ಜಿಪಂ, ತಾಪಂ ಮೀಸಲಾತಿ: ಹಿಂದುಳಿದ ವರ್ಗಕ್ಕೆ ಅನ್ಯಾಯ

KannadaprabhaNewsNetwork |  
Published : Oct 14, 2026, 01:45 AM IST
12ಕೆಡಿವಿಜಿ4-ದಾವಣಗೆರೆಯಲ್ಲಿ ಸೋಮವಾರ ಕುರುಬ ಸಮಾಜದಿಂದ ಜಿಪಂ, ತಾಪಂ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದ್ದನ್ನು ಖಂಡಿಸಿ ನಡೆದ ಸಭೆಯಲ್ಲಿ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಜಿಲ್ಲಾ ಕುರುಬರ ಸಮಾಜ ಒಕ್ಕೊರಲಿನಿಂದ, ಪಕ್ಷಾತೀತವಾಗಿ ಖಂಡಿಸಿದ್ದಲ್ಲದೇ ಕಾನೂನು ಹೋರಾಟ ನಡೆಸಲು ನಿರ್ಣಯಿಸಿದೆ.

- ಮೀಸಲಾತಿ ಪಟ್ಟಿ ಬಗ್ಗೆ ಆಕ್ಷೇಪ: ಕಾನೂನು ಹೋರಾಟಕ್ಕೆ ಸಜ್ಜಾಯ್ತು ಕುರುಬ ಸಮಾಜ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಜಿಲ್ಲಾ ಕುರುಬರ ಸಮಾಜ ಒಕ್ಕೊರಲಿನಿಂದ, ಪಕ್ಷಾತೀತವಾಗಿ ಖಂಡಿಸಿದ್ದಲ್ಲದೇ ಕಾನೂನು ಹೋರಾಟ ನಡೆಸಲು ನಿರ್ಣಯಿಸಿದೆ.

ನಗರದ ಕುರುಬರ ಹಾಸ್ಟೆಲ್‌ನಲ್ಲಿ ಸೋಮವಾರ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೈ.ವಿರೂಪಾಕ್ಷಪ್ಪ ಅಧ್ಯಕ್ಷತೆ ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡರು, ಜಿಪಂ, ತಾಪಂ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯ ಮಾಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಮುಖಂಡ ಬಿ‌.ಎಂ‌.ಸತೀಶ ಕೊಳೇನಹಳ್ಳಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂದಿದೆ. ಆದರೆ, ಎಸ್‌ಸಿ-ಎಸ್‌ಟಿಗೆ ಶೇ.18ರಷ್ಟು ಮೀಸಲಾತಿ ನಿಗದಿಯಾಗಿದೆ. ಜನಸಂಖ್ಯೆಯಲ್ಲಿ ಯಾವುದು ಹೆಚ್ಚು ಅಂತಹ ಮೀಸಲಾತಿ ಜಾರಿ ಮಾಡಬೇಕೆಂಬ ಕಾಯ್ದೆಯೇ ಇದೆ. ಹಾಗಾಗಿ, ಕಾಯ್ದೆ ತಿದ್ದುಪಡಿಗೆ ಹೋರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಿಂದುಳಿದ ವರ್ಗಗಳು ಒಗ್ಗೂಡಿ ಹೋರಾಟ ಮಾಡಬೇಕು. ಇಲ್ಲದಿದ್ದರೆ ಜಿಪಂ, ತಾಪಂ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಾನಮಾನ, ಅವಕಾಶಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಸಮಾಜದ ಯುವ ಮುಖಂಡ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ, ಯಾವ್ಯಾವ ಕ್ಷೇತ್ರಗಳಲ್ಲಿ ಮೀಸಲಾತಿ ಪುನರಾವರ್ತನೆ ಆಗಿದೆಯೋ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ‌ಮಾಡಬಹುದು. ಹಿಂದುಳಿದ ವರ್ಗಗಳು ಒಟ್ಟಾಗಿ ಈ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುವತ್ತ ಗಮನಹರಿಸಬೇಕು ಎಂದು ತಿಳಿಸಿದರು.

ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ಹಿಂದುಳಿದ ವರ್ಗಗಳು ತಮಗೆ ಆಗುತ್ತಿರುವ ಅನ್ಯಾಯ ಖಂಡಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಅನ್ಯಾಯ ಆಗುತ್ತದೆ. ರಾಜ್ಯ ಸರ್ಕಾರ ಹೊರಡಿಸಿದ ಜಿಪಂ, ತಾಪಂ ಮೀಸಲಾತಿ ಪಟ್ಟಿಗೆ ನಮ್ಮ ವಿರೋಧವಿದೆ. ಜಿಲ್ಲೆಯಲ್ಲಿ 29 ಜಿಪಂ ಕ್ಷೇತ್ರದಲ್ಲಿ ಕೇವಲ 2 ಹಿಂದುಳಿದ ವರ್ಗ(ಅ) ಮೀಸಲಾಗಿದೆ. ಲೆಕ್ಕಾಚಾರದ ಪ್ರಕಾರ ಕನಿಷ್ಠ 4 ಸ್ಥಾನಗಳ ನೀಡಬೇಕು ಎಂದರು.

ಯುವ ವಕೀಲ ಲೋಕಿಕೆರೆ ಪ್ರದೀಪ, ಸಮಾಜದ ಹಂಗಾಮಿ ಅಧ್ಯಕ್ಷ ಪರಶುರಾಮಪ್ಪ, ಹಾಲೇಕಲ್ಲು ವೀರಣ್ಣ, ಎಚ್.ಜಿ.ಸಂಗಪ್ಪ ಪೈಲ್ವಾನ್, ಎನ್.ಜೆ.ನಿಂಗಪ್ಪ, ಬಿ.ಬಿ.ಮಲ್ಲೇಶ, ಅಣಬೇರು ಶಿವಮೂರ್ತಿ, ಪ್ರೊ‌.ಯಲ್ಲಪ್ಪ, ಹರಿಹರದ ಹಾಲೇಶಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಶಂಕರಮೂರ್ತಿ, ಹದಡಿ ಮಾಲತೇಶ, ಹದಡಿ ವಿಜಯಕುಮಾರ, ಕಕ್ಕರಗೊಳ್ಳ ಗುರುಶಾಂತಪ್ಪ, ಹರಿಹರ ಅಣ್ಣೇಶ,‌ ದೀಟೂರು ಚಂದ್ರು, ಮನು, ಭಗತ್ ಸಿಂಹ, ಗಂಗನರಸಿ ರೇವಣಸಿದ್ದಪ್ಪ, ಲೋಕಿಕೆರೆ ಷಣ್ಮುಖಪ್ಪ ಇತರರು ಮಾತನಾಡಿದರು.

ಮುಖಂಡರಾದ ಹದಡಿ ಜೆ.ಸಿ.ನಾಗರಾಜ, ಶಿಕ್ಷಕ ಹದಡಿ ಗಣೇಶ, ದೇವಿಕುಮಾರ, ಹದಡಿ ಮಾಲತೇಶ, ಮಲೇಬೆನ್ನೂರು ಕೆ‌.ಪಿ.ಗಂಗಾಧರ, ಪಿ.ಎಸ್.ಶಿವಕುಮಾರ, ಬಲ್ಲೂರು ವಿರೂಪಾಕ್ಷಪ್ಪ,‌ ಮುದಹದಡಿ ನಾಗರಾಜ, ಮಾಲತೇಶ್, ಹದಡಿ ಹಾಲೇಶ ಇತರರು ಇದ್ದರು. ಮೀಸಲಾತಿಯಲ್ಲಿ ಆದ ಅನ್ಯಾಯದ ವಿರುದ್ಧ ಹೋರಾಡಲು ಕಾನೂನು ಹೋರಾಟ ಸಮಿತಿ ರಚಿಸಲು, ಬೃಹತ್ ಹೋರಾಟ ದ ರೂಪುರೇಷೆ ತಯಾರಿಸಲು ಸಭೆ ನಿರ್ಣಯಿಸಿತು.

- - -

(ಕೋಟ್‌) ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಸಮಾಜ ಒಕ್ಕೊರಲಿನಿಂದ ಖಂಡಿಸುತ್ತದೆ. ಮೀಸಲು, ಸಾಮಾನ್ಯ ಕ್ಷೇತ್ರಗಳಲ್ಲಿ ಯಾರಾದರೂ ಒಬ್ಬರು ಸಮಾಜದವರು ಸ್ಪರ್ಧಿಸಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡೋಣ. ಪಕ್ಷಾತೀತವಾಗಿ ನಮ್ಮ ಸಮಾಜದ ಪರ ಕೆಲಸ ಮಾಡೋಣ.

- ವೈ.ವಿರೂಪಾಕ್ಷಪ್ಪ, ದಾವಣಗೆರೆ.

- - -

-12ಕೆಡಿವಿಜಿ4: ಸಭೆಯಲ್ಲಿ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಮಾಧಾನ ಬದಿಗಿಟ್ಟು ಲಿಂಬಿಕಾಯಿ ಪರ ಪ್ರಚಾರ: ಕುಬೇರಪ್ಪ
ಗೊಂಬೆಗಳ ಪ್ರದರ್ಶನ ಸಂಸ್ಕೃತಿ, ಸಂಸ್ಕಾರಗಳ ಭಾವನಾತ್ಮಕ ಬೆಸುಗೆ: ಶಕುಂತಲಾ ಆನಂದ್