ಯುವ ಸಮುದಾಯ, ರಂಗಾಸಕ್ತರನ್ನು ಒಳಗೊಂಡು ಆಡಳಿತ

KannadaprabhaNewsNetwork |  
Published : May 08, 2026, 02:00 AM IST
ಝಕೀರ ನದಾಫ್‌ | Kannada Prabha

ಸಾರಾಂಶ

ರಂಗಾಯಣದ ಅಭಿವೃದ್ಧಿ ಹಾಗೂ ರಂಗಭೂಮಿಯ ಬೆಳವಣಿಗೆ ಮತ್ತು ರಂಗಭೂಮಿ ಪುನಶ್ಚೇತನಕ್ಕೆ ಹಲವು ‌ನೂತನ ಯೋಜನೆಗಳಿವೆ. ಯುವ ಪ್ರತಿಭೆಗಳನ್ನು ರಂಗಭೂಮಿಯತ್ತ ಸೆಳೆಯಲು ಮತ್ತು ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಕಾಲೇಜು ಮಟ್ಟದಲ್ಲಿ ಅನಾವರಣ ಎಂಬ ರಂಗೋತ್ಸವ ಆಯೋಜಿಸಲಾಗುತ್ತಿದೆ.

ಧಾರವಾಡ:

ಧಾರವಾಡ ರಂಗಾಯಣ ಕೇವಲ ರಂಗ ಪ್ರದರ್ಶನಗಳಿಗೆ ಸೀಮಿತಗೊಳಿಸದೇ, ಯುವ ಸಮುದಾಯ ಮತ್ತು ರಂಗಾಸಕ್ತರನ್ನು ಒಳಗೊಳ್ಳಲು ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ನೂತನ ನಿರ್ದೇಶಕ ಝಾಕೀರ ನದಾಫ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣದ ಅಭಿವೃದ್ಧಿ ಹಾಗೂ ರಂಗಭೂಮಿಯ ಬೆಳವಣಿಗೆ ಮತ್ತು ರಂಗಭೂಮಿ ಪುನಶ್ಚೇತನಕ್ಕೆ ಹಲವು ‌ನೂತನ ಯೋಜನೆಗಳಿವೆ. ಯುವ ಪ್ರತಿಭೆಗಳನ್ನು ರಂಗಭೂಮಿಯತ್ತ ಸೆಳೆಯಲು ಮತ್ತು ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಕಾಲೇಜು ಮಟ್ಟದಲ್ಲಿ ಅನಾವರಣ ಎಂಬ ರಂಗೋತ್ಸವ ಆಯೋಜಿಸಿ, ನಟನಾ ಕೌಶಲಕ್ಕೆ ಈ ಮೂಲಕ ಹೊಸ ದಿಕ್ಕು ನೀಡುವುದಾಗಿ ತಿಳಿಸಿದರು.

ರಂಗಭೂಮಿಯ ವೈವಿಧ್ಯತೆ ಮತ್ತು ಕಲಾವಿದರ ಧ್ವನಿಯನ್ನು ಜನಸಾಮಾನ್ಯರಿಗೆ ತಲುಪಿಸಲು ರಂಗಧ್ವನಿ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಧಾರವಾಡದ ಸಾಹಿತ್ಯಿಕ ಶ್ರೀಮಂತಿಕೆಯ ನೆಲದಲ್ಲಿ ವಿವಿಧ ಭಾಷೆಗಳ ಸಂಸ್ಕೃತಿ ಪರಿಚಯಿಸಲು ''''''''''''''''ಬಹುಭಾಷಾ ನಾಟಕೋತ್ಸವ'''''''''''''''' ಆಯೋಜಿಸುವ ಗುರಿ ಹೊಂದಲಾಗಿದೆ. ಇದರಿಂದ ನೆರೆ ರಾಜ್ಯ ಹಾಗೂ ವಿವಿಧ ಭಾಷೆಗಳ ರಂಗಪ್ರಯೋಗಗಳನ್ನು ಇಲ್ಲಿನ ಪ್ರೇಕ್ಷಕರು ಸವಿಯಲು ಸಾಧ್ಯವಾಗಲಿದೆ ಎಂದರು.

ರಂಗಾಯಣದ ಆವರಣದಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆ, ಹಳೆಯ ನಾಟಕಗಳ ಮರುಪ್ರದರ್ಶನದ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಜತೆಗೆ, ರಂಗ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಇದ್ದರು. ಮೈಸೂರು ರಂಗಾಯಣ ಮಾದರಿಯಲ್ಲಿ ಧಾರವಾಡ ರಂಗಾಯಣದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಸರ್ಕಾರದಿಂದ ಶಾಶ್ವತ ಅನುದಾನ ತರುವಲ್ಲಿ ಈ ಭಾಗದ ಶಾಸಕರು, ಸಚಿವರು, ಸಾಹಿತ್ಯ ವಲಯ, ರಂಗಕರ್ಮಿಗಳು ಜತೆ ಚರ್ಚಿಸಿ, ನಿಯೋಗ ಹೋಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ.

ಝಾಕೀರ್ ನದಾಫ್, ನಿರ್ದೇಶಕರು, ರಂಗಾಯಣ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲೆಯ ವಿವಿಧೆಡೆ ಸುರಿದ ಮಳೆ
ಡೊನೇಶನ್ ಹಾವಳಿ ವಿರೋಧಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ ಪ್ರತಿಭಟನೆ