ಯುವ ಸಮೂಹ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಗಮನ ಹರಿಸಬೇಕು: ಪಿ.ಕಾವೇರಿ

KannadaprabhaNewsNetwork |  
Published : Oct 02, 2024, 01:23 AM IST
1ಕೆಎಂಎನ್ ಡಿ18 | Kannada Prabha

ಸಾರಾಂಶ

ಬೆಳೆಯುತ್ತಿರುವ ಜನಸಂಖ್ಯೆಯ ಸಾಗರದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಭದ್ರತೆ ಇಲ್ಲದೇ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಕಾಲೇಜು ಹಂತದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೊಸ ಬದುಕಿಗೆ ದಾರಿ ಮಾಡಿಕೊಡಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದೇಶವನ್ನು ಉಜ್ಜಲ ಭವಿಷ್ಯದೆಡೆಗೆ ತೆಗೆದುಕೊಂಡು ಹೋಗಬೇಕಾದರೆ ಯುವ ಸಮೂಹ ಸಕಾರಾತ್ಮಕ ಭಾವನೆಗಳು ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನ ಹರಿಸಬೇಕೆಂದು ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಕಾವೇರಿ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯನ್ನು ಭತ್ತದ ಪೈರು ನಾಟಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬೆಳೆಯುತ್ತಿರುವ ಜನಸಂಖ್ಯೆಯ ಸಾಗರದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಭದ್ರತೆ ಇಲ್ಲದೇ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಕಾಲೇಜು ಹಂತದಲ್ಲಿ ಸಾಂಸ್ಕೃತಿಕ ಚಟುವಟಿಕಗಳು ಹೊಸ ಬದುಕಿಗೆ ದಾರಿ ಮಾಡಿಕೊಡಲಿದೆ ಎಂದರು.

ಪ್ರಸ್ತುತ ಅಶಾಂತಿ ಹಾಗೂ ಗೊಂದಲಮಯವಾಗಿರುವ ಯುವಸಮೂಹದ ಮಾನಸಿಕ ಸ್ಥಿತಿ ಉತ್ತಮಗೊಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತ್ತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಪ್ರಾಂಶುಪಾಲ ಕೆಂಪರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ಸೊಗಡಿನ ಮೂಲವಾದ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಹಿಂದೆ ನಮ್ಮ ಪೂರ್ವಿಕರು ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಅವುಗಳಲ್ಲಿನ ಸಾಹಿತ್ಯ ಜನರ ಭಾವನೆಗಳೊಂದಿಗೆ ಮೂಡಿ ಬರುತ್ತಿತ್ತು ಎಂದರು.

ಉಪನ್ಯಾಸಕ ನಿಂಗರಾಜು ಮಾತನಾಡಿ, ಮಳವಳ್ಳಿಯಲ್ಲಿ ಮಂಟೇಸ್ವಾಮಿ ಪರಂಪರೆ ನಡೆದುಕೊಂಡು ಬಂದಿದೆ. ಮಹದೇಸ್ವಾಮಿಯವರು ನಡೆದಾಡಿದ ಪುಣ್ಯಭೂಮಿ ಇದ್ದಾಗಿದೆ. ನಮ್ಮ ಮಣ್ಣಿನಲ್ಲಿಯೇ ಸಂಸ್ಕೃತಿ ಅಡಗಿದೆ. ಮಳವಳ್ಳಿಯ ಎಂ.ಮಹದೇವಸ್ವಾಮಿ ತಮ್ಮ ಗಾಯನದ ಮೂಲಕ ವಿಶ್ವದಲ್ಲಿಯೇ ಹೆಸರು ಗಳಿಸಿದ್ದಾರೆ. ಯುವಸಮೂಹ ನಮ್ಮ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಾಗಬೇಕಿದೆ ಎಂದರು.

ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಕೆ.ಶಿವಮೂರ್ತಿ, ಮಹದೇವ್, ಶಿವಕುಮಾರ್, ಅನಿತಾ, ಮಲ್ಲಿಕಾರ್ಜುನಯ್ಯ, ಸುರೇಶ್, ಶ್ರೀಕಂಠಯ್ಯ, ಅನಿತಾ, ಹಾಗೂ ಹಲವು ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ