ಯುವಕರು ಕೃಷಿಯತ್ತ ಆಕರ್ಷಿತರಾಗಬೇಕಿದೆ: ಡಾ. ಕೆ.ಟಿ. ಗುರುಮೂರ್ತಿ

KannadaprabhaNewsNetwork |  
Published : Nov 19, 2024, 12:50 AM IST
ಚಿತ್ರ 2 | Kannada Prabha

ಸಾರಾಂಶ

Youth should be attracted towards agriculture: Dr. K.T. Gurumurthy

-ಉದ್ಯೋಗದಲ್ಲಿ ಕೃಷಿಮೇಳ-2024ರ ಎರಡನೇ ದಿನ ತಾಂತ್ರಿಕ ಸಮಾವೇಶ

-----

ಕನ್ನಡಪ್ರಭ ವಾರ್ತೆ ಹಿರಿಯೂರು

ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಕೃಷಿಮೇಳ-2024 ರ ಎರಡನೇ ದಿನದ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವಿಸ್ತರಣ ನಿರ್ದೇಶಕ ಡಾ.ಕೆ.ಟಿ. ಗುರುಮೂರ್ತಿ ಉದ್ಘಾಟಿಸಿದರು.

ಕರ್ನಾಟಕ ರಾಜ್ಯವು ಕೃಷಿ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು, ರೈತ ಬಾಂಧವರು ಕೃಷಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಆಹಾರ ಭದ್ರತೆಯ ಪ್ರಮುಖ ಸವಾಲುಗಳಿವೆ. ಕೃಷಿಯಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣಬೇಕಾದರೆ ಯುವಕರು ಹೆಚ್ಚಿನ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಸಾವಯವ, ನೈಸರ್ಗಿಕ ಮತ್ತು ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಮಣ್ಣಿನ ಆರೋಗ್ಯ ಸುಧಾರಣೆಗೆ ಹೆಚ್ಚಿನ ಇಳುವರಿ ಪಡೆಯಲಾಗಿದೆ ಎಂದರು.

ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್ ಮಾತನಾಡಿ, ರೈತ ಬಾಂಧವರು ಹವಾಮಾನ ವೈಪರೀತ್ಯಕ್ಕನುಗುಣವಾಗಿ ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳುವುದು ಸೂಕ್ತ. ಜಿಲ್ಲೆ ಮಧ್ಯಮ ಒಣ ಪ್ರದೇಶಕ್ಕೆ ಸೇರಿದ್ದು, ಈ ಪ್ರದೇಶಕ್ಕೆ ಸೂಕ್ತವಾದ ಶೇಂಗಾ ಬೆಳೆಯಲ್ಲಿ ಸಹ್ಯಾದ್ರಿ ಹೊಸ ತಳಿಯ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ. ಹರೀಶ್ ಬಾಬು ಬಿ. ಎನ್ ಅವರು ಅಭಿವೃದ್ಧಿಪಡಿಸಿದ್ದು ಈ ತಳಿಯನ್ನು ರೈತರು ಬಳಸಿಕೊಳ್ಳುವಂತೆ ಸೂಚಿಸಿದರು.

ಕೃಷಿ ಅವಲಂಬಿತ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಶ್ರೇಯೋಭಿವೃದ್ಧಿಗೆ ಕೃಷಿ ಮೇಳ ಪೂರಕ. ಕೃಷಿಮೇಳಗಳನ್ನು ನಿರ್ಮಿಸುವ ಮುಖ್ಯ ಉದ್ದೇಶವೆಂದರೆ ಆಯಾಗೆ ಸೂಕ್ತವಾದ ಬೆಳೆ, ತಳಿ ಮತ್ತು ತಾಂತ್ರಿಕತೆ ಪರಿಚಯಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯ ಕೃಷಿಮೇಳಗಳಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಶರಣಪ್ಪ ಜಂಗಂಡಿ ಮಾತನಾಡಿ, ಕೃಷಿಮೇಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು ಹಾಗೂ ರೈತ ಬಾಂಧವರಿಗೆ ಅಭಿನಂದನೆ ಸಲ್ಲಿಸಿದರು.

ತಾಂತ್ರಿಕ ಸಮಾವೇಶದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮಗಳ ಕುರಿತು ಅಡಿಕೆ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವೆಪ್ಪನವರ್, ಕೃಷಿ ವಿಜ್ಞಾನ ಕೇಂದ್ರದ ಡಾ.ಎಸ್. ಓಂಕಾರಪ್ಪ ಉಪನ್ಯಾಸ, ಸಿರಿಧಾನ್ಯಗಳ ಮಹತ್ವ ಹಾಗೂ ಸುಧಾರಿತ ತಾಂತ್ರಿಕತೆಗಳ ಕುರಿತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ತಳಿ ಸಂಶೋಧನೆ ಡಾ. ನಂದಿನಿ ಹಾಗೂ ಸಿರಿಧಾನ್ಯಗಳಲ್ಲಿ ಮೌಲ್ಯವರ್ಧನೆ ಕುರಿತು ಡಾ. ಶಶಿಕಲಾ ಬಾಯಿ, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಮಹಾ ವಿದ್ಯಾಲಯ ಇವರ ಉಪನ್ಯಾಸ.

----

ಫೋಟೊ: ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಮಹಾ ವಿದ್ಯಾಲಯದ ಉದ್ಯೋಗದಲ್ಲಿ ಕೃಷಿಮೇಳ-2024ರ ಎರಡನೇ ದಿನ ತಾಂತ್ರಿಕ ಸಮಾವೇಶ ನಡೆಸಲಾಯಿತು.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ