‘ಕಾಂಗ್ರೆಸ್‌ಗೆ ಇಲ್ಲಿ ದಶಕವೂ ಇಲ್ಲ, ಅಲ್ಲಿ ಶತಕವೂ ಇಲ್ಲ’

KannadaprabhaNewsNetwork |  
Published : Jun 30, 2024, 12:47 AM ISTUpdated : Jun 30, 2024, 05:36 AM IST
 ಸಿಕೆಬಿ-1 ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಂಡರಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಡಾ.ಕೆ.ಸುಧಾಕರ್ ಮಾತನಾಡಿದರು | Kannada Prabha

ಸಾರಾಂಶ

ಒಂದೇ ವರ್ಷದಲ್ಲಿ ಕಾಂಗ್ರೇಸ್ ಪಕ್ಷವನ್ನು ಜನ ತಿರಸ್ಕರಿಸಿದ್ದು ಏಕೆಂದುನ್ನು ಕಾಂಗ್ರೆಸ್‌ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಆಂಧ್ರಪ್ರದೇಶದ ಚುನಾವಣೆ ಮಾದರಿಯಲ್ಲಿ ಫಲಿತಾಂಶ ಬರಲಿದೆ.

ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ದಶಕ ಇಲ್ಲ, ಅಲ್ಲಿ ಶತಕ ಇಲ್ಲ. ಇದು ಕಾಂಗ್ರೆಸ್ ಸ್ಥಿತಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರುನಗರದ

ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಂಡರಿಂದ ಶನಿವಾರ ಏರ್ಪಡಿಸಿದ್ದ ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿ, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಕೇವಲ 9 ಸ್ಥಾನ ನೀಡಿ ಒಂದಂಕಿ ದಾಟಿಸಲಿಲ್ಲ. ದೇಶದಲ್ಲಿ 99 ಸ್ಥಾನಗಳನ್ನು ನೀಡಿ ಎರಡಂಕಿ ದಾಟಿಸಲಿಲ್ಲ ಎಂದು ಲೇವಡಿ ಮಾಡಿದರು.

ಒಂದೇ ವರ್ಷದಲ್ಲಿ ತಿರಸ್ಕಾರ

ಒಂದೇ ವರ್ಷದಲ್ಲಿ ಕಾಂಗ್ರೇಸ್ ಪಕ್ಷವನ್ನು ಜನ ತಿರಸ್ಕರಿಸಿದ್ದು ಏಕೆ? ನಮ್ಮ ತಪ್ಪೇನು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಕ್ಕದ ಆಂಧ್ರಪ್ರದೇಶದ ಚುನಾವಣೆ ಉತ್ತಮ ಉದಾಹರಣೆಯಾಗಿದೆ. ಅಲ್ಲಿ ಆಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ 11 ಸ್ಥಾನಗಳನ್ನು ನೀಡಿ ಜನ ತಿರಸ್ಕರಿಸಿದ್ದಾರೆ. ಅದೇ ರೀತಿ ಇಲ್ಲಿ ನಾಳೆ ವಿಧಾನಸಭೆಗೆ ಚುನಾವಣೆ ನಡೆದರೂ ಸಹಾ 180 ಸ್ಥಾನಗಳಿಂದ ಎನ್‌ಡಿಎ ಗೆಲ್ಲುತ್ತದೆ ಎಂದರು.

ತಾವು ಶಾಸಕನಾಗಿದ್ದಾಗ ಹೆಚ್.ಎನ್.ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರು ಕೃಷಿಗೆ ಯೋಗ್ಯವಿಲ್ಲಾ ಎಂದು ಐಐಸಿ ವರದಿ ಬಂದಿದ್ದರಿಂದ ಬೋಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಹೆಚ್.ಎನ್.ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರನ್ನು ಮೂರು ಬಾರಿ ಸಂಸ್ಕರಿಸಿ ಹರಿಸಬೇಕೇಂದು ಬಜೆಟ್ ನಲ್ಲಿ ಹಣ ಮೀಸಲಿರಿಸಿದ್ದೆವು. ಆದರೆ ಈಗಿನ ಸರ್ಕಾರ ಅದನ್ನು ಮಾಡುತ್ತಿಲ್ಲಾ. ಇದು ಯಾರಪ್ಪನ ಜಾಗೀರು.ಕೊಳಚೆ ನೀರು ಸಂಸ್ಕರಿಸಿ ಜನರಿಗೆ ನೀರು ಕೊಡೋ ದುಸ್ಥಿತಿ ಇದೆ ಎಂದು ಆಕ್ರೋಷ ವ್ಯೆಕ್ತ ಪಡಿಸಿದರು.

25 ಸಾವಿರ ನಿವೇಶನ

ಕೋಚಿಮುಲ್‌ ವಿಭಜನೆ ರದ್ದುಪಡಿಸಿ ಚಿಕ್ಕಬಳ್ಳಾಪುರ ಜನತೆಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ 750 ಎಕರೆಯಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ 25 ಸಾವಿರ ಬಡವರಿಗೆ ಉಚಿತ ನಿವೇಶನ ಹಂಚಲು ಸಿದ್ಧತೆ ಮಾಡಿದ್ವಿ ತಾವು ಹಂಚಿದಂತೆ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 25 ಸಾವಿರ ನಿವೇಶನ ಹಂಚಿ ನೀವು ಗಂಡಸ್ರು ಎಂದು ತೋರಿಸಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.

2023ರಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಚುನಾವಣೆಯಲ್ಲಿ ಅನೀರಿಕ್ಷಿತ ಸೋಲು ಆದ ಮೇಲೆ ಮತ್ತೆ ಒಂದು ವರ್ಷದಲ್ಲಿ ಲೋಕಸಬೆಗೆ ಆಯ್ಕೆ ಮಾಡಿ ಕಳುಹಿಸಿ ಕೊಟ್ಟ ನಿಮ್ಮ ಪಾದಗಳಿಗೆ ಸಾಸ್ಟಾಂಗ ನಮಸ್ಕಾರಗಳು. ಸೋತಾಗ ನನಗೆ ಪೋಷಕರನ್ನು ಕಳೆದುಕೊಂಡಂತೆ ಆಗಿತ್ತು. ಈಗ ಮತ್ತೆ ಪೋಷಕರು ಸಿಕ್ಕಂತಾಗಿದೆ ಎಂದರು. ಸಮಾವೇಶದಲ್ಲಿ ಗಣ್ಯರ ಉಪಸ್ಥಿತಿ

ಈ ವೇಳೆ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್,ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ,ಶಾಸಕರಾದ ಬಿ.ಎನ್.ರವಿಕುಮಾರ್,ಧೀರಜ್ ಮುನಿರಾಜು, ಮಾಜಿ ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಎಂ.ಶಿವಾನಂದ್,ಎಂ.ರಾಜಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ವಿ.ರಾಮಲಿಂಗಪ್ಪ,ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿ.ಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತ ಮುನಿಯಪ್ಪ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮತ್ತಿತರರು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!