ಸದೃಢ ಸಮಾಜ ನಿರ್ಮಾಣಕ್ಕೆ ಯುವಜನತೆ ಸಜ್ಜಾಗಬೇಕು

KannadaprabhaNewsNetwork |  
Published : Jan 13, 2025, 12:46 AM IST
12ಕೆಜಿಎಫ್‌2 | Kannada Prabha

ಸಾರಾಂಶ

ಸ್ವಾಮಿ ವಿವೇಕಾನಂದರು ಯುವಜನರಿಗೆ ಅದರ್ಶವೆಂದು ಪರಿಗಣಿಸಿದ್ದು, ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶದಲ್ಲಿ ವಿಶೇಷವಾಗಿ ಯುವಕರಿಗೆ ಅನ್ವಯವಾಗುವ ಅಂಶಗಳಿದ್ದು, ಯುವಕರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಬೇಕು, ಒಂದು ಅರ್ಥಪೂರ್ಣ ಸಮಾಜವನ್ನು ಕಟ್ಟಬೇಕಾದರೆ ಯುವ ಶಕ್ತಿಯನ್ನು ಒಂದುಗೂಡಿಸಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿ ಸದೃಢ ಸಮಾಜ ನಿರ್ಮಿಸಲು ಅವರನ್ನು ಸಜ್ಜುಗೊಳಿಸುವುದೇ ರಾಷ್ಟ್ರೀಯ ಯುವದಿನ ಉದ್ದೇಶವಾಗಿದೆ ಎಂದು ೩ ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.

ನಗರದ ಹೊರವಲಯದ ಬಂಗಾರು ತಿರುಪತಿ ಗುಟ್ಟಹಳ್ಳಿಯ ಸರಕಾರಿ ಪದವಿ ಪೂರ್ವ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವದಿನ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬ ಭಾರತೀಯ ಯುವಕರಿಗೆ ಜ. 12 ಸ್ಫೂರ್ತಿಯ ದಿನವಾಗಿದೆ, ಇಂದು ಹೊಸ ಸಂಕಲ್ಪಗಳನ್ನು ತೆಗೆದುಕೊಳ್ಳುವ ದಿನವಾಗಿದೆ. ಈ ದಿನ ಭಾರತವು ವಿವೇಕಾನಂದರ ರೂಪದಲ್ಲಿ ದೇಶಕ್ಕೆ ಶಕ್ತಿ ತುಂಬಿದ ದಿನ ಎಂದರು.

ವಿವೇಕಾನಂದರ ವಾಣಿ

ಏಳಿ..ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ವಾಣಿ ಸರ್ವ ಕಾಲಕ್ಕೂ ಯುವಕರನ್ನು ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರಿಸುವ ಧ್ಯೇಯವಾಖ್ಯದಂತಿದೆ. ವಿವೇಕಾನದರ ಆದರ್ಶ, ಕೊಡುಗೆ ಹಾಗೂ ಸೇವೆಗಳ ನೆನಪಿಗಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಜಾಂರಿ ಮಾತನಾಡಿ, ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ, ನಿಮ್ಮ ಮಾರ್ಗದಲ್ಲಿ ಮುಂದುವರೆಯರಿ, ಅದು ಅಭೇದ್ಯವಾಗಿರುಬಹುದು, ಆದರೆ ಅತ್ಮ ಅದಕ್ಕಿಂತ ಬಲಯುತವಾದ್ದು ಎಂದು ಸದಾ ಯುವ ಶಕ್ತಿಯನ್ನು ಎಚ್ಚರಿಸಿ ದೇಶ ಕಟ್ಟುವಂತಹ ಕೆಲಸವನ್ನು ವಿವೇಕಾನಂದರು ಮಾಡಿದ್ದರು, ವಿವೇಕಾನಂದರ ಜನ್ಮ ದಿನವನ್ನು ಸರ್ಕಾರ ರಾಷ್ಟ್ರೀಯ ಯುವ ದಿನವನ್ನಾಗಿ ಆಚಿರುಸುತ್ತಿದೆ ಎಂದರು. ಯುವಕರಿಗೆ ವಿವೇಕರೇ ಆದರ್ಶ

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಜನರಿಗೆ ಅದರ್ಶವೆಂದು ಪರಿಗಣಿಸಿದ್ದು, ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶದಲ್ಲಿ ವಿಶೇಷವಾಗಿ ಯುವಕರಿಗೆ ಅನ್ವಯವಾಗುವ ಅಂಶಗಳಿದ್ದು, ಯುವಕರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಬೇಕು, ಒಂದು ಅರ್ಥಪೂರ್ಣ ಸಮಾಜವನ್ನು ಕಟ್ಟಬೇಕಾದರೆ ಯುವ ಶಕ್ತಿಯನ್ನು ಒಂದುಗೂಡಿಸಬೇಕೆಂದು ತಿಳಿಸಿದ್ದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ, ಉಪಾಧ್ಯಕ್ಷರಾದ ಮಣಿವಣ್ಣನ್, ಬೇತಮಂಗಲ ವೃತ್ತ ನೀರಿಕ್ಷಕ ರಂಗಶಾಮಯ್ಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ, ಅರುಣಾ ಎಲ್ ಭಟ್, ರಾಷ್ಟ್ರೀಯ ಯುವ ದಿನಾಚರಣೆ ಕುರಿತು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಆಶ್ವಥ್‌ ನಿರ್ವಹಿಸಿದರು. ಶಿಕ್ಷಕರು ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ