ಮಧ್ಯ ಕರ್ನಾಟಕದ ಐತಿಹಾಸಿದ ಕ್ಷೇತ್ರವಾದ ದಾವಣಗೆರೆಯ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವು ನಗರದ ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಡೇ ಶ್ರಾವಣ ಸೋಮವಾರ ಅದ್ಧೂರಿಯಾಗಿ ನೆರವೇರಿತು.
- ಕೆಂಪುಗೊಂದಿ ಹಾವಳಿ ಹೆಚ್ಚಾದೀತಲೇ... ಎಚ್ಚರ.. ಎಚ್ಚರ... ಎಚ್ಚರ...! ।
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಮ ರಾಮ ಅಂದು ನುಡಿದಿತ್ತಲೇ...ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ
ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೇಕೆಂಪುಗೊಂದಿ ಹಾವಳಿ ಹೆಚ್ಚಾದಿತಲೇ
ಎಚ್ಚರ ಎಚ್ಚರ ಎಚ್ಚರ...!ಮಧ್ಯ ಕರ್ನಾಟಕದ ಐತಿಹಾಸಿದ ಕ್ಷೇತ್ರವಾದ ದಾವಣಗೆರೆಯ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವು ನಗರದ ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಡೇ ಶ್ರಾವಣ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಶತಮಾನಗಳಿಂದಲೂ ದಾವಣಗೆರೆ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಲ್ಲಿ ಮೈಲಾರದ ಕಾರ್ಣೀಕದಂತೆಯೇ ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ಸ್ವಾಮಿ ಕಾರ್ಣೀಕವು ತನ್ನ ಕಾರ್ಣೀಕದ ಮೂಲಕ ರಾಜ್ಯ, ರಾಷ್ಟ್ರ, ಜಗತ್ತಿನ ಭವಿಷ್ಯದ ಸುಳಿವು, ಅಪಾಯದ ಬಗ್ಗೆ ಎಚ್ಚರಿಕೆ, ರಾಜಕೀಯ ಸ್ಥಿತ್ಯಂತರಗಳ ಬಗ್ಗೆ ಕುರುಹು ನೀಡುವ ಕಾರ್ಣೀಕವೆಂದೇ ಜನಜನಿತ. ಕಡೇ ಶ್ರಾವಣ ಸೋಮವಾರದ ಸಂಜೆ ನಂತರ ಸಹಸ್ರಾರು ಭಕ್ತರ ಸಮಕ್ಷದಲ್ಲಿ ಸದ್ದಲೇ ಎನ್ನುತ್ತಿದ್ದಂತೆ ಮೊಳಗುವ ಕಾರ್ಣೀಕ ನಂತರ ಸದ್ದು ಮಾಡುತ್ತದೆ.ಅದರಂತೆ ಈ ಸಲದ ಕಾರ್ಣಿಕ, ರಾಮ ರಾಮ ಅಂದು ನುಡಿದಿತ್ತಲೇ ಎನ್ನುವ ಮೂಲಕ ದೇವರ ಸ್ಮರಣೆ, ಧರ್ಮ ಮತ್ತು ಸತ್ಯದ ಮಾರ್ಗವನ್ನು ಜನರೆಂದಿಗೂ ಮರೆಯಬಾರದೆಂಬ ಸಂದೇಶವನ್ನು ಕಾರ್ಣೀಕರ ಮೂಲಕ ನೀಡಲಾಗಿದೆ. ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ ಅಂದರೆ ಶೃಂಗಾರ, ಸೌಂದರ್ಯ ಮತ್ತು ಸಮೃದ್ಧಿಯ ಸಂಕೇತವಾದ ಸ್ಥಳದಲ್ಲಿ ಮುತ್ತೈದೆಯರು ಸೇರಿಕೊಂಡು, ಶುಭ ಕಾರ್ಯವನ್ನು ನೆರವೇರಿಸುವ, ಕುಟುಂಬಗಳಲ್ಲಿ ಶಾಂತಿ, ಸಮಾಧಾನ, ಸಮೃದ್ಧಿ, ನೆಮ್ಮದಿ ನೆಲೆಸುವಂತಹ ಸುಳಿವು ನೀಡುವುದಾಗಿದೆ.
ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆಯೆಂದರೆ ಆನೆಯನ್ನು ಹಿಂದೂ ಸಂಸ್ಕೃತಿಯಲ್ಲಿ ಶಕ್ತಿಗೆ, ಬುದ್ಧಿವಂತಿಕೆಗೆ, ಐಶ್ವರ್ಯ, ಗಾಂಭೀರ್ಯ, ಸ್ಥಿರತೆ, ಶುಭದ ಸಂಕೇತವಾಗಿ, ವಿಘ್ನ ನಿವಾರಕ ಗಣೇಶನ ರೂಪದಲ್ಲಿ ಪೂಜಿಸಲಾಗುತ್ತದೆ. ಅದೇ ರೀತಿ ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ, ಆನೆಯ ಬಲವು ಜನರಿಗೆ ಸಿಗಲಿದೆಯೆಂದರೆ ಜನರಿಗೆ, ರಾಜ್ಯಕ್ಕೆ, ದೇಶಕ್ಕೂ ಆನೆಯ ಆಶೀರ್ವಾದವೆಂದರೆ, ಬಲ, ಸಮೃದ್ಧಿ ಬರುತ್ತದೆಂದ ಸಂಕೇತ ನುಡಿಗಳು ಇವೆನ್ನಲಾಗುತ್ತಿದೆ.ಕೆಂಪಗೊಂದಿ ಹಾವಳಿ ಹೆಚ್ಚಾದೀತಲೆಯೆಂಬುದು ಕೆಂಪು ಹಾಗೂ ಹಾವಳಿ ಎಂಬ ಪದಗಳು ಜಗತ್ತಿನಲ್ಲಿ ಕೆಲವರು ಸಂಘರ್ಷ, ಅಶಾಂತಿ, ಅಪಾಯ, ತೀವ್ರ ಬದಲಾವಣೆಯ ಸಂಕೇತವಾಗಿ ಅರ್ಥೈಸಬಹುದು. ನಿರ್ದಿಷ್ಟ ಘಟನೆ ಅಥವಾ ಅನಾಹುತದ ಮುನ್ಸೂಚನೆ ಇದೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ, ಕೆಂಪು ಬಣ್ಣ, ಗೊಂದಿಯೆಂದರೆ ಕೀಟಗಳೆನ್ನಬಹುದು. ಹಾಗೆ ನೋಡಿದರೆ ಭಾರತದ ಮಟ್ಟಿಗೆ ಕೆಂಪು ಅಂದರೆ ಚೀನಾ, ಗೊಂದಿಯೆಂದರೆ ಚೀನಿಗರೆಂದು ಅರ್ಥೈಸಬಹುದು. ಕೆಂಪುಗೊಂದಿ ಹಾವಳಿ ಹೆಚ್ಚಾದೀತಲೆ ಎಂಬುದು ನೆರೆಯ ಚೀನಾದಿಂದ ಭಾರತಕ್ಕೆ ಅಪಾಯದ ಸುಳಿವು ಎಂದರೂ ತಪ್ಪಲ್ಲ ಎನ್ನುವುದು ಹಿರಿಯರ ಅರ್ಥೈಸುವಿಕೆಯಾಗಿದೆ.
ಕಾರ್ಣೀಕದ ಕೊನೆಗೆ ಎಚ್ಚರ, ಎಚ್ಚರ, ಎಚ್ಚರ...! ಎಂಬುದಾಗಿ ಮೂರು ಸಲ ಹೇಳುವುದರೊಂದಿಗೆ ಸದಾ ಜನರು, ರಾಜ್ಯ, ದೇಶದ ನಾಯಕರು, ಜಾಗರೂಕರಾಗಿರಬೇಕು, ಧರ್ಮ, ನೀತಿ ಪಾಲಿಸಬೇಕು. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳನ್ನು ವಿವೇಕದಿಂದ, ವಿವೇಚನೆಯಿಂದ ಗಮನಿಸುತ್ತಿರಬೇಕೆಂಬ ಎಚ್ಚರಿಕೆಯ ಸಂದೇಶಾಗಿಯೂ ಆನೆಕೊಂಡದ ಮರಡಿ ಶ್ರೀ ಬಸವೇಶ್ವರ ಸ್ವಾಮಿಯ ಶ್ರಾವಣ ಕಡೇ ಸೋಮವಾರದ ಕಾರ್ಣೀಕವನ್ನು ಉಲ್ಲೇಖಿಸಲಾಗುತ್ತಿದೆ.ಶ್ರಾವಣದ ಕಡೇ ಸೋಮವಾರದಂದು ಆನೆಕೊಂಡ ಮರಡಿ ಶ್ರೀ ಬಸವೇಶ್ವರ ಸ್ವಾಮಿ ಜಾತ್ರೆ, ಕಾರ್ಣೀಕದ ವೇಳೆ ಹಳೆ ಬಾತಿ, ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿಗಳು, ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ, ವೆಂಕಾ ಭೋವಿ ಕಾಲನಿ ಮತ್ತು ಶ್ರೀ ಕನಕ ದುರ್ಗಾದೇವಿ, ಕೊರಮರ ಕಾಲನಿಯ ಶ್ರೀ ವೆಂಕಟೇಶ್ವರ ದೇವರು, ಕೊರಚರಹಟ್ಟಿಯ ಶ್ರೀ ಬಸವಾಪಟ್ಟಣ ದುರುಗಮ್ಮ, ಎಸ್ಸೆಂ ಕೃಷ್ಣ ನಗರದ ಶ್ರೀ ಗಾಳಿ ದುರ್ಗಮ್ಮ, ಕುರುಬರಕೇರಿ ಶ್ರೀ ಅರಿಕೇರಮ್ಮ ದೇವಿ, ಗಾಂಧಿ ನಗರದ ಶ್ರೀ ಮಲ್ಲಾಡಿ ಚೌಡೇಶ್ವರಿ ದೇವಿ, ಎಸ್ಪಿಎಸ್ ನಗರದ ಶ್ರೀ ಶ್ರೀ ಕುಕ್ಕವಾಡೇಶ್ವರಿ ದೇವಿ, ಎಸ್ಪಿಎಸ್ ನಗರದ ಶ್ರೀ ಹುಲಿಗೆಮ್ಮ ದೇವಿ, ಎಸ್ಸೆಸ್ ಬಡಾವಣೆ ಶ್ರೀ ಭೂತಪ್ಪ ದೇವರು, ಎಲೆಬೇತೂರು ಶ್ರೀ ದೇವಿ ದುರುಗಮ್ಮ, ಮುದ್ದಾ ಬೋವಿ ಕಾಲನಿ ಶ್ರೀ ವೆಂಕಟೇಶ್ವರ ದೇವರು, ಬಸಾಪುರದ ಶ್ರೀ ಗೋಚಂದ್ರ ಮಾರಮ್ಮ, ಮುದ್ದಾಭೋವಿ ಕಾಲನಿ ಶ್ರೀ ನೀರು ಮನೆ ಯಲ್ಲಮ್ಮ ದೇವರು ಸೇರಿದಂತೆ ಸಮಸ್ತ ದೇವರ ಸಮಕ್ಷಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಕಾರ್ಣೀಕ ನೆರವೇರಿತು. ಸಹಸ್ರಾರು ಭಕ್ತರು ತದೇಕ ಚಿತ್ತದಿಂದ ಕಾರ್ಣೀಕ ನುಡಿಗಳಾಗುತ್ತಲೇ ಹರ್ಷೋದ್ಘಾರದಿಂದ ಘೋಷಣೆ ಕೂಗಿದರು.
- - --7ಕೆಡಿವಿಜಿ9, 10, 11: ದಾವಣಗೆರೆಯ ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ಸ್ವಾಮಿಯ ಶ್ರಾವಣ ಕಡೇ ಸೋಮವಾರದ ಕಾರ್ಣೀಕ ಆಲಿಸಲು ಸೇರಿದ್ದ ಸಹಸ್ರಾರು ಭಕ್ತರ ಸಮಕ್ಷದಲ್ಲಿ ಸಾಗುತ್ತಿರುವ ದೇವರ ಪಲ್ಲಕ್ಕಿಗಳು.