತದಾನವನ್ನು ಮಾಡುವುದರಿಂದ ನಮ್ಮ ಆರೋಗ್ಯ ಸ್ವಚ್ಛವಾಗುತ್ತದೆ ಹಾಗೂ ಸಮಾಜದ ಅನೇಕರ ಬಾಳಿಗೆ ಬೆಳಕಾಗುತ್ತದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು. ನಗರದ ಪಿ.ಜೆ.ಬಡಾವಣೆಯ ಹರ್ಷಿತ ಕಂಪ್ಯೂಟರ್ಸ್ ಆವರಣದಲ್ಲಿ ಶುಕ್ರವಾರ ಸಂಕಲ್ಪ ಸೇವಾ ಫೌಂಡೇಶನ್, ಕ್ರೀಡಾ ಭಾರತಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಇವರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನೂ ಸಹಾ ಸುಮಾರು 30 ಬಾರಿ ರಕ್ತದಾನ ಮಾಡಿದ್ದು, ಕಳೆದ 30 ವರ್ಷಗಳಿಂದ ತಮ್ಮ ಸ್ನೇಹಿತರೊಂದಿಗೆ ಸೇರಿ ಅನೇಕ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದೇನೆ ಎಂದ ಅವರು, ಯುವ ಜನತೆ ರಕ್ತದಾನ ಮಾಡಲು ಮುಂದೆ ಬರಬೇಕು. ಎಲ್ಲರೂ ಇಂತಹ ಕಾರ್ಯಕ್ರಮಕ್ಕೆ ಕೈಜೋಡಿಸಬೇಕೆಂದರು.ಚಿಗಟೇರಿ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಿ.ಎಚ್. ಗೀತಾ ಮಾತನಾಡಿ, ರಕ್ತಕ್ಕೆ ಪರ‍್ಯಾಯ ವಸ್ತುವಿಲ್ಲ. ರಕ್ತವನ್ನು ಇನ್ನೊಬ್ಬರಿಂದ ಪಡೆದು ರೋಗಿಗಳಿಗೆ, ಅಪಘಾತವಾದವರಿಗೆ, ಹಾಗೂ ಗರ್ಭಿಣಿಯರಿಗೆ ನೀಡಬೇಕು. ರಕ್ತವನ್ನು ದಾನ ಮಾಡುವುದರಿಂದ ಆರೋಗ್ಯದ ಮೇಲೆ ಆಗುವ ಅನುಕೂಲತೆಯನ್ನು ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಎಂದುರು.
30ಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.........
- 14ಕೆಡಿವಿಜಿ41ಃದಾವಣಗೆರೆಯ ಹರ್ಷಿತಾ ಕಂಪ್ಯೂಟರ್ಸ್‌ನಿಂದ ನಡೆದ ರಕ್ತದಾನ ಶಿಬಿರವನ್ನು ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.