ಹೊಸಕೋಟೆ: ಅಕ್ಷಯ ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಅಕ್ಷಯ ವಿಪ್ರ ಮಹಾಸಭಾ ರಾಜ್ಯಾಧ್ಯಕ್ಷ ಎನ್.ಕೆ.ರಾಮಚಂದ್ರರಾವ್ ತಿಳಿಸಿದರು.ನಗರದ ಶಾರದ ಭವನದಲ್ಲಿ ಅಕ್ಷಯ ವಿಪ್ರ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ಹಾಗೂ ನೂತನ ಕ್ಯಾಲೆಂಡರ್‌ನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾವನ್ನು ಒಗ್ಗೂಡಿಸಿ ಶೈಕ್ಷಣಿಕ, ಉದ್ಯೋಗ, ಆರೋಗ್ಯ, ಧಾರ್ಮಿಕ ಕ್ಷೇತ್ರದಲ್ಲಿ ಸಹಾಯ ಹಸ್ತ ಚಾಚುವುದರ ಜೊತೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಬೆಂಬಲ ಸೂಚಿಸಲು ಮಹಾಸಭಾ ಪ್ರಾರಂಭಿಸಿದ್ದೇವೆ ಎಂದರು. ಸಂಘದ ಉಪಾಧ್ಯಕ್ಷ ಲಕ್ಷ್ಮೀಶ್ ಮಾತನಾಡಿ, ಅಕ್ಷಯ ವಿಪ್ರ ಬಂಧುಗಳು ಅನಿವಾಸಿ ಭಾರತೀಯರಾಗಿ ಅಷ್ಟೇ ಅಲ್ಲದೆ ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಸಂಬಂಧಿಗಳಿದ್ದು ಎಲ್ಲರನ್ನೂ ಒಗ್ಗೂಡಿಸುವ ದೃಷ್ಟಿಯಿಂದ ಯುವಕರನ್ನು ಮುನ್ನೆಲೆಗೆ ತಂದು ಸಮುದಾಯದ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು. ಸಂಘದ ಗೌರವಾಧ್ಯಕ್ಷ ಕೀರ್ತಿರಾಜ್, ಉಪಾಧ್ಯಕ್ಷ ಶೀ ಪ್ರಕಾಶ್, ಎಸ್.ಕಿರಣ್ ಕುಮಾರ್, ಕಾರ್ಯದರ್ಶಿ ಎನ್.ಎಸ್.ಸುದೀಂದ್ರರಾವ್, ಹಿರಿಯರಾದ ರಘುನಾಥ್ ರಾವ್, ರಾಜಾರಾವ್, ಜನಾರ್ದನ್ ರಾವ್, ಸುದರ್ಶನ್, ಫಣಿರಾಜ್ ಹಾಗೂ ಹೊಸಕೋಟೆ ಪ್ಯಾಂತ್ಯದ ಅಕ್ಷಯ ಬಳಗದ ಎಲ್ಲಾ ಸದಸ್ಯರು ಹಾಜರಿದ್ದರು.
ಹೊಸಕೋಟೆಯದ ಅಕ್ಷಯ ವಿಪ್ರ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಕ್ಯಾಲೆಂಡರ್‌ನ್ನು ಅಕ್ಷಯ ವಿಪ್ರ ಮಹಾಸಭಾ ರಾಜ್ಯಾಧ್ಯಕ್ಷ ಎನ್.ಕೆ.ರಾಮಚಂದ್ರರಾವ್ ಬಿಡುಗಡೆಗೊಳಿಸಿದರು. ಸಂಘದ ಗೌರವಾಧ್ಯಕ್ಷ ಕೀರ್ತಿರಾಜ್, ಉಪಾಧ್ಯಕ್ಷ ಶೀ ಪ್ರಕಾಶ್, ಲಕ್ಷ್ಮೀಶ್, ಕಿರಣ್ ಕುಮಾರ್, ಕಾರ್ಯದರ್ಶಿ ಸುದೀಂದ್ರರಾವ್ ಇತರರಿದ್ದರು.