ಕನ್ನಡಪ್ರಭ ವಾರ್ತೆ ಶಿರಾ
೨೦೨೬-೨೭ ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಚಿಕ್ಕನಹಳ್ಳಿ ಹಾಗೂ ನವ್ಯದಿಶ ಸಹಯೋಗದಲ್ಲಿ ಕೇಂದ್ರದಲ್ಲಿ ನಡೆದ ಎರಡು ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನವ್ಯದಿಶ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ ಅಣಬೆ ಬೇಸಾಯದ ತರಬೇತಿಯನ್ನು ನಡೆಸಲಾಗುತ್ತಿದೆ. ತರಬೇತಿ ಪಡೆದ ನಂತರ ಪ್ರಾಯೋಗಿಕವಾಗಿ ನೋಡಲು ಕ್ಷೇತ್ರ ಭೇಟಿ ಮಾಡಲಾಗುತ್ತದೆ. ಕೃಷಿಕರು ಯಾವುದೇ ಉದ್ಯಮವನ್ನು ಮಾಡುವ ಮೊದಲು ಸಣ್ಣ ಪ್ರಮಾಣದಲ್ಲಿ ಮಾಡುವ ಮೂಲಕ ಪ್ರಯೋಗ ಮಾಡಿ ನಂತರ ಬೃಹತ್ ಪ್ರಮಾಣದಲ್ಲಿ ಮಾಡಲು ಮುಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ತರಬೇತಿ ಕೇಂದ್ರದಲ್ಲಿ ನಡೆಯುವ ಎಲ್ಲ ತರಬೇತಿಗಳಿಗೆ ಯುವ ರೈತರು ಭಾಗವಹಿಸಿ ಕೇಂದ್ರದಲ್ಲಿ ನಡೆಯುವ ತರಬೇತಿಗಳ ಜೊತೆಗೆ ತಮ್ಮ ತಮ್ಮ ಗ್ರಾಮಗಳಲ್ಲೂ ಸಹ ಇಲಾಖೆಯಿಂದ ಸಮುದಾಯಕ್ಕೆ ಬಂದು ತರಬೇತಿ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದರು.ನವ್ಯದಿಶದ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ್ ಅಮಲಗೊಂದಿರವರು ಮಾತನಾಡಿ ಭಾರತದ ಪ್ರಸ್ತುತ ಅನೇಕ ಯುವಜನರು ಪದವಿ ಪಡೆದಿದ್ದರೂ, ಪ್ರಾಯೋಗಿಕ ಕೌಶಲ್ಯಗಳ ಕೊರತೆಯಿದೆ. ಈ ಕೌಶಲ್ಯದ ಅಂತರವನ್ನು ತುಂಬಲು ಹಲವು ತರಬೇತಿಗಳು ಅಗತ್ಯವಾಗಿ ಬೇಕಿದೆ. ಕೃತಕ ಬುದ್ಧಿಮತ್ತೆ, ಆಟೊಮೇಷನ್ ಮತ್ತು ಡಿಜಿಟಲೀಕರಣದಿಂದಾಗಿ ಸಾಂಪ್ರದಾಯಿಕ ಉದ್ಯೋಗಗಳು ಮಾಯವಾಗುತ್ತಿವೆ. ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಯುವಜನರಿಗೆ ಮರುಕೌಶಲ್ಯ ಅನಿವಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಡಾ.ರಮೇಶ ಸೇರಿದಂತೆ, ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಸುಮಾ, ಕೇಂದ್ರದ ಸಿಬ್ಬಂದಿ ಮಂಜುನಾಥ್ ಅವರು ಹಾಗೂ ೪೦ ರೈತರು ಭಾಗವಹಿಸಿದ್ದರು.