ಜ್ಞಾನಾರ್ಜನೆಗೆ ಕನ್ನಡಪ್ರಭದ ಯುವ ಆವೃತ್ತಿ ಸಹಕಾರಿ

KannadaprabhaNewsNetwork |  
Published : Jun 22, 2024, 12:52 AM IST
ಮಧುಗಿರಿಯ ಕೆ.ಆರ್‌.ಬಡಾವಣೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಹೊರ ತಂದಿರುವ ಯುವ ಆವೃತ್ತಿ ಪತ್ರಿಕೆಯನ್ನು ಎತ್ತಿನ ಹೊಳೆ ಲೆಕ್ಕ ಪರಿಶೋಧಕ ಬಿ.ಎನ್‌.ರಾಘವೇಂದ್ರ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಪ್ರೊ.ಮಲನಮೂರ್ತಿ, ಏಜಂಟ್‌ ವೈ. ಸೋಮಶೇಖರ್‌, ಶಿಕ್ಷಕರಾದ ಮಂಜುಳಾ, ನರಸಪ್ಪ, ಗಂಗಾಧರ್‌, ಗೋವಿಂದರಾಜು, ಬೀರಲಿಂಗಯ್ಯ, ಜಲಜಾಕ್ಷಿ, ಆಶಾ, ವಿದ್ಯಾರ್ಥಿಗಳು ಇದ್ದಾರೆ. | Kannada Prabha

ಸಾರಾಂಶ

ರಾಜ್ಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದಿದ್ದು, ಅದನ್ನು ಉನ್ನತ ಮಟ್ಟಕ್ಕೆ ಏರಿಸಲು ವಿದ್ಯಾರ್ಥಿಗಳಿಗೆ ಕನ್ನಡಪ್ರಭದಲ್ಲಿ ಬರುವ ಯುವ ಆವೃತ್ತಿ ಸಂಚಿಕೆಯನ್ನು ಮಕ್ಕಳು ಪ್ರತಿನಿತ್ಯ ಓದುವುದರಿಂದ ನಿಮ್ಮ ವ್ಯಕ್ತಿತ್ವ ಬೆಳವಣೆಗೆ ಜೊತೆಗೆ ಜ್ಞಾನ ಸಂಪಾದನೆಗೆ ದಾರಿ ದೀಪವಾಗುತ್ತದೆ ಎಂದು ಮಧುಗಿರಿ ಎತ್ತಿನ ಹೋಳೆ ಲೆಕ್ಕ ಪರಿಶೋಧನಾ ಅಧಿಕಾರಿ ಬಿ.ಎನ್‌. ರಾಘವೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ರಾಜ್ಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದಿದ್ದು, ಅದನ್ನು ಉನ್ನತ ಮಟ್ಟಕ್ಕೆ ಏರಿಸಲು ವಿದ್ಯಾರ್ಥಿಗಳಿಗೆ ಕನ್ನಡಪ್ರಭದಲ್ಲಿ ಬರುವ ಯುವ ಆವೃತ್ತಿ ಸಂಚಿಕೆಯನ್ನು ಮಕ್ಕಳು ಪ್ರತಿನಿತ್ಯ ಓದುವುದರಿಂದ ನಿಮ್ಮ ವ್ಯಕ್ತಿತ್ವ ಬೆಳವಣೆಗೆ ಜೊತೆಗೆ ಜ್ಞಾನ ಸಂಪಾದನೆಗೆ ದಾರಿ ದೀಪವಾಗುತ್ತದೆ ಎಂದು ಮಧುಗಿರಿ ಎತ್ತಿನ ಹೋಳೆ ಲೆಕ್ಕ ಪರಿಶೋಧನಾ ಅಧಿಕಾರಿ ಬಿ.ಎನ್‌. ರಾಘವೇಂದ್ರ ತಿಳಿಸಿದರು.

ಪಟ್ಟಣದ ಕೆ.ಆರ್‌.ಬಡಾವಣೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹೊರ ತಂದಿರುವ ಯುವ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡಪ್ರಭದ ಯುವ ಆವೃತ್ತಿ ಪತ್ರಿಕೆ ಓದುವುದರಿಂದ ಎಸ್ಸೆಸ್ಸೆಲ್ಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸುಲಭವಾಗುತ್ತದೆ. ಮಕ್ಕಳು ಬಾಲ್ಯದಲ್ಲಿಯೇ ಇಷ್ಟಪಟ್ಟು ಓದಬೇಕೆ ಹೊರತು ಕಷ್ಟಪಟ್ಟಲ್ಲ. ಸತತವಾಗಿ ಅಧ್ಯಯನ ಮಾಡುವುದರಿಂದ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ ಎಂದರು.

ಇತ್ತೀಚಿನ ದಿನಮಾನಗಳಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗಿದ್ದು, ಜ್ಞಾನಾರ್ಜನೆ ಹೆಚ್ಚಿಸಿಕೊಂಡು ಉತ್ತಮ ಅಂಕಗಳಿಸಿ ಪಾಲಕರಿಗೆ, ಗುರುಗಳಿಗೆ ಕೀರ್ತಿ ತರಬೇಕು. ಕನ್ನಡಪ್ರಭ ಹೊರ ತಂದಿರುವ ಯುವ ಆವೃತ್ತಿಯ ಪ್ರಯೋಜನ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಅಕ್ಷರವು ಅರಿವನ್ನು ವಿಸ್ತರಿಸಿ ಆತ್ಮವಿಶ್ವಾಸ ಬೆಳೆಸುತ್ತದೆ. ಕನ್ನಡಪ್ರಭದ ಯುವ ಆವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ವಿಷಯವನ್ನು ಪ್ರಕಟಿಸಲಾಗುತ್ತಿದೆ. ಮಕ್ಕಳು ನಿತ್ಯ ಪತ್ರಿಕೆ ಓದಿ ಜ್ಞಾರ್ನಾಜನೆ ಹೆಚ್ಚಿಸಿಕೊಳ್ಳಬೇಕು ಎಂದರು.

ಕನ್ನಡಪ್ರಭ ಪತ್ರಿಕಾ ಏಜೆಂಟ ವೈ.ಸೋಮಶೇಖರ್‌, ಪ್ರಭಾರಿ ಮುಖ್ಯ ಶಿಕ್ಷಕಿ ಮಂಜುಳಾ, ಶಿಕ್ಷಕರಾದ ಗೋವಿಂದರಾಜು, ಗಂಗಾಧರ್‌, ನರಸಪ್ಪ, ಬೀರಲಿಂಗಯ್ಯ, ಜಲಜಾಕ್ಷಿ, ಆಶಾ ಹಾಗೂ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ