ಕನ್ನಡಪ್ರಭ ವಾರ್ತೆ ಬೀಳಗಿ
ಜಗತ್ತಿನಲ್ಲಿಯೇ ರಕ್ತರಹಿತ ಕ್ರಾಂತಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಪಡೆದುಕೊಂಡು ಏಕೈಕ ರಾಷ್ಟ್ರ ಭಾರತ, ದೇಶಕ್ಕಾಗಿ ಇಂತಹ ಸ್ವಾತಂತ್ರ್ಯ ಪಡೆಯಲು ದೇಶದ ಹಲವಾರು ನಾಯಕರ ತ್ಯಾಗ ಬಲಿದಾನಗಳಾಗಿವೆ ,ಈ ಎಲ್ಲ ವಿಶಯಗಳು ಇಂದಿನ ಯುವಕರು ಗಮನಕ್ಕೆ ಬರುತ್ತಿಲ್ಲ ಇದು ದೇಶಕ್ಕೆ ವಿಶಾದನೀಯ ಸಂಗತಿ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕರಾದ ಜೆ ಟಿ ಪಾಟೀಲ ತಿಳಿಸಿದರು.ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ತಾಲೂಕಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳು ಆಡುತ್ತಿದ್ದಾರೆ.ಅಂದು ದೇಶಕ್ಕಾಗಿ ಆಸ್ತಿ ತ್ಯಾಗ ಮಾಡಿದ ಕುಟುಂಬದ ವಿರುದ್ಧ ಮಾತನಾಡುವುದು ಎಷ್ಟು ಸರಿ,ಅದಕ್ಕಾಗಿ ದೇಶದ ಸ್ವಾತಂತ್ರ್ಯ ಹೋರಾಟದ ಅರಿವು ಎಲ್ಲರಲ್ಲಿಯೂ ಮೂಡುವಂತೆ ಮಾಡಬೇಕು, ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿಯೇ ಮಂತ್ರವಾಗಬೇಕು.ರೈತರು,ಬಡಜನರ ಕಲ್ಯಾಣವಾಗಬೇಕು.ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರಿಗೆ ರೈತರಿಗೆ ಅನುಕೂಲವಾಗುವ ಯೋಜನೆ ನೀಡಿದೆ,ಐದು ಗ್ಯಾರಂಟಿ ಯೋಜನೆಗಳಿಂದ ಎಲ್ಲಾ ವರ್ಗದ ಜನರಿಗೂ ಆರ್ಥಿಕ ಚೈತನ್ಯ ಹೆಚ್ಚುವಂತೆ ಮಾಡಿದೆ, ಸರ್ಕಾರ ಬೀಳಗಿ ಮತಕ್ಷೇತ್ರದಲ್ಲಿ ನೂತನವಾಗಿ ರೈತರಿಗಾಗಿ ೪೦೦ ಕೋಟಿ ರೂ ವೆಚ್ಚದಲ್ಲಿ ಅನವಾಲ ಏತ ನೀರಾವರಿ, ₹೧೬೮ ಕೋಟಿ ವೆಚ್ಚದಲ್ಲಿ ಕಾಡರಕೊಪ್ಪ ಏತ ನೀರಾವರಿ ಹಾಗೂ ₹ ೧೭ ಕೋಟಿ ವೆಚ್ಚದಲ್ಲಿ ಸೊಕನಾದಗಿ ಏತ ನೀರಾವರಿ ಮಂಜೂರಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿವೆ. ಮನ್ನಿಕೇರಿ, ತೊಳಮಟ್ಟಿ, ಯತ್ನಟ್ಟಿ, ಬಾದರದಿನ್ನಿ ಗ್ರಾಮಗಳ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಯೋಜನೆಯ ಕ್ರೀಯಾಯೋಜನೆ ಸಿದ್ಧಮಾಡಲಾಗುತ್ತಿದೆ ಎಂದ ಅವರು, ಉತ್ತಮ ಮಳೆಯಾಗಿದ್ದು, ರೈತರು ಉತ್ತಮ ಬೆಳೆ ಪಡೆಯಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು, ಮಳೆ ಬಂದ ಕಾರಣ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಗೊಂಡವು.ಸಮಾರಂಭದಲ್ಲಿ ತಹಸೀಲ್ದಾರ್ ವಿನೋದ್ ಹತ್ತಳ್ಳಿ, ತಾಪಂ ಇಒ ಶ್ರೀನಿವಾಸ ಪಾಟೀಲ್, ಸಿಪಿಐ ಎಚ್.ಬಿ. ಸನಮನಿ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್, ಲೋಕೋಪಯೋಗಿ ಇಲಾಖೆ ಮಂಜುನಾಥ ತೆಗ್ಗಿ, ಬಿಇಒ ಆರ್ ಎಸ್ ಆದಾಪೂರ,ಸೇರಿದಂತೆ ಇತರರು ಇದ್ದರು.