ಕಲ್ಲುಕಂಬದಲ್ಲಿ ಸಹಕಾರ ಸಂಘದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ

KannadaprabhaNewsNetwork |  
Published : Sep 28, 2025, 02:00 AM IST
ಕುರುಗೋಡು 02 ತಾಲ್ಲೂಕಿನ  ಕಲ್ಲುಕಂಬ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಆಚರಣದಲ್ಲಿ ಬುಧವಾರ  ಮಹಾಜನ ಸಭೆಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹೊಸ ಸದಸ್ಯರಿಗೆ ₹13.12 ಲಕ್ಷ ಹಾಗೂ ₹32.69 ಲಕ್ಷ ವ್ಯವಹಾರ ಸಾಲ ವಿತರಿಸಲಾಗಿದೆ.

ಕುರುಗೋಡು: ಸೊಸೈಟಿಯಿಂದ 720 ಸದಸ್ಯರಿಗೆ ₹11.61 ಕೋಟಿ ಬೆಳೆ ಸಾಲ ನೀಡಲಾಗಿದ್ದು, ಹೊಸ ಸದಸ್ಯರಿಗೆ ₹13.12 ಲಕ್ಷ ಹಾಗೂ ₹32.69 ಲಕ್ಷ ವ್ಯವಹಾರ ಸಾಲ ವಿತರಿಸಲಾಗಿದೆ. ಹೊರಬಾಕಿ ₹12.28 ಕೋಟಿ ಇದ್ದು ಶೇ.95 ವಸೂಲಾತಿ ಸಾಧನೆ ಮಾಡಿದೆ ಎಂದು ಸೊಸೈಟಿ ಮುಖ್ಯ ಕಾರ್ಯದರ್ಶಿ ಚನ್ನಬಸಪ್ಪ ಮಾಹಿತಿ ನೀಡಿದರು.ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಚರಣದಲ್ಲಿ ಬುಧವಾರ ಆಯೋಜಿಸಿದ್ದ ಮಹಾಜನ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಆದೇಶದಂತೆ ₹3 ಲಕ್ಷ ಒಳಗಿನ ಬೆಳೆ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗುತ್ತಿದೆ. ಈವರೆಗೂ ಸಂಘದಲ್ಲಿ ಒಟ್ಟು 2,969 ಸದಸ್ಯರಿದ್ದು ಷೇರು ಬಂಡವಾಳ ₹1.46 ಕೋಟಿ ಹಾಗೂ ಸರ್ಕಾರದ ₹1.83 ಲಕ್ಷ ಸೇರಿ ಒಟ್ಟು ₹1.48 ಕೋಟಿ ಇದೆ. ಜತೆಗೆ ಕಾಯ್ದಿಟ್ಟ ಹಾಗೂ ಇತರ ನಿಧಿ ಸೇರಿ ಒಟ್ಟು ₹1.33 ಕೋಟಿ ಹೊಂದಿದೆ. 968 ಜನರನ್ನು ಯಶಸ್ವಿ ಯೋಜನೆ ಅಡಿ ನೋಂದಾಯಿಸಲಾಗಿದೆ ಎಂದರು.

ಯೂರಿಯ ಗೊಬ್ಬರದ ಅಭಾವಕ್ಕೆ ಕಾರಣ ಹಾಗೂ ಸೊಸೈಟಿ ನಷ್ಟದ ಮೊತ್ತದ ಬಗ್ಗೆ ಮಾಹಿತಿ ತಿಳಿಸುವಂತೆ ರೈತ ನಾಗರಾಜ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ ಸಿಬ್ಬಂದಿ ಗಿರಿಮಲ್ಲಪ್ಪ ಯೂರಿಯ ಸಕಾಲಕ್ಕೆ ಬಾರದ ಹಿನ್ನೆಲೆ ಸಮಸ್ಯೆ ಆಗುತ್ತಿತ್ತು. ಸದ್ಯ ರೈತರಿಗೆ ಅಗತ್ಯ ದಾಸ್ತಾನು ಇದೆ. ಜೊತೆಗೆ ಈವರೆಗೂ ಸಂಘ ಸುಮಾರು ₹29.62 ಲಕ್ಷ ನಷ್ಟದಲಿದೆ ಎಂದರು.

ಈ ಹಿಂದೆ ಲಾಭದಲ್ಲಿದ್ದ ಸಂಘದ ಹಣ ಏನಾಯಿತು ಎಂದು ಎನ್.ಎರ್ರಿಸ್ವಾಮಿ ಪ್ರಶ್ನಿಸಿದರು. ಲಾಭದ ಹಣವನ್ನು ಆಯಾ ವರ್ಷವೇ ಎಲ್ಲರಿಗೂ ಹಂಚಲಾಗಿದೆ. ಕೇಂದ್ರದ ₹3, ರಾಜ್ಯದ ₹5 ಸೇರಿ ಒಟ್ಟು ₹8 ಬಡ್ಡಿ ಹಣ ನೀಡುತ್ತಿವೆ. ಆದರೆ ಬ್ಯಾಂಕ್ ನಮಗೆ ಅಧಿಕವಾಗಿ ಬಡ್ಡಿ ಹಾಕುವುದರಿಂದ ನಷ್ಟವಾಗಿದೆ. ಈ ಬಗ್ಗೆ ಕೋರ್ಟ್ ಮೊರೆ ಕೂಡ ಈಗಾಗಲೇ ಸೊಸೈಟಿಗಳು ಹೋಗಿವೆ ಎಂದರು.

ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷ ವಾಯುಪುತ್ರ, ನಿರ್ದೇಶಕರಾದ ಹರಗಿಣದೋಣಿ ಮಂಜು, ಕಡ್ಲೆ ರಮೇಶ, ಹಳೆಕೋಟೆ ಬಸವ, ಎನ್ ನಾಗರಾಜ್, ಎ ಮಲ್ಲಿಕಾರ್ಜುನ, ಸಿಬ್ಬಂದಿ ನಿರ್ಮಲ್ ಕುಮಾರ್, ಕಡ್ಲೆ ಹೊನ್ನುರಪ್ಪ ಇದ್ದರು.

ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಆಚರಣದಲ್ಲಿ ಬುಧವಾರ ಮಹಾಜನ ಸಭೆಯಲ್ಲಿ ಮಾತನಾಡಿದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ