ಕನಕಪುರ: ಇಂದಿನ ದಿನಗಳಲ್ಲಿ ಯುವ ರೈತರು ಬೆರಳೆಣಿಕೆಯಷ್ಟು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇದಕ್ಕೆ ಮುಖ್ಯಕಾರಣ ಕೃಷಿ ಚಟುವಟಿಕೆಗಳಲ್ಲಿ ಆದಾಯ ಕಡಿಮೆ, ವ್ಯವಸಾಯದ ಜೊತೆಗೆ ಉಪಕಸುಬುಗಳತ್ತ ಗಮನ ಹರಿಸಬೇಕು ಎಂದು ರಾಮನಗರ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರಶಾಂತ್ ಪ್ರಭು ತಿಳಿಸಿದರು.
ಡಾ. ಪ್ರದೀಪ್ ಮಾತನಾಡಿ, ಕುರಿ ಅಭಿವೃದ್ಧಿ ಮಂಡಳಿ, ವಿವಿಧ ಸಹಕಾರ ಸಂಘಗಳಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯ ಲಭ್ಯವಿದೆ. ಈ 10 ದಿನಗಳ ತರಬೇತಿಯಲ್ಲಿ ತಾವು ಕಲಿತಂತಹ ವಿಷಯಗಳನ್ನು ನಿಮ್ಮ ಉದ್ಯಮದಲ್ಲಿ ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಬಹುದು ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಚಂದ್ರ ಚರಣ್, ಶಿವರಾಮಯ್ಯ, ಚಂದ್ರಪ್ಪ, ಸಂಸ್ಥೆಯ ಉಪನ್ಯಾಸಕ ದೇವೀಂದ್ರಪ್ಪ, ನೇತ್ರಾವತಿ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಹಾರೋಹಳ್ಳಿ ಕೆನರಾ ಬ್ಯಾಂಕ್ ಸಂಸ್ಥೆಯಿಂದ ನಡೆದ ಸ್ವ ಉದ್ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.