ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಊಗಿನಹಳ್ಳಿಯಲ್ಲಿ ಟೀಮ್‌ದೇವಿ ಗೆಳೆಯರ ಬಳಗದವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿ ನನ್ನ ಜವಾಬ್ದಾರಿಯಾಗಿದೆ. ಗ್ರಾಮದ ರಂಗಸ್ಥಳ ಖುರ್ಜು ನಿರ್ಮಾಣಕ್ಕೆ ಮಾತು ಕೊಟ್ಟಿದ್ದು ತ್ವರಿತವಾಗಿ ಮಾಡಿಸಲಾಗುವುದು ಎಂದರು.
ಗ್ರಾಮದಲ್ಲಿ ನಮ್ಮ ಸಂಸ್ಕೃತಿ, ದೇಶಿ ಗೋವು ಉಳಿವಿಗಾಗಿ ಮೆರವಣಿಗೆ, ಸಾಲು ಮರದ ತಿಮ್ಮಕ್ಕನಂತೆ ಮರಗಿಡ ಬೆಳೆಸುವ ಆಲೋಚನೆ ಉತ್ತಮವಾಗಿದೆ. ಯುವಕರು ಸಂಘಟಿತರಾಗಿ ಪ್ರಕೃತಿ ಉಳಿಸಿ ಎಂದು ಹುರಿದುಂಬಿಸಿದರು.ತಾಲೂಕಿನ ಅಭಿವೃದ್ಧಿಗೆ ಅನುದಾನವನ್ನೇ ಸರ್ಕಾರ ನೀಡುತ್ತಿಲ್ಲ. ಜನರ ಮುಂದೆ ಮಾತುಕೊಟ್ಟಂತೆ ಮೂಲ ಸಮಸ್ಯೆಗಳಿಗೆ ಸ್ಪಂದಿಸಲು ಹಣ ತರಲಾಗುತ್ತಿಲ್ಲ ಎಂಬ ಬೇಸರವಿದೆ. ಹೋರಾಟ ಮಾಡಿ ಅನುದಾನ ತಂದು ಗ್ರಾಮದ ಮೂಲ ಸಮಸ್ಯೆ, ರಸ್ತೆ ನಿರ್ಮಾಣಕ್ಕೆ ಮುಂದಾಗುವೆ. ಹಿರಿಯರು ಯುವಕರಿಗೆ ಗ್ರಾಮಾಭಿವೃದ್ಧಿಗೆ ಸಹಕರಿಸಿ ಎಂದರು.
ಗ್ರಾಮದಲ್ಲಿ ಕಾರೆಮೆಳೆ ಸಿಂಗಮ್ಮ ಜಾತ್ರೆ ಪ್ರಯುಕ್ತ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಸುವರ್ಣಾವತಿ ಕಲ್ಯಾಣ ನಾಟಕ, ಬಸವೇಶ್ವರ ದೇವರ ಉತ್ಸವ, ವೀರಭದ್ರ, ಕಾಳಿದೇವಿ ನರ್ತನ, ವಿದ್ಯುತ್ ದೀಪಗಳ ಅಲಂಕಾರ, ಗೋವುಗಳ ಮೆರವಣಿಗೆ ಜಾತ್ರೆಗೆ ವಿಶೇಷ ಕಳೆಕಟ್ಟಿತು.
ಹೊಸ ತಳಿ ಕಬ್ಬಿನಿಂದ ಕಡಿಮೆ ಖರ್ಚು, ಅಧಿಕ ಇಳುವರಿ: ವಿ.ಎಸ್.ಅಶೋಕ್
ಕಡಿಮೆ ಖರ್ಚಿನಲ್ಲಿ ರೋಗರಹಿತ ಕಬ್ಬು ಬೆಳೆದು ಅಧಿಕ ಇಳುವರಿ ಪಡೆಯಲು ಹೊಸ ತಳಿ ರೈತರಿಗೆ ಅನುಕೂಲವಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ತಿಳಿಸಿದರು.
ಕಬ್ಬು ನಾಟಿ ಮಾಡುವ ರೈತರು ಪ್ರತಿ ಎಕರೆಯಲ್ಲಿ ಉತ್ತಮ ಇಳುವರಿ ಪಡೆಯಬೇಕಾದರೆ ಕಾಲಕಾಲಕ್ಕೆ ರಸಗೊಬ್ಬರ ಹಾಕಿ ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಮಂಡ್ಯ ಮತ್ತು ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣ ರೆಡ್ಡಿ, ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ, ಕೃಷಿ ಅಧಿಕಾರಿ ಭವಾನಿ ಪಾಲ್ಗೊಂಡು ಉತ್ತಮ ಗುಣಮಟ್ಟದ ಕಬ್ಬಿನ ಪೈರುಗಳನ್ನು ಪರಿಶೀಲನೆ ನಡೆಸಿದರು.