ಯುವಕರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು: ಬಸವ ಸ್ವಾಮೀಜಿ

KannadaprabhaNewsNetwork |  
Published : Feb 02, 2024, 01:01 AM IST
ಗುಬ್ಬಿ ಪಟ್ಟಣದ ದಲ್ಲಿ ದಿಗ್ವಿಜಯ ಹೋಂ ಅಪ್ಲೈಯನ್ಸ್ ಮತ್ತು ಮೊಬೈಲ್ ಬೃಹತ್ ಮಳಿಗೆ ಯನ್ನುಉದ್ಘಾಟಿಸಿದ ಬೆಳ್ಳಾವಿ ಕಾರದ ಮಠದ ಶ್ರೀಗಳು. | Kannada Prabha

ಸಾರಾಂಶ

ಯುವಕರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ. ನಮ್ಮ ದೇಶದ ಅಭಿವೃದ್ಧಿಗೆ ಸ್ವಯಂ ಉದ್ಯೋಗ ಸೃಷ್ಠಿ ಮಾಡಿಕೊಳ್ಳುವ ಯುವಕರಿಗೆ ನಮ್ಮ ಸಹಕಾರ ಅಗತ್ಯವಾಗಿದೆ ಎಂದು ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ಬಸವ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಯುವಕರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ. ನಮ್ಮ ದೇಶದ ಅಭಿವೃದ್ಧಿಗೆ ಸ್ವಯಂ ಉದ್ಯೋಗ ಸೃಷ್ಠಿ ಮಾಡಿಕೊಳ್ಳುವ ಯುವಕರಿಗೆ ನಮ್ಮ ಸಹಕಾರ ಅಗತ್ಯವಾಗಿದೆ ಎಂದು ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ಬಸವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ದಿಗ್ವಿಜಯ ಹೋಂ ಅಪ್ಲೈಯನ್ಸ್ ಮತ್ತು ಮೊಬೈಲ್ ಬೃಹತ್ ಮಳಿಗೆಯನ್ನುಉದ್ಘಾಟಿಸಿ ಮಾತನಾಡಿ, ಯುವಕರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ. ನಮ್ಮ ದೇಶದ ಅಭಿವೃದ್ಧಿಗೆ ಸ್ವಯಂ ಉದ್ಯೋಗ ಸೃಷ್ಠಿ ಮಾಡಿಕೊಳ್ಳುವ ಯುವಕರಿಗೆ ನಮ್ಮ ಸಹಕಾರ ಅಗತ್ಯವಾಗಿದೆ. ನಮ್ಮ ಮಕ್ಕಳನ್ನು ನಾವೇ ಬೆಳೆಸಬೇಕು. ಈ ನಿಟ್ಟಿನಲ್ಲಿ ಸಾಲ ಸೌಲಭ್ಯ ಒದಗಿಸಿ ಗೃಹೋಪಯೋಗಿ ವಸ್ತುಗಳನ್ನು ನೀಡುವ ಈ ಅಂಗಡಿಗೆ ಹೆಚ್ಚಿನ ಗ್ರಾಹಕರು ಒದಗಿ ಬರಲಿ. ಗೋಸಲ ಚನ್ನಬಸವೇಶ್ವರ ದೇವಾಲಯದ ಮುಂಭಾಗದ ಶೋ ರೂಂ ಮತ್ತಷ್ಟು ಪ್ರಗತಿಗೊಳ್ಳಲಿ ಎಂದು ಆಶಿಸಿದರು.

ಶೋ ರೂಂ ಮಾಲೀಕ ಮಲ್ಲೇಶ್ ಮಾತನಾಡಿ, ಎಲ್ಲಾ ಬ್ರಾಂಡ್ ಕಂಪೆನಿಯ ಟಿವಿ, ಫ್ರಿಡ್ಜ್, ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಸೋಫಾ, ಡೈನಿಂಗ್ ಟೇಬಲ್ ಸೆಟ್‌ಗಳು ಕಡಿಮೆ ದರದಲ್ಲಿ ತಾಲೂಕಿನ ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ದೊಡ್ಡ ನಗರ ಪ್ರದೇಶದ ದರಕ್ಕಿಂತ ಕಡಿಮೆ ದರ, ವಿಶೇಷ ಆಕರ್ಷಕ ಉಡುಗೊರೆ ಜೊತೆಗೆ ಕಡಿಮೆ ಬಡ್ಡಿಯ ಸಾಲ ಸೌಲಭ್ಯ ಸಹ ಒದಗಿಸಲಾಗುತ್ತಿದೆ. ಈ ಅವಕಾಶ ಕೆಲ ದಿನಗಳು ಲಭ್ಯವಿರಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಜಿ.ಎನ್. ಅಣ್ಣಪ್ಪಸ್ವಾಮಿ, ಸಿ. ಮೋಹನ್, ಕುಮಾರ್, ರೇಣುಕಾ ಪ್ರಸಾದ್, ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಜಿ.ಡಿ. ಸುರೇಶಗೌಡ, ರಂಗತಜ್ಞ ಆನಂದ್, ಸಿಪಿಐ ಗೋಪಿನಾಥ್, ಸ್ಯಾಮ್‌ಸಾಂಗ್ ಕಂಪೆನಿಯ ಎಬಿಎಂ ಮಧುಕುಮಾರ್, ಎಲ್‌ಜಿ ಕಂಪೆನಿಯ ಹೇಮಂತ್ ಕುಮಾರ್, ಚಿರಂಜೀವಿ, ಚಂದನ್, ಹೈಯರ್ ಕಂಪೆನಿಯ ರಾಜೀವ್, ವಿವೋ ಮಂಜುನಾಥ್, ಗಿರೀಶ್, ಒಪೋ ಗಂಗಾಧರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ