ಕೃತಿ ಕೆ. ರಾವ್ ಅವರು ಇತ್ತೀಚೆಗೆ ಜೋದ್‌ಪುರದಲ್ಲಿನಡೆದ ಎನ್‌ಬಿಆರ್‌ಸಿಓಎಂ - 2025 ಇದರ ಹೆಲ್ತ್ ಸೈನ್ಸ್ -ಓರಲ್ ಪ್ರೆಸೆಂಟೇಶನ್ ವಿಭಾಗದಲ್ಲಿ ‘ಯುವ ಸಂಶೋಧಕ ಪ್ರಶಸ್ತಿ’ ಮತ್ತು 1 ಲಕ್ಷ ರು. ನಗದು ಬಹುಮಾನ ಗಳಿಸಿದ್ದಾರೆ.
ಉಡುಪಿ: ಮೊಹಾಲಿಯ ಇನ್‌ಸ್ಟಿಟ್ಯೂಟ್ ಆಫ್ ನ್ಯಾನೋ ಸೈನ್ಸ್ ಅಂಡ್ ಟೆಕ್ನಾಲಜಿ (ಐಎನ್‌ಎಸ್‌ಟಿ)ಯಲ್ಲಿ ಪಿಎಚ್‌ಡಿ ಮಾಡುತ್ತಿರುವ ಕೃತಿ ಕೆ. ರಾವ್ ಅವರು ಇತ್ತೀಚೆಗೆ ಜೋದ್‌ಪುರದಲ್ಲಿನಡೆದ ಎನ್‌ಬಿಆರ್‌ಸಿಓಎಂ - 2025 ಇದರ ಹೆಲ್ತ್ ಸೈನ್ಸ್ -ಓರಲ್ ಪ್ರೆಸೆಂಟೇಶನ್ ವಿಭಾಗದಲ್ಲಿ ‘ಯುವ ಸಂಶೋಧಕ ಪ್ರಶಸ್ತಿ’ ಮತ್ತು 1 ಲಕ್ಷ ರು. ನಗದು ಬಹುಮಾನ ಗಳಿಸಿದ್ದಾರೆ.
ಕೃತಿ ಕೆ. ರಾವ್ ಅವರು ಮೂಲತಃ ತೀರ್ಥಹಳ್ಳಿಯವರಾಗಿದ್ದು, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿನಿಯಾದ್ದಾರೆ.ಎನ್‌ಬಿಆರ್‌ಸಿಓಎಂ ದೇಶದ ಪ್ರಮುಖ ಜೈವಿಕ ಮತ್ತು ಆರೋಗ್ಯ ವಿಜ್ಞಾನ ವೇದಿಕೆಗಳಲ್ಲೊಂದಾಗಿದ್ದು, ದೇಶದಾದ್ಯಂತದ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ಯುವ ವಿಜ್ಞಾನಿಗಳು ಇದರಲ್ಲಿ ಭಾಗವಹಿಸುತ್ತಾರೆ. ಅತ್ಯಂತ ಕಠಿಣ ಪ್ರಕ್ರಿಯೆಗಳ ಮೂಲಕ ಶ್ರೇಷ್ಠ ಸಂಶೋಧನೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.ಕೃತಿ ರಾವ್ ಅವರು ಈ ಸ್ಪರ್ಧೆಯಲ್ಲಿ ಪ್ರಸ್ತುತ ಪಡಿಸಿದ ಇ - ಪೆಟ್ರಮ್ ಎಂಬ ಅತಿ ಕಡಿಮೆ ವೆಚ್ಚದ, ಪೇಪರ್-ಆಧರಿತ ಪಾಯಿಂಟ್-ಆಫ್-ಕೇರ್ (ಪಿಓಸಿಟಿ) ಸೆನ್ಸರ್ ಮಾದರಿಗೆ ಪ್ರಥಮ ಬಹುಮಾನ ದೊರಕಿದೆ. ಇದು ಮೂತ್ರದಲ್ಲಿನ ಡೊಪೊಮಿನ್ ಅನ್ನು ಸುಲಭವಾಗಿ ಪತ್ತೆಹಚ್ಚಿ, ಪಾರ್ಕಿನ್ಸನ್ ಸೇರಿದಂತೆ ಹಲವು ನರ ಸಂಬಂಧಿತ ಅನಾರೋಗ್ಯ ಸ್ಥಿತಿಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.