ದೊಡ್ಡಬಳ್ಳಾಪುರ: ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ "ಯುವ ಆಪ್ತಮಿತ್ರ " ತರಬೇತಿ ಶಿಬಿರದಲ್ಲಿ ಅಗ್ನಿ ಅವಘಡದ ಅಣಕು ಪ್ರದರ್ಶನ ನಡೆಸಲಾಯಿತು
ದೊಡ್ಡಬಳ್ಳಾಪುರ: ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ "ಯುವ ಆಪ್ತಮಿತ್ರ " ತರಬೇತಿ ಶಿಬಿರದಲ್ಲಿ ಅಗ್ನಿ ಅವಘಡದ ಅಣಕು ಪ್ರದರ್ಶನ ನಡೆಸಲಾಯಿತು.
ನಗರದ ಹೊರವಲಯದ ಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ನಡೆದ 6ನೇ ದಿನದ ತರಬೇತಿಯಲ್ಲಿ ಈ ತರಬೇತಿ ನಡೆಯಿತು.ಅಗ್ನಿಶಾಮಕ ದಳದ ಘಟಕ ಮುಖ್ಯಸ್ಥ ರಮೇಶ ಮಾತನಾಡಿ, ಯುವ ಆಪ್ತ ಮಿತ್ರ ಯೋಜನೆ ತರಬೇತಿ ಶಿಬಿರದ ದೊಡ್ಡಬಳ್ಳಾಪುರ ವಿಭಾಗೀಯ ಅಗ್ನಿಶಾಮಕ ಅಧಿಕಾರಿಗಳ ನೇತೃತ್ವದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ನೈಸರ್ಗಿಕ ಅಥವಾ ಮಾನವ ನಿರ್ಮಿತ ಅವಘಡಗಳು, ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳು ಮತ್ತು ಸುರಕ್ಷತಾ ಮಾಹಿತಿ ಬಗ್ಗೆ ಬೆಂಗಳೂರು ನಗರ ಮತ್ತು ರಾಯಚೂರು ರೋವರ್ಸ್ ಮತ್ತು ರೇಂಜರ್ಸ್ ಗಳಿಗೆ ಅಣಕು ಪ್ರದರ್ಶನ ನೀಡಲಾಯಿತು ಎಂದು ತಿಳಿಸಿದರು.
ಯುವ ಆಪ್ತಮಿತ್ರ ತರಬೇತಿಯ ರಾಜ್ಯ ಸಂಯೋಜಕರಾದ ಲತಾ ಮಂಜುನಾಥ್ ಮಾತನಾಡಿ, ಅವಘಡಗಳು ವಿಪತ್ತುಗಳು ಸಂಭವಿಸಿದಾಗ ರೋವರ್ಸ್ ಮತ್ತು ರೇಂಜರ್ಸ್ ಪ್ರಥಮ ಪ್ರತಿ ಸ್ವಂದಕರಾಗಿ ಯಾವರೀತಿ ನಿರ್ವಹಿಸಬಹುದು.
ನಗರ ಪ್ರದೇಶದಲ್ಲಿ ಸಾಮಾನ್ಯವಾಗಿ ನಡೆಯುವಂತಹ ಅಗ್ನಿ ಅವಘಡಗಳು ಅಪಘಾತಗಳು,ನೆರೆ ಹಾಗು ಪ್ರವಾಹಗಳು ನಡೆದಾಗ ಯಾವ ರೀತಿ ಪ್ರತಿಕ್ರಿಯಿಸಬೇಕು, ಅಗ್ನಿ ಅವಘಡ ಹೆಚ್ಚಾದಾಗ ಅಗ್ನಿ ಶಾಮಕ ದಳ ಹಾಗು ಆಂಬುಲೆನ್ಸ್ ಇವರುಗಳ ಜೊತೆ ಯಾವ ರೀತಿಯಾಗಿ ನಡೆದು ಕೊಳ್ಳಬೇಕು ಎಂಬುದು ತರಬೇತಿಯಲ್ಲಿ ತಿಳಿಸಿ ಕೊಡಲಾಗಿದೆ ಎಂದು ವಿವರಿಸಿದರು.
ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ, ವ್ಯಕ್ತಿ ಸಾವು ಬದುಕಿನ ಜೊತೆ ಹೋರಾಟ ನಡೆಸುವ ಸಂದರ್ಭದಲ್ಲಿ ಪೋಟೋ ವೀಡಿಯೋಗಳು ಮಾಡುವುದು ಬಿಟ್ಟು, ಪ್ರಥಮ ಚಿಕಿತ್ಸೆಯಾಗಲಿ ಅಥವಾ ಹತ್ತಿರದ ಅಂಬುಲೆನ್ಸ್ ಗೆ ಕರೆ ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಿ ಜೀವ ಉಳಿಸುವಂತಹ ಕೆಲಸ ಮಾಡಬೇಕು. ಮಾನವೀಯತೆ ಮೌಲ್ಯಗಳನ್ನು ಮರೆತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಎಷ್ಟು ವೀಕ್ಷಣೆಗಳು, ಲೈಕ್ ಬಂದಿದೆ ಎಂಬುದು ಮುಖ್ಯವಲ್ಲ. ಸಾವು ಬದುಕಿನ ಹೋರಾಟ ನಡೆಸುವ ವ್ಯಕ್ತಿ ಪ್ರಾಣ ಉಳಿಸುವುದೆ ಮಾನವೀಯತೆಯ ಮೌಲ್ಯ ಎಂದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಾದ ಅನಿಲ್ ಕುಮಾರ್, ಪ್ರಕಾಶ್ , ಕಾರ್ತಿಕ್ , ಲಕ್ಷ್ಮಣ್, ಕುಮಾರಸ್ವಾಮಿ, ರಾಜ್ಯ ತರಬೇತಿ ಕೇಂದ್ರ ವಾರ್ಡನ್ ಚಂದ್ರು, ಯುವ ಅಪ್ತ ಮಿತ್ರ ಸಹಾಯಕರಾದ ವೆಂಕಟೇಶ, ವಿನಯ್ ಹಾಗು ಶಿಬಿರಾರ್ಥಿಗಳು ಹಾಜರಿದ್ದರು.
7ಕೆಡಿಬಿಪಿ1-
ದೊಡ್ಡಬಳ್ಳಾಪುರದ ಬೆಸೆಂಟ್‌ಪಾರ್ಕ್‌ನಲ್ಲಿ ಯುವ ಆಪ್ತಮಿತ್ರ ತರಬೇತಿ ಶಿಬಿರದಲ್ಲಿ ಅಗ್ನಿ ಅವಘಡದ ಅಣಕು ಪ್ರದರ್ಶನ ನಡೆಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.